ಉಪ್ಪಾರ ಓಣಿಯಲ್ಲಿ ಪುನೀತ್ ೪ನೇ ಪುಣ್ಯ ಸ್ಮರಣೆ: ಗೀತಗಾಯನ, ಸಂಭಾಷಣೆಗಳಿoದ ನುಡಿನಮನಪುನೀತ್ ಮನುಷ್ಯನಾಗಿ ಜನಿಸಿ ಜನಮಾನಸದಲ್ಲಿ ದೈವತ್ವದ ಸ್ವರೂಪ ಪಡೆದ: ನಾಗರಾಜ್ ಇಂಗಳಗಿ…

ಉಪ್ಪಾರ ಓಣಿಯಲ್ಲಿ ಪುನೀತ್ ೪ನೇ ಪುಣ್ಯ ಸ್ಮರಣೆ: ಗೀತಗಾಯನ, ಸಂಭಾಷಣೆಗಳಿoದ ನುಡಿನಮನಪುನೀತ್ ಮನುಷ್ಯನಾಗಿ ಜನಿಸಿ ಜನಮಾನಸದಲ್ಲಿ ದೈವತ್ವದ ಸ್ವರೂಪ ಪಡೆದ: ನಾಗರಾಜ್ ಇಂಗಳಗಿ…

ಗಂಗಾವತಿ: ಸಾಧು ಸಂತರು, ತಪಸ್ವಿಗಳನ್ನು ದೇವರ ಸ್ವರೂಪದಲ್ಲಿ ನೋಡುವ ಭಾರತೀಯ ಪರಂಪರೆಯಲ್ಲಿ ಮನುಷ್ಯನಾಗಿ ದೈವತ್ವದ ರೂಪದಲ್ಲಿ ಜನತೆ ಆರಾಧಿಸುವ ಗುಣ ಹೊಂದಿದ ಪುನೀತ್ ರಾಜಕುಮಾರ್ ಎಲ್ಲರೂ ಅನುಕರಿಸುವ ವ್ಯಕ್ತಿತ್ವ ಹೊಂದಿದ್ದರು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಘಟಕದ ಅಧ್ಯಕ್ಷ ನಾಗರಾಜ್ ಇಂಗಳಗಿ ಹೇಳಿದರು.ಅವರು ನಗರದ ಶ್ರೀ ಭಗೀರಥ ಸರ್ಕಲ್ ಉಪ್ಪಾರ ಓಣಿಯಲ್ಲಿ ಶ್ರೀ ಗಜಾನನ ಗೆಳೆಯರ ಬಳಗ ಆಯೋಜಿಸಿದ್ದ ಪುನೀತ್ ರಾಜಕುಮಾರ್ ನಾಲ್ಕನೆ ಪುಣ್ಯ ಸ್ಮರಣೆ ಗೀತಗಾಯನ ಹಾಗು ರಂಗ ಸಂಭಾಷಣೆಗಳ ನುಡಿನಮನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಪುನೀತ್ ರಾಜಕುಮಾರ ದಾನ ಧರ್ಮದ ಗುಣಗಳಿಂದಾಗಿ ಇಡೀ ಭಾರತದ ಚಿತ್ರರಂಗದ ಚಿತ್ರನಟರಿಗೆ ಮಾದರಿಯಾಗಿ ಹೋದರು. ಅನೇಕ ಪುಣ್ಯ ಕಾರ್ಯಗಳ ಮೂಲಕ ಜನಮಾನಸದಲ್ಲಿ ಅಜರಾಮನರಾಗಿ ಉಳಿದರು. ಅವರು ಮಾನವೀಯ ಗುಣ ವಿಶ್ವಕುಟುಂಬ ಎನ್ನುವ ಭಾವನೆ ತೋರುವಂತಿತ್ತು ಎಂದು ಗುಣಗಾನ ಮಾಡಿದರು.ರಂಗ ನಟ ವಿರುಪಾಕ್ಷಪ್ಪ ಶಿರವಾರ ಮಾತನಾಡಿ, ಜನಮಾನಸದಲ್ಲಿ ಪರಮಾತ್ಮನಾಗಿ ಮೆರೆದ ಅವರ ಹಸರಿನಲ್ಲಿ ರಂಗ ಸಂಭಾಷಣೆಗಳ ಮೂಲಕ ಗೀತ ಗಾಯನದೊಂದಿಗೆ ಸಂಸರಣೆ ಮಾಡುವುದು ಜನರಲ್ಲಿ ಆದರ್ಶದ ಚಿಲುಮೆ ಹೊತ್ತಿಸಿದಂತೆ ಎಂದರು.

ಗoಗಾವತಿ ಉಪ್ಪಾರ ಸಮಾಜದ ತಾಲೂಕು ಕಾರ್ಯಾಧ್ಯಕ್ಷ ಮುಕ್ಕಣ್ಣ ಮಾನಳ್ಳಿ, ವಿಐಪಿ ಮೆಲೋಡಿಸ್ ಮಾಲಿಕರು, ಗಾನಗಂಧರ್ವ ರತ್ನ ರಾಷ್ಟಿçÃಯ ಪ್ರಶಸ್ತಿ ಪುರಸ್ಕತ ಪಂಪಾಪತಿ ಇಂಗಳಗಿ, ಹಿಂದುಸ್ಥಾನಿ ಹಿರಿಯ ಕಲಾವಿದರಾದ ಮಂಜುಳಾ ಬೆಂಗಳೂರು, ಶ್ರೀಗಜಾನನ ಗೆಳೆಯರ ಬಳಗದ ಪ್ರಮುಖರಾದ ಮಾಣಿಕ್ಯ ಗೌಳಿ, ಮೌನೇಶ್ ಇಂಗಳಗಿ, ಚನ್ನಬಸವ ವಣಗೇರಿ, ಬುಕ್ಕಸಾಗರ ಮಂಜುನಾಥ, ವೀರಣ್ಣ ಮಡಿವಾಳರು, ಮಂಜುನಾಥ ಮಡಿವಾಳರು, ಅಬೀದ್ ಮಲ್ಲೇಶ್ ಉಪ್ಪಾರ, ವೆಂಕಟೇಶ್ ಹುಲಿಗಿ, ಈಶಪ್ಪ ಮಾನಳ್ಳಿ ಇತರರಿದ್ದರು.

Leave a Reply

Your email address will not be published. Required fields are marked *