ಆನೆಗುಂದಿ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ರಾಘವೇಂದ್ರತೀರ್ಥರ 354ನೆಯ ಆರಾಧನ ಮಹೋತ್ಸವ….

ಗಂಗಾವತಿ:> ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 354ನೆಯ ಆರಾಧನಾ ಮಹೋತ್ಸವ ದಿನಾಂಕ 10 ರಿಂದ 12 ರವರೆಗೆ ಅತ್ಯಂತ ಸಂಭ್ರಮದಿಂದ ಭಕ್ತಿಯಿಂದ ಜರುಗಲಿದೆ ಎಂದು ದೇವಸ್ಥಾನದ ಮಠದ ವ್ಯವಸ್ಥಾಪಕ ಸುಮಂತ್ ಕುಲಕರ್ಣಿ ತಿಳಿಸಿದರು. ಅವರು ಬುಧವಾರದಂದು ಶ್ರೀಮಠದ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ. ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಆನೆಗುಂದಿಯಲ್ಲಿ ದಿನಾಂಕ್ 09 ರಂದು ಸಾಮೂಹಿಕ ಉಪಕರ್ಮ ಗೋಪೂಜೆ ಧ್ವಜಾರೋಹಣ ಸ್ವಸ್ತಿ ವಾಚನ ದೊಂದಿಗೆ ಆರಂಭಗೊಳ್ಳಲಿದ್ದು. ಆಗಸ್ಟ್ 10 ರವಿವಾರ ಗುರು ರಾಯರ ಪೂರ್ವ ಆರಾಧನೆ . 11ರಂದು ಮಧ್ಯಾರಾ ದಾನೆ. ಹಾಗೂ 12ರಂದು ಉತ್ತರಾಧನೆ ಹಾಗೂ ಬೆಳಿಗ್ಗೆ 9ಗಂಟೆಗೆ ಮಹಾರಥೋತ್ಸವ ಪ್ರಮುಖ ರಾಜ ಬೀದಿಗಳಲ್ಲಿ. ಮೂರು ದಿನಗಳ ಕಾಲ ಸುಪ್ರಭಾತ ನೈರ್ಮಲ್ಯ ವಿಸರ್ಜನೆ ಶರಭಿಷೇಕ ಪಂಚಾಮೃತ ಅಭಿಷೇಕ ಪಾದಪೂಜೆ ಕನಕ ಅಭಿಷೇಕ ಭಜನೆ ಮತ್ತು ತರ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು ಸಕಲ ಭಕ್ತಾದಿಗಳು ಭಾಗವಹಿಸಬೇಕೆಂದು ಮನವಿ ಮಾಡಿದರು.

