ಡಿವೈಎಸ್ಪಿ ಪಾಟೀಲರಿಗೆ ರಾಷ್ಟ್ರಪತಿ ಪದಕ..

ಗಂಗಾವತಿ.ಆ.30: ಕಳೆದ ಎರಡು ವರ್ಷಗಳಿಂದ ಅತಿ ಸೂಕ್ಷ್ಮ ಪ್ರದೇಶ ಗಂಗಾವತಿ ಸೇರಿದಂತೆ ತಮ್ಮ ವಲಯವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಆರ್.ಪಾಟೀಲ್ ಇವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಇವರು ಬೆಂಗಳೂರಿನ ರಾಜಭವನದಲ್ಲಿ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ನೀಡಿ ಗೌರಿಸಿದ್ದಾರೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಪೊಲೀಸ್ ಮಹಾ ನಿರ್ದೇಶಕ ಎಂ.ಎ.ಸಲೀಮ್ ಇತರರ ಸಮ್ಮುಖದಲ್ಲಿ ಪದಕ ಪ್ರದಾನ ಮಾಡಲಾಗಿದೆ. ಎಲ್ಲ ಧರ್ಮಿಯರೊಂದಿಗೆ ಸೌಹಾರ್ದಯುತವಾಗಿ ಕಾರ್ಯನಿರ್ವಹಿಸುತ್ತಿರುವ ಡಿವೈಎಸ್ಪಿಯವರು, ಜನಸಾಮಾನ್ಯರ ದೂರುಗಳಿಗೆ ಸ್ಪಂದಿಸುತ್ತಾ ಠಾಣೆಗೆ ನ್ಯಾಯ ಬೇಡಿ ಬಂದವರಿಗೆ ಸ್ಪಂದಿಸುವ ಪ್ರಯತ್ನ ಮಾಡುತ್ತಿದ್ದಾರೆ. ಡಿವೈಎಸ್ಪಿಯವರ ಈ ಸಾಧನೆಗೆ ಪೊಲೀಸ್ ಸಿಬ್ಬಂದಿ, ಜನಪ್ರತಿನಿಧಿಗಳು, ಮುಖಂಡರು ಹರ್ಷ ವ್ಯಕ್ತಪಡಿದ್ದಾರೆ.
