ಜಂಗಮರ ಕಲ್ಗುಡಿ ಗ್ರಾಮದಲ್ಲಿ ಗಣೇಶೋತ್ಸವದ ಸಂಭ್ರಮ – ಚಿತ್ರನಟ ವಿಷ್ಣುತೀರ್ಥರಿಗೆ ಸನ್ಮಾನ..

ಜಂಗಮರ ಕಲ್ಗುಡಿ, ಆ.30 –ಶ್ರೀ ಕೊಂಡನದ ರಾಮ ಮತ್ತು ಸಿದ್ಧಿವಿನಾಯಕ ಸೇವಾ ಸಂಘ (ರಿ) ಇವರ ವತಿಯಿಂದ ಆಯೋಜಿಸಲಾಗಿದ್ದ 37ನೇ ಗಣೇಶೋತ್ಸವದಲ್ಲಿ ದಾಸ ಸಾಹಿತ್ಯದ ಕನ್ನಡ ಚಲನಚಿತ್ರಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚಿತ್ರನಟ ವಿಷ್ಣುತೀರ್ಥ ಜೋಷಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಷ್ಣುತೀರ್ಥ ಜೋಷಿ ಅವರು, “ಕಲಾವಿದರನ್ನು ಗುರುತಿಸಿ, ಗೌರವಿಸಿ, ಪ್ರೋತ್ಸಾಹಿಸುವುದು ಅತ್ಯಂತ ಶ್ಲಾಘನೀಯ ಕಾರ್ಯ. ಈ ಕ್ಷಣ ನನಗೆ ಅವಿಸ್ಮರಣೀಯ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಸದಾ ನನ್ನ ಮೇಲೆ ಹೀಗೆ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ,” ಎಂದು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕೊಂಡನದ ರಾಮ ಮತ್ತು ಸಿದ್ಧಿವಿನಾಯಕ ಸೇವಾ ಸಂಘ (ರಿ) ಅಧ್ಯಕ್ಷ ಸಿ.ಹೆಚ್. ರಾಮಕೃಷ್ಣ, ಕಾರ್ಯದರ್ಶಿ ಎನ್. ದುರ್ಗಾ ನಾಗೇಶ್ವರ ರಾವ್, ಕಜಾಂಚಿ ಟಿ. ರಾಮಕೃಷ್ಣ, ಶ್ರೀನಿವಾಸ, ಜಿ. ಶ್ರೀನಿವಾಸ ಸೇರಿದಂತೆ ಸಂಘದ ಎಲ್ಲಾ ಸದಸ್ಯರು, ಗ್ರಾಮದ ಮಾತೆಯರು, ಯುವಕರು, ಗುರುಹಿರಿಯರು ಉಪಸ್ಥಿತರಿದ್ದರು.
