ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕೆಕೆ ವಿಬಿ ಆಂಗ್ಲ ಮಾಧ್ಯಮ ಶಾಲೆಯ ಆವಿಷ್ಕಾರ ವಾರ್ಷಿಕೋತ್ಸವ.


ಗಂಗಾವತಿ. ನಗರದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕೆಕೆ ವಿಬಿ. ಸ್ಮರಣಾರ್ಥ ಆಂಗ್ಲ ಮಾಧ್ಯಮ ಪ್ರಾರ್ಥಮಿಕ ಹಾಗೂ ಪ್ರೌಢಶಾಲೆಯ 2025 ಹಾಗೂ 26ನೇ ಸಾಲಿನ ಆವಿಷ್ಕಾರ. ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಸಂಸ್ಥೆಯ ಅಧ್ಯಕ್ಷ ಡಾಕ್ಟರ್ ಕೊಟ್ಟೂರು ಮಹಾಸ್ವಾಮಿಗಳು. ಅವರ ದಿವ್ಯ ಸಾನಿಧ್ಯದಲ್ಲಿ ಡಾಕ್ಟರ್ ಭಾನು ಪ್ರತಾಪ್, ಹೊಸಕೆರ ಹಾಗೂ ಚನ್ನಬಸವ ಯಾದಗಿರಿ. ಚನ್ನಬಸಯ್ಯ ಸ್ವಾಮಿ. ಮಾಜಿ ಸಂಸದ ಶಿವರಾಮೇಗೌಡ. ಶರಣಿ ಗೌಡ ಮಾಲಿ ಪಾಟೀಲ್ ಸೇರಿದಂತೆ ಮುಖ್ಯ ಗುರು ಅನಿತಾ ಶಿವಶಂಕರ್ ಬಂಡ ರಕರ್ ಅವರುಗಳು ಜ್ಯೋತಿ ಬೆಳಗಿ ಸೋದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಮಾರಂಭವನ್ನು ಉದ್ಘಾಟಿಸಿ ಡಾಕ್ಟ್ರು ಬಾನು ಪ್ರತಾಪ್ ಹೊಸಕೆರ ಮಾತನಾಡಿ. 2001 ಮತ್ತು 2002 ನೆಯ ಶೈಕ್ಷಣಿಕ ವರ್ಷದಿಂದ ಆರಂಭಗೊಂಡ ಆಂಗ್ಲ ಮಾಧ್ಯಮ ಶಾಲೆಯು 25 ವರ್ಷಗಳನ್ನು ಪೂರೈಸುವುದರ ಜೊತೆಗೆ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ಹಾಗೂ ವ್ಯಕ್ತಿತ್ವ ವಿಕಸನ ಕ್ಕೆ ಆದ್ಯತೆ ನೀಡುತ್ತಿರುವುದು ಸಂತಸದಾಯಕವಾಗಿದೆ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಡಾಕ್ಟರ್ ಕೊಟ್ಟೂರು ಮಹಾಸ್ವಾಮಿಗಳು ಆಶೀರ್ವಚನ ನೀಡಿ ಆಂಗ್ಲ ಭಾಷೆಯಲ್ಲಿ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಹೆಮ್ಮೆ ಅನಿಸುತ್ತದೆ. ಸದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಚಾರ ವಿವಿಧ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನಗಳೊಂದಿಗೆ ಹೊರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘಕ್ಕೆ ಸಂಘ ಗೌರವವಾಗಿದೆ ಎಂದು ತಿಳಿಸಿದರು. ಮುಖ್ಯೋಪಾಧ್ಯಾಯಣಿ ಅನಿ ತಾ ಶಿವಶಂಕರ ಭಂಡಾರ ಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಣದ ಜೊತೆಗೆ ಜೀವನದ ಮೌಲ್ಯಗಳು ಹಾಗೂ ಕಲೆ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಗಮನಹರಿಸಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಎಲ್ ಕೆ ಜಿ ಇಂದ 10ನೇ ತರಗತಿಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ತಡ ರಾತ್ರಿಯವರೆಗೂ ಜರುಗಿದವು.

