ಶ್ರೀ ವಿಜಯ ಕವಚ ಸಮರ್ಪಣೆ ಹಾಗೂ ಶ್ರೀ ವಿಜಯದಾಸರ 270ನೆಯ ಆರಾಧನಾ ಮಹೋತ್ಸವ.

ಶ್ರೀ ವಿಜಯ ಕವಚ ಸಮರ್ಪಣೆ ಹಾಗೂ ಶ್ರೀ ವಿಜಯದಾಸರ 270ನೆಯ ಆರಾಧನಾ ಮಹೋತ್ಸವ.


ಗಂಗಾವತಿ. ನಗರದ ವಿಜಯದಾಸ ಭಕ್ತ ಮಂಡಳಿ ನೇತೃತ್ವದ 23ನೇ ವರ್ಷದ ಶ್ರೀ ವಿಜಯ ಕವಚ ಸಮರ್ಪಣೆ ಹಾಗೂ ಶ್ರೀ ವಿಜಯದಾಸರ 270ನೆಯ ಆರಾಧನಾ ಮಹೋತ್ಸವದ ಪ್ರಯುಕ್ತ ಬುಧವಾರದಂದು ಶ್ರೀ ವಿಜಯದಾಸರ ಉತ್ಸವ ಮೂರ್ತಿಯ ಭವ್ಯ ಶುಭ ಶೋಭಾ ಯಾತ್ರೆ ಶ್ರದ್ಧೆ ಭಕ್ತಿಯಿಂದ ಜರುಗಿತು. ಶ್ರೀ ಯೋಗೇಶ್ವರ ಯಾಜ್ಞವಲ್ಕ್ಯ ಮಂದಿರದಿಂದ ವಿಶೇಷ ಪೂಜೆಯೊಂದಿಗೆ ಆರಂಭಗೊಂಡ ಶೋಭಾ ಯಾತ್ರೆಯಲ್ಲಿ ವಿವಿಧ ಬಜನಾ ಮಂಡಳಿಯವರಿಂದ ಭಜನೆ ಸಕಲ ವಾದ್ಯ ವೈಭವದ ಮೂಲಕ ವಾಸವಿ ವೃತ್ತ ಶ್ರೀ ವೆಂಕಟೇಶ್ವರ ದೇವಸ್ಥಾನದ ಮೂಲಕ ಶ್ರೀ ರಾಘವೇಂದ್ರ ಮಠಕ್ಕೆ ಆಗಮಿಸಿತು. ಇದಕ್ಕೂ ಪೂರ್ವದಲ್ಲಿ. ಆರಾಧನಾ ಮಹೋತ್ಸವ ಕುರಿತು ಲಕ್ಷ್ಮಿಕಾಂತ್ ಹೇರೂರು. ಹಾಗೂ ಯಾಜ್ಞವಲ್ಕ ಸೇವಾ ಟ್ರಸ್ಟಿನ ಅಧ್ಯಕ್ಷ ಮುರಳಿದ ಕುಲಕರ್ಣಿ ಮಾತನಾಡಿದರು. ವಿಪ್ರ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *