ಪ್ರಭಾರಿ ಪ್ರಾಂಶುಪಾಲರ ವಿರುದ್ಧ ನೀರಮಾನ್ವಿ ಗ್ರಾಮಸ್ಥರ ಆಕ್ರೋಶ…

ಮಾನ್ವಿ ಸಮಗ್ರ ಶಿಕ್ಷಣ ಕರ್ನಾಟಕ ಆಯುಕ್ತರಿಗೆ ನೀರಮಾನ್ವಿ ಗ್ರಾಮಸ್ಥರಿಂದ ಪ್ರಭಾರಿ ಆದರ್ಶ ಕಾಲೇಜು ಪ್ರಾಂಶುಪಾಲರಾದ ಡಾ ರವೀಂದ್ರ ಬಂಡಿ ವಿರುದ್ಧ ನೀರಮಾನ್ವಿ ಗ್ರಾಮದಲ್ಲಿ ಸನ್ 2025- 26 ನೇ ಸಾಲಿನ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಿತ ದೃಷ್ಟಿಯಿಂದ ಹಾಗೂ ಬಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಉದ್ದೇಶ ಇಟ್ಟುಕೊಂಡು ಸರ್ಕಾರವು ಆದರ್ಶ ಶಾಲೆಯಲ್ಲಿಯೇ ಪ್ರಥಮ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ತರಗತಿಗಳನ್ನು ಪ್ರಾರಂಭಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ ಆದರೆ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾಗಿ ನಿಯೋಜನೆಗೊಂಡಿರುವ ಡಾ ರವೀಂದ್ರ ಬಂಡಿ ರವರು ತಾವು ಸರ್ಕಾರಿ ಕೆಲಸವನ್ನು ನಿರ್ವಹಿಸಿದೆ ತಟಸ್ಥವಾಗಿದ್ದಾರೆ ಅಲ್ಲದೆ ಕಾಲೇಜು ಪ್ರಾರಂಭವಾಗಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ಕರ ಪತ್ರ ಫ್ಲಾಕ್ಸ ಗಳಮೂಲಕ ಪ್ರಚಾರ ಮಾಡಿರುವುದಿಲ್ಲ ಸದರಿ ಪ್ರಭಾರಿ ಪ್ರಾಂಶುಪಾಲರಾದ ಡಾ. ರವೀಂದ್ರ ಬಂಡಿ ಈ ಕಾಲೇಜು ಗ್ರಾಮೀಣ ಪ್ರದೇಶದಲ್ಲಿ ಮಂಜುರಾಗಿರುವುದಕ್ಕೆ ಹರ್ಷವಿರುವುದಿಲ್ಲ ಇಂತಹ ಅಧಿಕಾರಿಗಳೇ ಖಾಸಗಿ ಕಾಲೇಜು ಹೆಚ್ಚು ಆಗುವುದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಕಾರಣ ಇವರ ಬೇಜಾಬ್ದಾರಿತನ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ ಹಾಗೂ ಇವರ ಮೇಲೆ ಅನುಮಾನ ಕಾಡುತ್ತಿದೆ ಇವರು ಖಾಸಗಿ ಶಿಕ್ಷಣ ಸಂಸ್ಥೆಯವರ ಜೊತೆ ಕೈಜೋಡಿಸಿ ನಮ್ಮ ಸರ್ಕಾರಿ ಆದರ್ಶ ಕಾಲೇಜಿಗೆ ದ್ರೋಹ ಮಾಡಿದ್ದಾರೆ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅಮಾನತ್ತು ಮಾಡಬೇಕೆಂದು ಹಾಗೂ ನಮ್ಮ ಆದರ್ಶ ಕಾಲೇಜಿಗೆ ಖಾಯಂ ಆಗಿ ಪ್ರಾಂಶುಪಾಲರನ್ನು ನಿಯುಕ್ತಿ ಮಾಡಬೇಕು ಗ್ರಾಮಸ್ಥರ ಮನವಿಗೆ ಸ್ಪಂದಿಸದಿದ್ದರೆ ಶಿಕ್ಷಣ ಇಲಾಖೆ ವಿರುದ್ಧ ಪ್ರತಿಭಟನೆ ಮಾಡಲಾಗುವುದೆಂದು ಗ್ರಾಮಸ್ಥರ ಪರವಾಗಿ ಮಹೇಶ್ ಪೇಗಲ್ ಮಾನ್ಯ ಗ್ರೇಡ್ 2 ತಹಸೀಲ್ದಾರರಾದ ಶ್ರೀ ಅಬ್ದುಲ್ ವಾಹಿದ್ ಮುಖಾಂತರ ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರು ಬೆಂಗಳೂರು ಹಾಗೂ ಸನ್ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ಇವರಿಗೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಶಿಕ್ಷಣ ಪ್ರೇಮಿಗಳಾದ ಭೀಮಣ್ಣ ದೊರೆ ಹುಬ್ಬಳ್ಳಿ ಅಯ್ಯಣ್ಣ ಜೆಲ್ಲಿ ಆಂಜನೇಯ್ಯ ಹೊಲ. ಹನುಮೇಶ್ ನಾಯಕ್ ತಾಸಿ ಹನುಮಂತ ರಮೇಶ್ ದೊರೆ ಮಹದೇವ್ ದೊರೆ ಹಲವಾರು ಯುವಕರು ಹಾಜರಿದ್ದರು

