ಹೊಸ ವರ್ಷದ ಶುಭದಿನದಂದು ಕಾಯಕಯೋಗಿ ತ್ರಿಕಾಲ ಜ್ಞಾನ ದಾಸೋಹ ಮೂರ್ತಿ ಶ್ರೀ ಚನ್ನಬಸವ ಶಿವಯೋಗಿಗಳವರ 80ನೆಯ ಮಹಾ ರಥೋತ್ಸವ…

ಹೊಸ ವರ್ಷದ ಶುಭದಿನದಂದು ಕಾಯಕಯೋಗಿ ತ್ರಿಕಾಲ ಜ್ಞಾನ ದಾಸೋಹ ಮೂರ್ತಿ ಶ್ರೀ ಚನ್ನಬಸವ ಶಿವಯೋಗಿಗಳವರ 80ನೆಯ ಮಹಾ ರಥೋತ್ಸವ..

ಗಂಗಾವತಿ.. ಗಂಗಾವತಿಯ ಆರಾಧ್ಯ ದೈವ ಕಾಯಕಯೋಗಿ ತ್ರಿಕಾಲ ಜ್ಞಾನಿಗಳು ತ್ರಿವಿಧ ದಾಸೋಹ ಮೂರ್ತಿಗಳಾದ ಶ್ರೀ ಚನ್ನಬಸವ ಶಿವಯೋಗಿಗಳವರ 80ನೇ ಮಹಾರಥೋತ್ಸವ ಹೊಸ ವರ್ಷದ ಶುಭದಿನವಾದ ಜನವರಿ 1. 2026 ಗುರುವಾರ ದಿನದಂದು ಶ್ರೀ ಚನ್ನಬಸವ ಸ್ವಾಮಿಗಳು ಸೇರಿದಂತೆ ಶ್ರೀಶೈಲ ಮಲ್ಲಿಕಾರ್ಜುನ ಜೋಡು ಮಹಾ ರಥೋತ್ಸವ ಸಂಜೆ ನಾಲ್ಕು ಗಂಟೆಗೆ ಸಕಲ ವಾದ್ಯ ವೈಭವದೊಂದಿಗೆ ಜರುಗಲಿದೆ ಎಂದು.. ಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿಯ ಹಿರಿಯರಾದ ಶ್ರೀ ಚನ್ನಬಸಯ್ಯ ಸ್ವಾಮಿ. ಮಾಜಿ ಶಾಸಕ ಪರಣ್ಣ ಮುನವಳ್ಳಿ. ನಾಗರಾಜ್ ಬಿ. ಸೂಗೂರಪ್ಪ ಮಹಾಲಿಂಗಪ್ಪ ರಾಚಯ್ಯ ಸ್ವಾಮಿ ಸಿದ್ದಾಪುರ್ ಮಹಾಂತೇಶ್ ಬಿ ನಾಗೇಂದ್ರ ಅಯ್ಯನಗೌಡ ಲಿಂಗರಾಜ ಸೇರಿದಂತೆ ಇತರರು ತಿಳಿಸಿದರು ಅವರು ಮಂಗಳವಾರದಂದು ಶ್ರೀಮಠದ ಪುರಾಣ ಮಂಟಪದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ದಿನ ಒಂದು ಗುರುವಾರದಂದು ಕರ್ತೃ ಗದ್ದಿಗೆ ಹಾಗೂ ಶ್ರೀ ಮಲ್ಲಿಕಾರ್ಜುನ ಲಿಂಗಕ್ಕೆ ಮಹಾರುದ್ರಾಭಿಷೇಕ ಬಿಲ್ವಾರ್ಚನೆ ಮಹಾಮಂಗಳಾರತಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಸಹಸ್ರಾರು ಭಕ್ತಾದಿಗಳಿಂದ ದೀರ್ಘ ದಂಡ ನಮಸ್ಕಾರ ಗಂಗೆ ಸ್ಥಳ ಪುನಃ ಪುರಾಣ ಆರಂಭ ತೀರಿನ ಪೂಜಾ ಪಟ ಎರಿಸುವುದು ಮಡಿ ರಥೋತ್ಸವ ಸೇರಿದಂತೆ ಮಹಾಪ್ರಸಾದವನ್ನು ಬೆಳಿಗ್ಗೆಯಿಂದ ತಡ ರಾತ್ರಿಯವರಿಗೆ ಜರುಗಲಿದ್ದು ಸಕಲ ಭಕ್ತಾದಿಗಳು ಭಾಗವಹಿಸಿ ಗುರುಗಳ ಹಾಗೂ ಶ್ರೀ ಮಲ್ಲಿಕಾರ್ಜುನ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು. ಈಗಾಗಲೇ ಜಾತ್ರಾ ಮಹೋತ್ಸವದ ಪ್ರಯುಕ್ತ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದ್ದು ಸಂಜೆ 7 ಗಂಟೆಗೆ ಶಿವ ಕೀರ್ತನೆ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ತಿಳಿಸಿದ ಅವರು ಮಹಾ ಜೋಡು ರಥೋತ್ಸವಕ್ಕೆ ಬಾಳೆಹಣ್ಣಿನ ಬದಲಾಗಿ ಉತ್ತತ್ತಿಗಳನ್ನು ಸಮರ್ಪಿಸಬೇಕೆಂದು ಮಂಗಳವಾರ ಹಾಗೂ ಬುಧವಾರದಂದು ಮುತ್ತಿನ ಅಡ್ಡ ಪಲ್ಲಕ್ಕಿ ಬಸವ ಹಾಗೂ ಊರಿನ ಅಡ್ಡ ಪಲ್ಲಕ್ಕಿ ಮಹೋತ್ಸವ ಜರುಗಳಿದ್ದು ಸರ್ವ ಜನಾಂಗದ ಭಕ್ತಾದಿಗಳು ಭಾಗವಹಿಸಿ ಬೇಕೆಂದು ಕರೆ ನೀಡಿದರು.

Leave a Reply

Your email address will not be published. Required fields are marked *