ಹನುಮಮಾಲೆ ಧರಿಸಿದ ಶಾಸಕ ಜನಾರ್ದನರೆಡ್ಡಿ.

ಗಂಗಾವತಿ:30 ತಾಲೂಕಿನ ಆನೆಗೊಂ ದಿಯ ಪವಿತ್ರ ಪಂಪಾ ಸರೋವರ ದಲ್ಲಿ, ಪ್ರತಿವರ್ಷದಂತೆ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ. ಹನುಮ ದ್ವತ ಅಂಗವಾಗಿ ಶನಿವಾರ ಶುಭಮುಂಜಾನೆ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿಯವರು ಹನುಮ ಮಾಲೆ ಧರಿಸಿದರು.ಹನುಮಮಾಲೆ ಧರಿಸಿದ ನಂತರ ಹನುಮ ಜನ್ಮಭೂಮಿ ಅಂಜನಾದ್ರಿ ಬೆಟ್ಟದ ತಪ್ಪಲಿನ ಶ್ರೀ ಹನುಮನ ಮೂರ್ತಿಗೆ ಪೂಜೆ ಸಲ್ಲಿಸಿ ಮಾತ ನಾಡಿ, ಅಂಜನಾದ್ರಿಯ ಹನುಮನ ಆರ್ಶೀವಾದದಿಂದ ಚುನಾವಣೆ ಸಂ ದರ್ಬದಲ್ಲಿ ನಾನು ಕೊಟ್ಟ ಬಹುತೇಕ ಅಭಿವೃದ್ಧಿ ಆಶ್ವಾಸನೆಯನ್ನು ಈಡೇ ಸುತ್ತಿದ್ದೇನೆ. ಸರ್ಕಾರದಿಂದ ಹಾಗೂ ಶಾಸಕರ ಅಭಿವೃದ್ಧಿ ಅನುದಾನ ಸೇರಿದಂತೆ ಕೆಂದ್ರ ಸರ್ಕಾರದ ಅನೇಕ ಯೋಜನೆಗಳ ಮೂಲಕ ಕ್ಷೇತ್ರಕ್ಕೆ ಹಣ ಹರಿದುಬರುತ್ತಿದೆ ಇದರಿಂದ ನಗರ ಹಾಗೂ ಕ್ಷೇತ್ರದಲ್ಲಿ ಜನರಿಗೆ ಅನುಕೂ ಲಕ ರವಾದ ಯೋಜನೆಗಳು ಸಿಗುತ್ತಿವೆ. ಇನ್ನೂ ಎರಡು ವರ್ಷಗಳ ಅವಧಿ ಯಲ್ಲಿ ಕ್ಷೇತ್ರವನ್ನು ಇನ್ನಷ್ಟು ಅಭಿವೃ ದ್ವಿಗೊಳಿಸಿ, ಚುನಾವಣೆ ಸಂದರ್ಭದಲ್ಲಿ ಕೊಟ್ಟ ಎಲ್ಲ ಭರವಸೆಗಳನ್ನ ಈಡೇರಿಸುತ್ತೇನೆ. ಇದಕ್ಕೆಲ್ಲ ಆಂಜನೇ ಯನ ಆರ್ಶೀವಾದ ಇರಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು.ಈ ಸಂದರ್ಬದಲ್ಲಿ ನಗರಮಂ ಡಲ ಅಧ್ಯಕ್ಷರಾದ ಚಂದ್ರಶೇಖರ ಹಿರೂರು, ಬಿಜೆಪಿ ಯುವ ಮುಖಂಡ ಸಣ್ಮುಖ ಮಳ್ಳಿಕೇರಿ. ಮುಖಂಡರಾದ ಮನೋಹರಗೌಡ ಹೇರೂರು, ವೀರೇಶ್ ಬಲಕುಂದಿ, ಆನಂದ ಗೌಡ, ಅರ್ಜುನ್ ನಾಯಕ, ಪಂಪಣ್ಣ ನಾಯಕ, ಲಕ್ಷ್ಮಣ್ ನಾಯಕ್ , ಮಂಜುನಾಥ್ ಕೊಲ್ಕರ್ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಅಧ್ಯಕ್ಷರು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು
