
ಗಂಗಾವತಿ ತಾಲೂಕಿನ ವಿರುಪಾಪುರ ತಾಂಡಾದಲ್ಲಿ ನೂತನ ಗೃಹ ಪ್ರವೇಶ ಮಾಡಿದ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಪ್ರಥಮ ದರ್ಜೆ ಸಹಾಯಕರಾದ ಶ್ರೀ ರವಿ ನಾಯ್ಕ ಚವ್ಹಾಣ್ ರವರ ಗೃಹ ಪ್ರವೇಶ ಕಾರ್ಯಕ್ರಮ ನಡೆಯಿತು.ವಿಶಿಷ್ಟ ಬಂಜಾರ ಸಮಾಜದ ಹೆಸರಿನ (*ಯಾಡಿರ್ ಹವೇಲಿ* ) ಅಂದರೆ ತಾಯಿಯ ಮಡಿಲಲ್ಲಿ ಎಂಬ ಹೆಸರು ಇಟ್ಟು ವಿಶೇಷ ಏನೆಂದರೆ ಶೋಷಿತ,ದಲಿತ,ದಮನಿತರ ಬದುಕಲ್ಲಿ ಪ್ರವಹಿಸುವ ಸ್ವಾಭಿಮಾನದ ಬೆಳಕು, ಶತಮಾನಗಳ ಶೋಷಕ ವ್ಯವಸ್ಥೆಗೆ ಸಂವಿಧಾನದ ಮೂಲಕ ಘನತೆಯ ಬದುಕು ನೀಡಿದ ಸಾಮಾಜಿಕ ನ್ಯಾಯ, ಜಾತ್ಯಾತೀತ, ಪ್ರಜಾಪ್ರಭುತ್ವದ ಮೌಲ್ಯ ಹಾಗೂ ತುಳಿತಕ್ಕೊಳಗಾದ ಸಮುದಾಯಗಳ ಪರವಾಗಿ ನಿಲ್ಲುವ ಮಹಾನಾಯಕ ಡಾ . ಬಿ ಆರ್ ಅಂಬೇಡ್ಕರ್ ಹಾಗೂ ಸಾವಿರಾರು ವರ್ಷಗಳಿಂದ ಗ್ರಾಮ,ನಗರ ಜೀವನಗಳಿಂದ ದೂರವಿದ್ದು ಅಜ್ಞಾನ ಅಂಧಕಾರಗಳಿಂದ ಅರಣ್ಯ ವಾಸಿಗಳಾಗಿ ಜೀವನ ನಡೆಸುತ್ತಿದ್ದ ತಮ್ಮ ವ್ಯಾಪಾರ ವಹಿವಾಟುಗಳ ನಿರ್ಬಂಧಗಳಿಂದ ದುರ್ಬಲ ಬದುಕು ನಡೆಸುತ್ತಿರುವ ಬಂಜಾರ ಜನಾಂಗದಲ್ಲಿ ಮಹಾನ್ ಕ್ರಾಂತಿಕಾರಿ, ವೇರಾಳು, ಸದ್ಗುರು , ಬಂಜಾರ ಸಮಾಜದ ಕುಲದೈವ ಸದ್ಗುರು ಶ್ರೀ ಸೇವಾಲಾಲ್ ಮಹಾರಾಜರ ರವರ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಹಾ ಭೂ ಕಾರ್ಯಕ್ರಮವನ್ನು ವಿಶೇಷವಾಗಿ ನೆರವೇರಿಸಿದರು. ಈ ಸಂದರ್ಭದಲ್ಲಿ ಮನೆ ಯಜಮಾನಿ ಶ್ರೀಮತಿ ಉಮಿಬಾಯಿ, ಶ್ರೀ ರಾಮ ನಾಯ್ಕ ಮಾಜಿ ಅಧ್ಯಕ್ಷರು ಸ್ಥಾಯಿ ಸಮಿತಿ ನಗರ ಸಭೆ ಗಂಗಾವತಿ, ಶ್ರೀ ಶಿವಪ್ಪ ಜಾಗೋ ಗೋರ್ ರಾಜ್ಯ ಉಪಾಧ್ಯಕ್ಷರು ಗೋರ್ ಸೇನಾ, ರವಿ ನಾಯ್ಕ ಚವ್ಹಾಣ್ ಪ್ರಥಮ ದರ್ಜೆ ಸಹಾಯಕರು ತಾಂಡಾ ನಿಗಮ ಕೊಪ್ಪಳ, ಪ್ರಕಾಶ್ ರಾಠೋಡ್ ಕೃಷಿ ಇಲಾಖೆ, ಪಾಂಡು ನಾಯ್ಕ ಮೇಸ್ತ್ರಿ, ಹನುಮಂತ ಮೇಸ್ತ್ರಿ, ವೆಂಕಟೇಶ್ ಜಾಧವ್, ಕೃಷ್ಣ ನಾಯ್ಕ, ರವಿಚಂದ್ರ ಮೇಸ್ತ್ರಿ, ಸಂತೋಷ ಕಾರಬಾರಿ, ಲೋಕೇಶ್ ಮೇಸ್ತ್ರೀ.
