ಜನ ಮನದ ಜೀವನಾಡಿ, ಬಡ ಜನತೆಯ ಕ್ರೀಯಾ ಶೀಲ ವೈದ್ಯ : ಡಾ. ಈಶ್ವರ ಶಿ. ಸವಡಿ,,, ಪುನಃ ಗಂಗಾವತಿಗೆ ಉಪ ವಿಭಾಗ ಆಸ್ಪತ್ರೆಗೆ ವರ್ಗಾಯಿಸುವಂತೆ ಸಾರ್ವಜನಿಕರ ಮನವಿ,,

ಗಂಗಾವತಿ : ಇಂದಿನ ಯುಗದಲ್ಲಿ ವೈದ್ಯ ವೃತ್ತಿ ಎನ್ನುವುದು ಹಣ ಮಾಡಲೆಂದು ಇರುವ ವೃತ್ತಿಯಾಗಿದೆ ಎನ್ನುವುದು ಸಾರ್ವಜನಿಕ ವಲಯದ ಮಾತಾಗಿದೆ ಆದರೆ ಅದಕ್ಕೆಲ್ಲಾ ತದ್ವಿರುದ್ದವಾಗಿ ” ವೈದ್ಯೋ ನಾರಾಯಣ ಹರಿಃ ” ಎನ್ನುವ ವೇದೋಕ್ತಿಯಂತೆ ಸರ್ವರ ಪಾಲಿನ ವೈದ್ಯ ಲೋಕದ ದೇವರೆಂದೇ ಖ್ಯಾತಿ ಹೊಂದಿದವರು ಡಾ.ಈಶ್ವರ ಶಿ. ಸವಡಿಯವರು.ಹೌದು,, ಡಾ.ಈಶ್ವರ ಶಿ. ಸವಡಿಯವರು ಗಂಗಾವತಿ ಉಪ ವಿಭಾಗ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಾ, ಬಡ ಜನತೆಯ ನಾಡಿ ಮೀಡಿತವನ್ನು ಅರಿತು, ಅವರ ಕಷ್ಟ ನಷ್ಟಗಳಿಗೆ ಸದಾ ಸ್ಪಂದನೆ ನೀಡುತ್ತಾ, ರೋಗಿಗಳ ಪಾಲಿಗೆ ಬೇಡದೇ ವರ ನೀಡುವ ಕಾಮಧೇನುವಾಗಿ ವೈದ್ಯ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.ಇಂತಹ ವಿಷೇಶ ವ್ಯಕ್ತಿತ್ವ ಹೊಂದಿದ ಡಾ.ಈಶ್ವರ ಶಿ. ಸವಡಿ ಅದೆಷ್ಟೋ ಬಡ ರೋಗಿಗಳನ್ನು ತಮ್ಮ ಸ್ವ ಹಿತಾಸಕ್ತಿಯೊಂದಿಗೆ ಯಾವುದೇ ಆಸೆ, ಆಕಾಂಕ್ಷೆಗಳಿಗೆ ಪ್ರೇರೆಪಿತರಾಗದೇ ಕಾಳಜಿ ವಹಿಸಿ ಉಚಿತ ಚಿಕಿತ್ಸೆ, ಉತ್ತಮ ಚಿಕಿತ್ಸೆ ನೀಡುತ್ತಾ ಪ್ರತಿಯೊಬ್ಬರ ಅಂತರಾಳದಲ್ಲಿ ಮನೆ ಮಾಡಿದ್ದಾರೆ ಎಂದರೇ ಅತಿಶಯೋಕ್ತಿಯಾಗಲಾರದು.ಅವರು ಗಂಗಾವತಿ ಉಪ ವಿಭಾಗ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಾ, ರೋಗಿಗಳ ಹಾಗೂ ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ನಗು ಮೊಗದಿಂದ ಸದಾ ಕ್ರೀಯಾ ಶೀಲ ವೈದ್ಯರಾಗಿ ಎಲ್ಲರ ಅಚ್ಚು ಮೆಚ್ಚಿನ ಡಾಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇವರು ಹತ್ತಿರ ಯಾವ ರೋಗಿಗಳೇ ಬರಲಿ ಎಷ್ಟು ಹೊತ್ತಿನ ಸಮಯದಲ್ಲೇ ಬರಲಿ ಇವರನ್ನು ಸಂಪರ್ಕಿಸಿದರೇ ಸಾಕು,,! ಇವರು ಮುತುವರ್ಜಿವಹಿಸಿ, ತಮ್ಮ ಸಿಬ್ಬಂದಿಗಳಿಗೆ ಬಂದಂತ ರೋಗಿಗಳಿಗೆ ಸರಿಯಾಗಿ ಸ್ಪಂದನೆ ನೀಡುತ್ತಾ, ಗುಣಮುಖರನ್ನಾಗಿ ಮಾಡಿ ಕಳಿಸುವವರೆಗೂ ಜವಾಬ್ದಾರಿಯಿಂದ ನೋಡಿಕೊಳ್ಳುತ್ತಿದ್ದರು.ಇಂದು ಇವರು ಗಂಗಾವತಿ ಆಸ್ಪತ್ರೆಯಿಂದ ವರ್ಗಾವಣೆ ಗೊಂಡಿರುವುದರಿಂದ ಹಲವಾರು ರೋಗಿಗಳು, ಸಾರ್ವಜನಿಕರು ಇಂತಹ ವೈದ್ಯರನ್ನು ಬೆರೆಡೆಗೆ ವರ್ಗಾವಣೆಯನ್ನು ಮತ್ತೆ ನಮ್ಮ ಗಂಗಾವತಿಯ ಆಸ್ಪತ್ರೆಗೆ ಮಾಡಿದ್ದಾರೆ ಮತ್ತೆ ಇವರನ್ನು ಗಂಗಾವತಿ ಉಪವಿಭಾಗ ಆಸ್ಪತ್ರೆ ನೇಮಿಸಬೇಕು ಎಂದು ಸಾರ್ವಜನಿಕರು ಮಾದ್ಯಮದ ಮುಂದೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.ಇಂತಹ ಸಾರಸ್ವತ ಲೋಕದಲ್ಲಿ ಸಾರ್ವಜನಿಕರ, ಹಾಗೂ ರೋಗಿಗಳಿಂದ ಇಲ್ಲಿಯೇ ಇದ್ದರೇ ಉತ್ತಮ ಎನ್ನುವ ಬೇಡಿಕೆ ಕುರಿತು ಹಿರಿಯ ಅಧಿಕಾರಿಗಳು, ಶಾಸಕರ, ಸಚಿವರು ಗಮನ ಹರಿಸಿ ಮತ್ತೆ ಇವರನ್ನು ಗಂಗಾವತಿ ಉಪ ವಿಬಾಗಕ್ಕೆ ಮರು ವರ್ಗಾವಣೆ ಮಾಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಸಿದ್ದಾರೆ