ಗಂಗಾವತಿ ರೋಟರಿ ಸಂಸ್ಥೆ 25 ನೇ ವರ್ಷದ ಬೆಳ್ಳಿ ಹಬ್ಬ ಸಂಭ್ರಮಾಚರಣೆ…

ಗಂಗಾವತಿ ರೋಟರಿ ಸಂಸ್ಥೆ 25 ನೇ ವರ್ಷದ ಬೆಳ್ಳಿ ಹಬ್ಬ ಸಂಭ್ರಮಾಚರಣೆ ರೋಟರಿ ಬೆಳ್ಳಿ ಹಬ್ಬ ಸಂಭ್ರಮಾಚರಣೆ ಸವಿ ನೆನಪಿಗಾಗಿ ಎರಡು ಇಂಟ್ರಾಕ್ಟ ಕ್ಲಬ್ ಸ್ಥಾಪನೆ ವಿಶ್ವದಲ್ಲಿಯೇ ಸಮಾಜ ಸೇವೆಯಲ್ಲಿ 120 ವರ್ಷದಿಂದ ಮುಂಚೂಣಿಯಲ್ಲಿ ಇರುವ ಸಂಸ್ಥೆ ಸಾಮಾಜಿಕ ಸೇವೆಯಲ್ಲಿ, ಆರೋಗ್ಯ, ಶಿಕ್ಷಣ, ಆರ್ಥಿಕ ಅಭಿವೃದ್ಧಿಯಲ್ಲಿ ಸಾಕಷ್ಟು ಸಾಧನೆ ಸಾಧಿಸಿದ ಹೆಮ್ಮೆಯ ಸಂಸ್ಥೆ – ಗಂಗಾವತಿ ನಗರದಲ್ಲಿ 25 ವರ್ಷಗಳಿಂದ ನಗರ /ಗ್ರಾಮೀಣ ಪ್ರದೇಶದ ಜನರ ಸಮಾಜ ಸೇವೆ, ಶೈಕ್ಷಣಿಕ, ಆರೋಗ್ಯ, ಹೀಗೆ ಅನೇಕ ಸಾರ್ವಜನಿಕ ಸೇವೆ ಸಲ್ಲಿಸುವ ಸಂಸ್ಥೆಯಾಗಿದೆ ಎಂದು ಗಂಗಾವತಿ ಸಂಸ್ಥೆಯ ಅಧ್ಯಕ್ಷರಾದ ಟಿ. ಆಂಜನೇಯ ರವರು ಇಂದು ಎಂ. ಎನ್. ಎಂ. ಮಹಿಳಾ ಪ್ರೌಢಶಾಲೆಯಲ್ಲಿ ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಿದರು* *ವಿಶ್ವದಲ್ಲಿ ಆರೋಗ್ಯ, ಶಾಂತಿ ಸ್ಥಾಪನೆ, ಸಾಮಾಜಿಕ ಕಳಕಳಿ, ಹಾಗೂ ಜನರ ಸಂಪರ್ಕದಲ್ಲಿ ಇರುವ ಜನಸೇವೆ ಕೈಗೊಳ್ಳುವ ರೋಟರಿ ಸಂಸ್ಥೆ 120 ವರ್ಷಗಳಲ್ಲಿ ಸಾಧನೆ ಮಾಡಿದೆ ಎಂದು ತಿಳಿಸಿದರು* *ವಿಜಯನಗರ ಝೋನ್ ಅಸಿಸ್ಟೆಂಟ್ ಗವರ್ನರ್ ಮಹೇಶ ಸಾಗರ್ ಅವರು ಇಂಟ್ರಾಕ್ಟ ಕ್ಲಬ್ ಪಧ ಗ್ರಹಣ ನೆರವೇರಿಸಿ, 25 ವರ್ಷದ ಸವಿನೆನಪಿಗಾಗಿ* *ಎಂ.ಎನ್.ಎಂ .ಮಹಿಳಾ ಪ್ರೌಢಶಾಲೆ ಹಾಗೂ ಹಮಾಲರ ಕಾಲೋನಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಸ್ಥಾಪನೆಯಾದ ಇಂಟ್ರಾಕ್ಟ ಕ್ಲಬ್* *ಬಾಲ್ಯದಲ್ಲಿಯೇ ಕೌಶಲ್ಯ ಅಭಿವೃದ್ಧಿ, ನಾಯಕತ್ವ ಗುಣ ,ಸಮಾಜ ಸೇವೆ* ,*ಹಾಗೂ ವಿಶ್ವದ ಅನೇಕ* ಸಾಮಾಜಿಕ ಚಟುವಟಿಕೆಗಳ ಜಾಗೃತಿ ಮೂಡಿಸುವ ಕೆಲಸಗಳಿಂದ ಶಾಲಾ ಮಕ್ಕಳಿಗೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು ಕ್ಲಬ್ ಕಾರ್ಯದರ್ಶಿ ವಾಸು ಕೊಳಗ ದವರು ಮಕ್ಕಳ ಮನಸ್ಸು ಮಲ್ಲಿಗೆಯಂತೆ ಮೃದು, ಪಾರಿಜಾತದಂತೆ ಕೋಮಲ, ಅಂತ ಸೌಮ್ಯ ಗುಣದ ಮಕ್ಕಳಲ್ಲಿ ಚಿಕ್ಕಂದಿನಲ್ಲಿ ಅವರಿಗೆ ನಾಯಕತ್ವ ಗುಣ, ಸಮಾಜ ಸೇವೆ, ಮತ್ತು ಸಾಮಾಜಿಕ ಜೀವನ ಮಕ್ಕಳಿಗೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು9 ಹಮಾಲರ ಕಾಲೋನಿ ಸರಕಾರಿ ಪ್ರೌಢಶಾಲೆ ಮತ್ತು ಎಂ.ಎನ್.ಎಂ. ಮಹಿಳಾ ಪ್ರೌಢಶಾಲೆಯ ಮುಖ್ಯಸ್ಥರಾದ ಸಿದ್ದಲಿಂಗೇಶ ಪೂಲಬಾವಿ ಮತ್ತು ರಾಜೇಶ್ವರ ರೆಡ್ಡಿ ಅವರು ಇಂದು ಅಂತರಾಷ್ಟ್ರೀಯ ರೋಟರಿ ಸಂಸ್ಥೆ ನಮ್ಮ ಶಾಲಾ ಮಕ್ಕಳಿಗೆ ವಿಶ್ವದ ಮುಂಚೂಣಿಯ ಸಮಾಜ ಸೇವೆಯ ಸಂಸ್ಥೆಗಳಾದ ಇಂಟ್ರಾಕ್ಟ ಕ್ಲಬ್ ಗಳನ್ನು ನಮ್ಮ ಶಾಲಾ ಮಕ್ಕಳಿಗೆ ಅವರಲ್ಲಿ ಸಾಮಾಜಿಕ ಜೀವನ, ನಾಯಕತ್ವ, ನೈತಿಕ ಗುಣಗಳ ಬಗ್ಗೆ ಅರಿವು ಮೂಡಿಸುವಂತಹ ಕಳಕಳಿಯುಳ್ಳ ಕೆಲಸ ಕಾರ್ಯಗಳನ್ನು ಮಾಡಲು ಎರಡು ಕ್ಲಬ್ ಗಳನ್ನು ಸ್ಥಾಪಿಸಿದ್ದು ರೊಟರಿ ಸಂಸ್ಥೆ ಅಧ್ಯಕ್ಷರು ಪದಾಧಿಕಾರಿಗಳಿಗೆ ಧನ್ಯವಾದಗಳು ತಿಳಿಸಿದರು ನೂತನ ಇಂಟ್ರಾಕ್ಟ ಕ್ಲಬ್ ಅಧ್ಯಕ್ಷರು ನಮಗೆ ಗಂಗಾವತಿ ರೋಟರಿ ಸಂಸ್ಥೆ ಅಧ್ಯಕ್ಷರು ಪದಾಧಿಕಾರಿಗಳು ಮುಂದೆ ನಮಗೆ ಭವಿಷ್ಯದಲ್ಲಿ ಉತ್ತಮ ಸಮಾಜ ಸೇವೆ, ನಾಯಕತ್ವ ಅವಕಾಶಗಳನ್ನು ಕಲ್ಪಿಸಿ ಕೊಟ್ಟಿದ್ದಕ್ಕೆ ಅಭಿನಂದನೆ ತಿಳಿಸಿದರು ಪ್ರಾರಂಭದಲ್ಲಿ ಶಾಲಾ ಮಕ್ಕಳಿಂದ ಪ್ರಾರ್ಥನೆ, ಎಂ ಎನ್ ಎಂ ಪದವಿಪೂರ್ವ ಕಾಲೇಜು ಪ್ರಾಂಶುಪಾಲರು ಟಿ.ಸಿ.ಶಾಂತಪ್ಪ ರವರು ಸ್ವಾಗತಿಸಿದರು ರೋಟರಿ ಹಿರಿಯ ಸದಸ್ಯರಾದ ಎಂ.ರಾಘವೇಂದ್ರರಾವ್ ಕಾರ್ಯಕ್ರಮ ನಿರೂಪಿಸಿದರು.ಹೆಚ್. ಎಂ.ಮಂಜುನಾಥ ವಂದಿಸಿದರು ಈ ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಅಧ್ಯಕ್ಷರಾದ ಪ್ರಕಾಶ್ ಛೋಪ್ರಾ, ಜೆ.ನಾಗರಾಜ, ಶ್ರೀಧರ್ ನಾಯಕ, ಸಲಾಹುದ್ದೀನ್, ಎ..ಜಗದೀಶ್, ಸುರೇಶ ಜೈನ, ಹುಡೇದ ಮಂಜುನಾಥ ಇನ್ನಿತರ ಸದಸ್ಯರು ಮತ್ತು ಶಾಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು…
