ವಿದ್ಯಾರ್ಥಿಗಳ ಧ್ವನಿಯಾದ ಎಸ್ಎಫ್ಐ ಗೆ 56 ನೇ ವರ್ಷದ ಸಂಭ್ರಮ..

ವಿದ್ಯಾರ್ಥಿಗಳ ಧ್ವನಿಯಾದ ಎಸ್ಎಫ್ಐ ಗೆ 56 ನೇ ವರ್ಷದ ಸಂಭ್ರಮ..

ಗಂಗಾವತಿ ನಗರದ ಅಲ್ಪ ಸಂಖ್ಯಾತರ ವಸತಿ ನಿಲಯದಲ್ಲಿ ಎಸ್. ಎಫ್.ಐ ನಾ 56 ನೇ ಸಂಸ್ಥಾಪನಾ ದಿನ ಆಚರಣೆ ಮಾಡಾಲಾಯಿತು. ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಮಾತನಾಡಿ ದೇಶದ ವಿದ್ಯಾರ್ಥಿ ಚಳುವಳಿಯು ಸ್ವಾತಂತ್ರ್ಯ ಆಂದೋಲನದ ಭಾಗವಾಗಿ ಬಂದಿರುವಂತಹದ್ದು. ಸಂಪೂರ್ಣ ಸ್ವಾತಂತ್ರ್ಯದ ಆಶಯವನ್ನು ಹೊಂದಿದ್ದ ಭಗತ್ ಸಿಂಗ್‌ರವರ ಆಶಯಗಳನ್ನು ಮುಂದಕ್ಕೊಯ್ಯುವ ಜವಾಬ್ದಾರಿಯನ್ನು ಎಸ್‌ಎಫ್‌ಐ ವಿದ್ಯಾರ್ಥಿ ಚಳುವಳಿ ಮಾಡುತ್ತಿದೆ. 1970 ಡಿಸೆಂಬರ್ 30 ರಲ್ಲಿ ಕೇರಳದ ತಿರುವನಂತಪುರದಲ್ಲಿ ಎಸ್‌ಎಫ್‌ಐನ ಮೊದಲ ಅಖಿಲ ಭಾರತ ಸಮ್ಮೇಳನ ನಡೆದು ದೇಶದ ವಿದ್ಯಾರ್ಥಿಗಳ ಮಧ್ಯ ಬಲಿಷ್ಠ ಚಳುವಳಿಯನ್ನು ಕಟ್ಟುವ, ಸರ್ವರಿಗೂ ಶಿಕ್ಷಣ-ಸರ್ವರಿಗೂ ಉದ್ಯೋಗ ಹಾಗೂ ವಿದ್ಯಾರ್ಥಿ-ಯುವಜನ ಚಳುವಳಿಯಯನ್ನು ದೇಶದಲ್ಲಿ ಬಲಿಷ್ಠಗೊಳಿಸುವ ನಿರ್ಣಯದೊಂದಿಗೆ ಅಂದು ನಡೆಸಿದ ಸಮ್ಮೇಳನ ಇಂದು ದೇಶಾದ್ಯಂತ ಕೋಟ್ಯಾಂತರ ವಿದ್ಯಾರ್ಥಿಗಳ ನಡುವೆ ಎಸ್‌ಎಫ್‌ಐ ಬಲಿಷ್ಠವಾಗಿದೆ.ಶಿಕ್ಷಣದ ಉಳಿವಿಗಾಗಿ, ಸಂವಿಧಾನದ ರಕ್ಷಣೆಗಾಗಿ ಸಂಘರ್ಷಾತ್ಮಕ ಹೋರಾಟಗಳ ಮೂಲಕ ಚಳುವಳಿ ನಡೆಸುತ್ತಾ ವಿದ್ಯಾರ್ಥಿಗಳ ಆಶಾಕಿರಣವಾಗಿ ಬೆಳೆಯುತ್ತಿದೆ. ಶಿಕ್ಷಣದ ವ್ಯಾಪಾರೀಕರಣ, ಕೋಮುವಾದೀಕರಣ, ವಿದೇಶಿ ವಿವಿ. ಖಾಸಗಿ ವಿವಿಗಳ ಸ್ಥಾಪನೆಯ ವಿರುದ್ಧ, ಸರ್ಕಾರಿ ಶಾಲಾ-ಕಾಲೇಜು, ಹಾಸ್ಟೇಲ್‌ಗಳನ್ನು ಬಲಪಡಿಸಲು ಹಾಗೂ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಹೋರಾಡುತ್ತಿದೆ. ಸಾಮ್ರಾಜ್ಯಶಾಹಿ,ಅನ್ಯಾಯದ ವಿರುದ್ಧ ಹೋರಾಟ ನಡೆಸಿ, ಅಭ್ಯಾಸ, ಹೋರಾಟ, ತ್ಯಾಗದ ಮೂಲಕ ವಸಾಹತುಶಾಹಿ ವಿರೋಧಿ ಸ್ವಾತಂತ್ರ್ಯ ಹೋರಾಟದ ಪರಂಪರೆ ಮುಂದುವರಿಸುತ್ತಿರುವ ಎಸ್‌ಎಫ್‌ಐ ದೇಶದ ಐಕ್ಯತೆಗಾಗಿ, ಸೌಹಾರ್ಧಾತೆಗಾಗಿ, ಜಾತಿವಾದಿ, ಕೋಮುವಾದಿ ದೇಶ ವಿಭಜನೆಯ ಕೆಟ್ಟ ಶಕ್ತಿಗಳ ವಿರುದ್ಧ, ಭ್ರಷ್ಟ ರಾಜಕೀಯ ನಾಯಕರು, ಅಧಿಕಾರಿಗಳು ವಿರುದ್ಧ ರಾಜಿ ಇಲ್ಲದ ಹೋರಾಟಗಳನ್ನು ಸಂಘರ್ಷವನ್ನು ನಡೆಸುವ ಹಾದಿಯಲ್ಲಿ ಸಾಗಿದೆ ಎಂದು ತಿಳಿಸಿದರು ಪ್ರಸ್ತುತದಿನಗಳಲ್ಲಿ ವಿದ್ಯಾರ್ಥಿ ಚಳುವಳಿ ಬೆಳೆವಣಿಗೆ ಕುಂಠಿತಗೊಳಲು ಶಿಕ್ಷಣ ವ್ಯವಸ್ಥೆ ವಿಭಿನ್ನವಾಗಿದೆ. ಹೊಸ ಶಿಕ್ಷಣ ನೀತಿ (ಎನ್‌ಇಪಿ) 2020 ನಂತಹ ವಿದ್ಯಾರ್ಥಿ ವಿರೋಧಿ ನೀತಿಗಳು ಪ್ರಮುಖ ಕಾರಣವಾಗಿವೆ ಮತ್ತು ಕಾರ್ಪೊರೇಟ್ ಸಂಸ್ಥೆಗಳು ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಆವರಿಸಿಕೊಂಡಿವೆ. ಹಾಗೂ ವಿದ್ಯಾರ್ಥಿ ಸಮುದಾಯವನ್ನು ರಾಜಕೀಯ ನಾಯಕರು ಅವರಿಗೆ ಬೇಕಾಗುವ ರೀತಿಯಲ್ಲಿ ಬಳಕೆ ಮಾಡಿಕೊಂಡು “ಕ್ಯಾಂಪಸ್ ಡೆಮಾಕ್ರಸಿ” ಹದಗೆಡಿಸಿವೆ. ಇಡೀ ದೇಶಾದ್ಯಂತನಿರಂತರ ಸರ್ಕಾರಿ ಶಾಲೆಗಳನ್ನು ಮುಚ್ಚುವುದರ ವಿರುದ್ಧ ಹೋರಾಟಗ ಳನ್ನು ಎಸ್‌ಎಫ್‌ಐ ನಡೆಸುತ್ತಿದೆ. ನಂತರ ರಾಜ್ಯ ಸಹ ಸಂಚಾಲಕ ಶರೀಫ್ ಮಾತನಾಡಿ ದೇಶದ ವಿದ್ಯಾರ್ಥಿ ಸಮುದಾಯದ ಸಮಸ್ಯೆಗಳ ಪರಿಹಾರಕ್ಕಾಗಿ ಎಸ್‌ಎಫ್‌ಐ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾಜವಾದ ಶ್ವೇತ ಪತಾಕೆ ವಿಶಾಲ ಭಾರತಾದ್ಯಂತ ಸಮರಶೀಲ ಹೋರಾಟಗಳನ್ನು ನಡೆಸುತ್ತಾ ಬಂದಿದ್ದು ಮತ್ತು ದೇಶಾದ್ಯಂತ ನಡೆಯುವ ರೈತರ, ಕೂಲಿ-ಕಾರ್ಮಿಕರ, ಶೋಷಣೆಯ ವಿರುದ್ಧದ ಹೋರಾಟಗಳಿಗೆ ನಿರಂತರವಾಗಿ ಬೆಂಬಲ ನೀಡುತ್ತಿದ್ದ ಈ ಕ್ರಾಂತಿಕಾರಿ ವಿದ್ಯಾರ್ಥಿ ಚಳುವಳಿಯು 56 ವರ್ಷದ ಸಂಭ್ರಮದಲ್ಲಿದೆ ಇಂತಹ ಹೆಮ್ಮೆಯ ಪರಂಪರೆಯ ಚಳುವಳಿಯನ್ನು ನೆನೆಯುತ್ತಾ ವರ್ಷವಿಡೀ 56 ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮಗಳನ್ನು ವಿಭಿನ್ನ ರೀತಿಯಲ್ಲಿ ಆಚರಣೆ ನಡೆಸುವ ಜೊತೆಗೆ ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ವಿದ್ಯಾರ್ಥಿಗಳನ್ನು ಸಂಘಟಿಸಿ ಹೆಮ್ಮರವಾಗಿ ಬಲಿಷ್ಠಗೊಳಬೇಕು. ಎಡ ವಿದ್ಯಾರ್ಥಿ ಸಂಘಟನೆಯಗಳನ್ನು ಐಕ್ಯ ಹೋರಾಟಕ್ಕೆ ತನ್ನೊಟ್ಟಿಗೆ ಕರೆದೊಯ್ಯುವ ಜವಾಬ್ದಾರಿಯಾಗಿದೆ ಎಂದರು. ಸಮಾಜ ಕಲ್ಯಾಣ ಇಲಾಖೆ ವಸತಿ ನಿಧಯಗಳು ಮತ್ತು ಮೆಟ್ರಿಕ್ ನಂತರ ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಂದ ಸಂಭ್ರಮಾಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಜಿಲ್ಲಾ ಉಪಾಧ್ಯಕ್ಷ ಶರೀಫ್ ಎಂ. ಸಹ ಕಾರ್ಯದರ್ಶಿ ಬಸಯ್ಯ ಹಿರೇಮಠ್, ಜಿಲ್ಲಾ ಸಮಿತಿ ಸದಸ್ಯರಾದ ಮೌನೇಶ್, ದೊಡ್ಡಬಸವ, ಲಕ್ಷ್ಮಣ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *