ಶ್ರೀ ಪೋತಲೂರು ವೀರ ಬ್ರಹ್ಮೇಂದ್ರ ಸ್ವಾಮಿಗಳ 332 ನೆಯ ಆರಾಧನಾ ಮಹೋತ್ಸವ ..

ಗಂಗಾವತಿ. ಸಮೀಪದ ಶ್ರೀ ರಾಮನಗರದ ಶ್ರೀ ಪೋ ತಲೂರು ವೀರ ಬ್ರಹ್ಮೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರದಂದು ಕಾಲಜ್ಞಾನಿ ಶ್ರೀ ಮದ್ವೀರಾಟ ಪೋ ತುಲೂರು ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳ 332 ಆರಾಧನಾ ಮಹೋತ್ಸವ ಅತ್ಯಂತ ಶ್ರದ್ಧೆ ಭಕ್ತಿಯಿಂದ ಅಪಾರ ಭಕ್ತ ಸಮೂಹದ ನಡುವೆ ಜರುಗಿತು. ಬೆಳಿಗ್ಗೆ ಮಹಾ ಸಂಕಲ್ಪ. ಮಹಾಗಣಪತಿ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ ಸೇರಿದಂತೆ ಗೋವಿಂದಾಂಬ. ಪರಿವಾರ ದೇವರುಗಳಿಗೆ ಪಂಚಾಮೃತ ಅಭಿಷೇಕ ರುದ್ರಾಭಿಷೇಕ ಅಷ್ಟೋತ್ತರ ಪಾರಾಯಣ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕ ನರಸಿಂಹ ಆಚಾರ್. ಹಾಗೂ ಸಂತೋಷ್ ನೆರವೇರಿಸಿದರು. ಈ ಸಂದರ್ಭದಲ್ಲಿ ಮಹಾಪ್ರಸಾದ ಅನ್ನದಾಸೋಹ ವ್ಯವಸ್ಥೆ ಮಾಡಿದ ಎಂ ಜೆ ರವಿಕುಮಾರ್ ಮಾತನಾಡಿ ಕಾಲಜ್ಞಾನಿ ವಿರಚಿತ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ತತ್ವ ಸಿದ್ಧಾಂತಗಳು ಕಲಿಯುಗದಲ್ಲಿ ಸತ್ಯವಾಗಿಸಿದೆ. ಸದ್ಯ ಈಗಾಗಲೇ ದೇಶ ದೇಶಗಳ ನಡುವೆ ಯುದ್ಧ ಕಾರ್ಮೋಡ ಜರುಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಎಂದು ತಿಳಿಸಿದವರು ವಿಶ್ವಕರ್ಮ ಸಮಾಜ ಬಾಂಧವರು ಧಾರ್ಮಿಕ ಆಚರಣೆಯ ಜೊತೆಗೆ ಯಾವುದೇ ಭೇದಭಾವವಿಲ್ಲದೆ ಒಗ್ಗಟ್ಟನ್ನು ಬೆಳೆಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಹಾಗೂ ಸದಸ್ಯರು. ಕೊಪ್ಪಳ ಬಳ್ಳಾರಿ ಸಿಂಧನೂರು ಭಾಗಗಳಿಂದ ಸಮಾಜ ಬಾಂಧವರು ಪಾಲ್ಗೊಂಡು ಗುರುಗಳ ಕೃಪೆಗೆ ಪಾತ್ರರಾದರು.
