ಕರ್ನಾಟಕ ದೇವದಾಸಿ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ಜಾರಿಗೆ. ಮಾಶಾಸನ ಮಂಜೂರು ಮಾಡಲು ಸೇರಿದಂತೆ ವಿವಿಧ ಬೇಡಿಕೆಗಾಗಿ ಒತ್ತಾಯಿಸಿ ಮನವಿ…

ಕರ್ನಾಟಕ ದೇವದಾಸಿ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ಜಾರಿಗೆ. ಮಾಶಾಸನ ಮಂಜೂರು ಮಾಡಲು ಸೇರಿದಂತೆ ವಿವಿಧ ಬೇಡಿಕೆಗಾಗಿ ಒತ್ತಾಯಿಸಿ ಮನವಿ…

ಗಂಗಾವತಿ: 15 ಜಿಲ್ಲೆಗಳ ದೇವದಾಸಿ ತಾಯಂದಿರು ಮತ್ತು ಮಕ್ಕಳು ಒಟ್ಟಾಗಿ ಸೇರಿಕೊಂಡು ನಮ್ಮದೇ ಆದಂತಹ ವೇದಿಕೆಯನ್ನು ರೂಪಿಸಿಕೊಂಡಿದ್ದೇವೆ. ದೇವದಾಸಿ ತಾಯಂದಿರು ಮತ್ತು ಮಕ್ಕಳ ಸ್ಥಿತಿಗತಿಗಳನ್ನು ಕುರಿತು ಮತ್ತು ಅವರ ಅಭಿವೃದ್ಧಿ ಯೋಜನೆಗಳನ್ನು ಕುರಿತು ವಿವಿಧ ಹಂತಗಳಲ್ಲಿ ಚರ್ಚೆಗಳನ್ನು ಮಾಡಿ ಸಂಘಟನೆಯನ್ನು ರೂಪಿಸಿದ್ದೇವೆ. ಕರ್ನಾಟಕದಲ್ಲಿ 46,660 ದೇವದಾಸಿ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳನ್ನು ಕುರಿತು ಸಮಗ್ರವಾಗಿ ಚರ್ಚಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಸಮುದಾಯದ ಮುಖಂಡರು ಸಮುದಾಯದೊಂದಿಗೆ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳು ಒಟ್ಟಿಗೆ ಸೇರಿಕೊಂಡು ಹಲವಾರು ಬೇಡಿಕೆಗಳನ್ನು ವಿವಿಧ ಇಲಾಖೆಗಳಿಗೆ ಸಲ್ಲಿಸುತ್ತಾ ಬಂದಿರುವ ಪರಿಣಾಮವಾಗಿ ಸರ್ಕಾರವು ದೇವದಾಸಿ ತಾಯಂದಿರ ಕುಟುಂಬಗಳಿಗೆ ದೇವದಾಸಿ ತಾಯಂದಿರ ಸಂಪೂರ್ಣ ಕುಟುಂಬಕ್ಕೆ ಪುನರ್ವಸತಿಯನ್ನು ಒದಗಿಸಬೇಕು.ಶಿಕ್ಷಣ, ಉದ್ಯೋಗ, ಆರೋಗ್ಯ, ವಾಸಿಸಲು ಮನೆ. ಭೂಮಿ ಮುಂತಾದ ಮೂಲಭೂತ ಸೌಲಭ್ಯಗಳನ್ನು ನೀಡುವುದರ ಜೊತೆಗೆ ದೇವದಾಸಿ ಕುಟುಂಬಗಳ ಸಮಗ್ರ ಅಭಿವೃದ್ಧಿಗೆ 2018 ರ ದೇವದಾಸಿ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ಜಾರಿಗೆ ತರಬೇಕು.ದೇವದಾಸಿ ಮಹಿಳೆಯರಿಗೆ ಪ್ರತಿ ತಿಂಗಳು ತಪ್ಪದೆ ರೂ.5000 ರೂಗಳ ಮಾಸಾಸನವನ್ನು ಮಂಜೂರು ಮಾಡಬೇಕು. ಸಿದ್ಧಪಡಿಸಿರುವ 2025 ರ ಕಾಯ್ದೆಯೂ ದೇವದಾಸಿ ತಾಯಂದಿರ ಮತ್ತು ಮಕ್ಕಳ ಘನತೆಯ ಬದುಕಿಗೆ ದಾರಿ ಮಾಡಿಕೊಡುತ್ತದೆ.ಆದ್ದರಿಂದ ಅದನ್ನು ತಕ್ಷಣ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಷ್ಠಾನಗೊಳಿಸಬೇಕು. ಪನಃ ಸರ್ವೆ ಮಾಡಲು ಆದೇಶವಾಗಿದ್ದು ಬಿಟ್ಟು ಹೋಗಿರುವ ದೇವದಾಸಿ ಮಹಿಳೆಯರ ವಯಸ್ಸನ್ನು ಪರಿಗಣಿಸದೆ ಸರ್ಕಾರದ ಆದೇಶದಲ್ಲಿ ವಯಸ್ಸಿನ ಮಿತಿ ಇಲ್ಲದೆ ಇರುವುದರಿಂದ 30 ರಿಂದ 35ವರ್ಷದವರನ್ನು ಪರಿಗಣಿಸಿ ದೇವದಾಸಿ ಮಹಿಳೆಯರನ್ನು ಸರ್ವೇಯಲ್ಲಿ ಸೇರಿಸಿಕೊಳ್ಳಬೇಕೆಂದು ಮಹಿಳಾಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಗಂಗಮ್ಮಹೊಸಳ್ಳಿ.ಹಂಪಸದುರ್ಗ. ಶೇಖಮ್ಮ ಹೊಸಳ್ಳಿ.ರೇಣುಕಮ್ಮ ಕೂಡಗಿ. ಎಐಟಿ ಯುಸಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಎ ಎಲ್ ತಿಮ್ಮಣ್ಣ ಸೇರಿದಂತೆ ಸಂಘಟನೆಯ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *