ನರನಾಗರು ಸಾಮಾಜಿಕ ನಾಟಕ ಉಚಿತ ಪ್ರದರ್ಶನ ಯಶಸ್ವಿಯಾಯಿತು…

ನರನಾಗರು ಸಾಮಾಜಿಕ ನಾಟಕ ಉಚಿತ ಪ್ರದರ್ಶನ ಯಶಸ್ವಿಯಾಯಿತು…

ಗಂಗಾವತಿ: ನಗರದ ಸ್ನೇಹಜೀವಿ ದಿ.ನಾಗರಾಜ್ ನಾಗಪ್ಪ ಶಿರವಾರ ನಗರ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ನೀಲಕಂಠೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಹಾಗೂ 33 ನೇ ವರ್ಷದ ರಥೋತ್ಸವ ಪ್ರಯುಕ್ತ ಮಂಗಳವಾರ ರಾತ್ರಿ ಪಬ್ಲಿಕ್ ಕ್ಲಬ್ ಆವರಣದಲ್ಲಿ ಉಚಿತವಾಗಿ ಅದ್ಧೂರಿ ಪ್ರದರ್ಶನಗೊಂಡಿತು. ನವಲಿ ರಾಜಣ್ಣ ಇವರ ಭವ್ಯ ರಂಗಸಜ್ಜಿಕೆಯಲ್ಲಿ, ಬಸಾಪಟ್ಟಣ ವಾದ್ಯವೃಂದ ಬಳಗ ಅದ್ಭುತ ಸಂಗೀತದೊಂದಿಗೆ ನಾಟಕ ಜನಮನ ಸೆಳೆಯಿತು. ಇದೇ ವೇಳೆ ನಾಟಕದ ವ್ಯವಸ್ಥಾಪಕ ವಿರುಪಾಕ್ಷಪ್ಪ ಶಿರವಾರ ಅವರ 27 ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತೆ ರೇಣುಕಾ ಬಾವಳ್ಳಿ. ಮೈಲಾರಪ್ಪ. ರಮೇಶ ನೇತ್ರ. ವೆಂಕಟೇಶ ಮಾಂತ. ಮಹಾದೇವಪ್ಪ ಮಂತಗೊಂಡ. ತಟ್ಟಿ ಮಲ್ಲಿಕಾರ್ಜುನ ಇವರನ್ನು ಸನ್ಮಾನಿಸಲಾಯಿತು. 27ನೇ ಮದುವೆಯ ವಾರ್ಷಿಕೋತ್ಸವ ಆಚರಿಸಲಾಯಿತು. ಹಾಗೂ ಪಹಾಲ್ಗಮನಲ್ಲಿ ನಡೆದ ಭಾರತೀಯರ ಕುರಿತು ಮೌನ ಆಚರಿಸಲಾಯಿತು. ನರನಾಗರು ಸಾಮಾಜಿಕ ನಾಟಕದಲ್ಲಿ ಮಾರುತಿ ಐಲಿ. ವಿರೂಪಾಕ್ಸಿ ಶಿರವಾರ. ಬಸವರಾಜ ತೊಂಡಿಹಾಳ. ಶ್ರೀಕಾಂತ್ ಬೆನ್ನೂರ್ ಹಿರೇಮಠ. ವಿರುಪಾಕ್ಷಿ ಜಿರಾಹಾಳ್. ನೀಲಕಂಠ ಗಿಟಗಿ. ಸ್ವಪ್ನ ವಿಜಯಪುರ. ಮಂಜುಳಾ ಬೆಂಗಳೂರು. ನೀತು ಮೈಂದರಗಿ.ಪರಿಮಳ ಹಂಸನೂರ ಪಾತ್ರಗಳಿಗೆ ಜೀವ ತುಂಬು ಕೆಲಸಮಾಡಿ ಗ್ರಾಮೀಣ ಕಲೆ ಉಳಿಸಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಟಕದಲ್ಲಿ ಗಾಯಕರು ಗವೀಶ್ ಬಸಾಪಟ್ಟಣ ಅವರ ಅದ್ಭುತ ಕಂಠಸಿರಿ ಕಲಾಪ್ರೀಯರ ಮನಮುಟ್ಟುವಂತಿತ್ತು. ಲಾಲಸಾಬ ಬೋಗಾಪುರ ರಿದಂ ಪ್ಯಾಡ್, ಶ್ರೀಕಾಂತ್ ಗಜೇಂದ್ರ ಗಡ ಡೋಲಕ್, ಕಾಳಪ್ಪ ಪತ್ತಾರ ಕರಡೋಣ ಅವರ ಕ್ಯಾಷೀಯೊ ಸಂಗೀತ ನಾಟಕದ ಕಳೆ ಹೆಚ್ಚಿಸಿದೆ.

Leave a Reply

Your email address will not be published. Required fields are marked *