ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ..

ಗಂಗಾವತಿ. ಕಲ್ಮಠದ ಪರಮಪೂಜ್ಯ ಶಿವಯೋಗಿ ವರಣ್ಯ ಲಿಂಗಕ್ಯ ಶ್ರೀ ಕೊಟ್ಟೂರೇಶ್ವರ ಮಹಾಶಿವಯೋಗಿಗಳವರ 104ನೇ ವರ್ಷದ ಸ್ಮರಣೋತ್ಸವದ ಹಾಗೂ ಆರೋಡ ಜ್ಯೋತಿ ಶ್ರೀ ಸಿದ್ಧಾರೂಢ ಸ್ವಾಮಿಗಳು ಹುಬ್ಬಳ್ಳಿ ಅವರ ಪುರಾಣ ಪ್ರವಚನ ಮತ್ತು ಶರಣ ಸಂಸ್ಕೃತಿ ಸಮಾರಂಭವನ್ನು ಮಂಗಳವಾರದಂದು ಶ್ರೀ ಕೊಟ್ಟೂರೇಶ್ವರ ಪುರಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು ಕಂಪ್ಲಿ . ಕಲ್ಮಠದ ಶ್ರೀ ಅಭಿನವ ಪ್ರಭು ಮಹಾಸ್ವಾಮಿಗಳು. ಸೂ ಳೇಕಲ. ಬೃಹನ್ಮಠದ ಶ್ರೀ ಪದ್ಮಾಕ್ಷರಯ್ಯ ಶರಣರು. ಅರಳಿಹಳ್ಳಿ ಶ್ರೀ ರೇವಣಸಿದ್ದಯ್ಯ ತಾತನವರು ಹಾಗೂ ಕರ್ನಾಟಕ ಕಲಾಶ್ರೀ ಪುರಾಣ ಪ್ರವಚನ ಪ್ರವೀಣ ಪಂಡಿತ್ ಶಿವರಾಜ ಶಾಸ್ತ್ರಿಗಳು ಹಾಗೂ ಕಲ್ಮಠದ ಡಾಕ್ಟರ್ ಕೊಟ್ಟೂರು ಮಹಾಸ್ವಾಮಿಗಳು ಸಮಾರಂಭಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ. ಪುರಾಣ ಪ್ರವಚಕರಾದ ಶಿವರಾಜ್ ಶಾಸ್ತ್ರಿಗಳು. ಶ್ರೀ ಸಿದ್ದಾರೋಡ ಸ್ವಾಮಿಗಳವರ ಜನನ. ಬಾಲ್ಯ. ಆಧ್ಯಾತ್ಮಿಕ ಸೇರಿದಂತೆ ಸಾಕ್ಷಾತ್ಕಾರ ಕುರಿತು ಪ್ರವಚನ ನೀಡಿದರು.. ಸೂಳೇ ಕಲ್ ಪದ್ಮಾಕ್ಷರ ಶರಣರು ಆಶೀರ್ವಚನ ನೀಡಿ ವ್ಯಕ್ತಿಯಲ್ಲಿನ ಕೆಟ್ಟ ದುರಾಲೋಚನೆಗಳು ಅಜ್ಞಾನ ಅಂದಕಾರ ಅಹಂಕಾರ ಇವುಗಳಿಂದ ದೂರ ಇರುವಲ್ಲಿ ಮಹಾ ಸಾಧಕರ ಜೀವನ ಅವರ ಆಧ್ಯಾತ್ಮಿಕ ದೈವತ್ವ ಸಾಕ್ಷಾತ್ಕಾರ ಸೇರಿದಂತೆ ಗುಣಮಟ್ಟದ ಸಂಸ್ಕಾರಗಳನ್ನು ಬೆಳೆಸಿಕೊಳ್ಳಲು ಪುರಾಣ ಪ್ರವಚನಗಳು ಅತ್ಯಂತ ಸಹಕಾರಿಯಾಗಿವೆ ಎಂದು ತಿಳಿಸಿದರು.. ಅಪಾರ ಭಕ್ತಾದಿಗಳು ಪುರಾಣ ಪ್ರವಚನದಲ್ಲಿ ಪಾಲ್ಗೊಂಡಿದ್ದರು..

ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ..