ಗುರುಹಿರಿಯರಿಗೆ ಗೌರವ ನೀಡಿ : ಶಿಕ್ಷಕ ಸುಗೇನಹಳ್ಳಿ ರಮೇಶ…

ಗುರುಹಿರಿಯರಿಗೆ ಗೌರವ ನೀಡಿ : ಶಿಕ್ಷಕ ಸುಗೇನಹಳ್ಳಿ ರಮೇಶ…

ಕಂಪ್ಲಿ : ತಾಲೂಕಿನ ರಾಮಸಾಗರ ಕಾರ್ಯಕ್ಷೇತ್ರದ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿಸಿ ಟ್ರಸ್ಟ್ ವತಿಯಿಂದ ತುಂಗಭದ್ರ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗೆ ಶಿಕ್ಷಣದ ಜೀವನದ ಮೌಲ್ಯಗಳು ಕುರಿತು ಸಂಪನ್ಮೂಲ ವ್ಯಕ್ತಿಯಾದ ಸುಗ್ಗೆನಹಳ್ಳಿ ರಮೇಶ ಶಿಕ್ಷಕರು ಸರ್ಕಾರಿ ಪ್ರಾಢಶಾಲೆ ರಾಮಸಾಗರ ಅವರು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಾಲೆಗಳಿಗೆ ಬಂದು ಮಕ್ಕಳಿಗೆ ಜೀವನ ಮೌಲ್ಯಗಳು ಬಗ್ಗೆ ಮಾಹಿತಿ ನೀಡುತ್ತಿದ್ದು ಇದನ್ನು ನೋಡಿ ನನಗೆ ತುಂಬಾ ಸಂತೋಷ ತಂದು ಕೊಟ್ಟಿದೆ ಇತ್ತೀಚಿನ ದಿನಮಾನಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜೀವನ ಮೌಲ್ಯಗಳು ಕಳೆದುಕೊಂಡು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಈ ರೀತಿ ಕಾರ್ಯಕ್ರಮ ಮಾಡುವುದರಿಂದ ಮಕ್ಕಳಿಗೆ ತನ್ನ ಮೌಲ್ಯಗಳ ಅಂದರೆ ಸಂಸ್ಕೃತಿ, ಸಂಸ್ಕಾರ ಗುರುಹಿರಿಯರಿಗೆ ಗೌರವ ನೀಡಬೇಕು, ವಾಟ್ಸಾಪ್, ಫೇಸ್ ಬುಕ್, ಮೊಬೈಲ್ ಬಳಕೆ ನಿಷೇಧ ಹಿಂದೆ ಗುರು ಮುಂದೆ ಗುರಿ ಇಟ್ಟುಕೊಂಡು ಒಳ್ಳೆಯ ವಿದ್ಯಾವಂತರಾಗಬೇಕು ಎಂದು ಮಾಹಿತಿ ನೀಡಿದರು. ನಂತರ ಸಮನ್ವಯಾಧಿಕಾರಿ ರೇಖಾ ಎಂ. ಬಿ. ಮಾತನಾಡಿ ಶಿಕ್ಷಣ ಮಾನವ ಜೀವನದ ಅವಿಭಾಜ್ಯ ಅಂಗವಾಗಿದ್ದು ಶೈಕ್ಷಣಿಕ ಹಿತದೃಷ್ಟಿಯಿಂದ ಸಂಸ್ಥೆಯು ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಸರಿಯಾಗಿ ಬಳಕೆ ಮಾಡಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಯು ಉನ್ನತ ಸ್ಥಾನವನ್ನು ಪಡೆಯಬೇಕು ಎಂದರು.ಪ್ರಭಾರಿ ಮುಖ್ಯಗುರು ರಾಮಮೋಹನ್ ಎಸ್‌ ಡಿ ಎಂ ಸಿ ಅಧ್ಯಕ್ಷ ಪ್ರಶಾಂತ, ಶಿಕ್ಷಕರು, ವಲಯದ ಮೇಲ್ವಿಚಾರಕಿ ಜಯಲಕ್ಷ್ಮಿ, ಸೇವಾ ಪ್ರತಿನಿಧಿ ಶೈಲಜಾ ರಮೇಶ, ವಿದ್ಯಾರ್ಥಿಗಳು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *