ಮಾನಸಿಕ ಆರೋಗ್ಯಕ್ಕೆ ಮದ್ದು ಯೋಗ : ಆನಂದ್ ಅಕ್ಕಿ ಇಂಟರ್ ನ್ಯಾಷನಲ್ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ…

ಗಂಗಾವತಿ :> ಆನೆಗೊಂದಿ ರಸ್ತೆಯ ಇಂಟರ್ ನ್ಯಾಷನಲ್ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.ಸಹಕಾರ ಭಾರತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆನಂದ್ ಅಕ್ಕಿ ಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗವು ದೈಹಿಕ ಆರೋಗ್ಯ ಮಾತ್ರವಲ್ಲದೆ, ಮಾನಸಿಕ ಆರೋಗ್ಯಕ್ಕೂ ಮದ್ದು. ಪ್ರಾಣಾಯಾಮ, ಸೂರ್ಯ ನಮಸ್ಕಾರ, ಧ್ಯಾನ ಹಾಗೂ ಸರಳ ಆಸನಗಳನ್ನು ಮಾಡುವುದರ ಮೂಲಕವೂ ದೇಹ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸಬಹುದು. ಕೋಪ, ಏಕಾಗ್ರತೆಯ ಕೊರತೆ, ಒತ್ತಡ ಈ ರೀತಿಯ ಮಾನಸಿಕ ಸಮಸ್ಯೆಗಳಿಗೆ ದಿನನಿತ್ಯ ಯೋಗ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ವಿದ್ಯಾರ್ಥಿ ಜೀವನದಂದಲೇ ನಿತ್ಯ ಯೋಗಾಸನಗಳನ್ನು ಅಭ್ಯಾಸ ಮಾಡಿದರೆ, ದೇಹ ಹಾಗೂ ಮನಸ್ಸು ನಮ್ಮ ಹಿಡಿತದಲ್ಲಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ನಿತ್ಯ ಯೋಗ ಹಾಗೂ ಪ್ರಾಣಾಯಾಮ ಅಭ್ಯಾಸ ಮಾಡಬೇಕು. ಪೋಷಕರು ಕೂಡಾ ಇದನ್ನು ಮಕ್ಕಳಿಗೆ ಹೇಳಿಕೊಡಬೇಕು ಎಂದರು.ಯಕ್ಷಕೇಂದ್ರ ಕಂಪ್ಲಿ ಖ್ಯಾತ ಯೋಗ ಶಿಕ್ಷಕಿ ಶ್ಯಾಮಲಾ ಇವರು ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಹಾಗೂ ಯೋಗದಿಂದ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ವಿಕಾಸ ಪರಿಷತ್ ಅಧ್ಯಕ್ಷ ಜಂಬಣ್ಣ ಐಲಿ,ಐಡಿಪಿಎಸ್ ನಿರ್ದೇಶಕ ಹಾಗೂ ಪ್ರಾಂಶುಪಾಲರಾದ ಡಾ.ಜೆ.ಶ್ರೀನಿವಾಸ, ಐಡಿಪಿಎಸ್ ನಿರ್ದೇಶಕ ಗಿರೀಶ,ಭಾರತ ವಿಕಾಶ ಪರಿಷತ್ತಿನ ಖಜಾಂಚಿ ಉಮಾ ಹೇರೂರು, ಅಶ್ವಿನಿ ಅಕ್ಕಿ,ಸಂಗೀತ, ಜೆ.ನಾಗರಾಜ,ನಾರಾಯಣ, ಗಿರಿಧರ್,ಸುಲಚನಮ್ಮ ಪಾಟೀಲ್, ಗುರು ಪ್ರಸಾದ್, ಮತ್ತು ಶಿಕ್ಷಕರ ವೃಂದ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
