ಗದಗ ವೀರೇಶ್ವರ ಪುಣ್ಯಶ್ರಮದ ಶ್ರೀ ಕಲ್ಲಯ್ಯಜ್ಜ ಅವರ 2850ನೇ ತುಲಾಭಾರ...

ಕೊಪ್ಪಳ. ತಾಲೂಕಿನ ಹಿಟ್ನಾಳ್ ಗ್ರಾಮದ ಬೊಗಳ ಮುಖಿ ಅಂಬಾದೇವಿ ದೇವಸ್ಥಾನದಲ್ಲಿ ಗದಗಿನ ಶ್ರೀಗಳಾದ ಕಲ್ಲಯ್ಯ ಅಜ್ಜನವರಿಗೆ 2850 ನೇ ತುಲಾಭಾರ ಜರುಗಿತು…ಈ ಸಂದರ್ಭದಲ್ಲಿ ದೇವಸ್ಥಾನದ ಗುರುಗಳಾದ ಅಂಬ ಸ್ವಾಮಿಗಳು ಉಪಸ್ಥಿತಿಯಲ್ಲಿ ಗುರುಗಳಿಗೆ ತುಲಾಭಾರ ಮತ್ತು ದೇವಸ್ಥಾನಗಳಲ್ಲಿ ವಿಶೇಷ ನವಚಂಡಿ ಹೋಮಹವನ ಕಾರ್ಯಕ್ರಮ ಸಂಗತವಾಗಿ ಜರುಗಿದವು. ತುಲಾಭಾರ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀ ಕಲ್ಲಯ್ಯ ಅಜ್ಜನವರು ಸಮಾಜದಲ್ಲಿನ ಅಂದ ಅನಾಥ ಮಕ್ಕಳನ್ನು ಗದುಗಿನ ಶ್ರೀ ವೀರೇಶ್ವರ ಪುನಾಶ್ರಮದ ಜೂಳಿಗೆ ಗೆ ಹಾಕಿ ಅಂತಹ ಮಕ್ಕಳನ್ನು ತಂದೆ ತಾಯಿ ಹಾಗೂ ಸಮಾಜಕ್ಕೆ ಹೊರೇ ಆಗದೆ ಕಲೆ ಸಾಹಿತ್ಯ ಸಂಗೀತದ ಮೂಲಕ ಸ್ವಾವಲಂಬಿಗಳಾಗಿ ಬದುಕಲು ಶಿಕ್ಷಣವನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿದರು ಈ ಸಂದರ್ಭದಲ್ಲಿ ವೇದಮೂರ್ತಿ ಸುನಿಲ್ ವೈದ್ಯ ಮತ್ತು ಅವರ ತಂಡದ ಸದಸ್ಯರಿಂದ ಮಹಾ ಚಂಡಿ ಹೋಮ ನೆರವೇರಿಸಲಾಯಿತು.

ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಯಂಕಪ್ಪ ಕಟ್ಟಿಮನಿ ಸತ್ಯನಾರಾಯಣ ವೀರೇಶ ಹೊಸಪೇಟೆ ರಾಘವೇಂದ್ರ ಶೆಟ್ಟಿ ಮೌನೇಶ್ ರಾಜ್ಯ ಪಕ್ಷಿ ವೆಂಕಟೇಶ್ ಹೊಸಹಳ್ಳಿ ಮಲ್ಲಿಕಾರ್ಜುನ್ ಗೋಟೂರ್ ಶಬ್ಬೀರ್ ಶಫಿ ಹಿಟ್ನಾಳ ಗ್ರಾಮದ ಹಿರಿಯರು ಮತ್ತು ಬಾಗಳ ಮುಖ್ಯ ಅಂಬಾದೇವಿ ದೇವಸ್ಥಾನದ ಭಕ್ತಾದಿಗಳು ಪಾಲ್ಗೊಂಡಿದ್ದರು.
