ಕಂಪ್ಲಿ-ಕೋಟೆ ಹತ್ತಿರದಲ್ಲಿ ಅಪಾತಕ್ಕೆ ಆಹ್ವಾನ ನೀಡುತ್ತಿದ್ದ ಕಿರು ಸೇತುವೆಗೆ ಮುಕ್ತಿ : ಭರದಿಂದ ಸಾಗಿದ ಸೇತುವೆ ನಿರ್ಮಾಣ ಕಾರ್ಯ .

ಕಂಪ್ಲಿ-ಕೋಟೆ ಹತ್ತಿರದಲ್ಲಿ ಅಪಾತಕ್ಕೆ ಆಹ್ವಾನ ನೀಡುತ್ತಿದ್ದ ಕಿರು ಸೇತುವೆಗೆ ಮುಕ್ತಿ : ಭರದಿಂದ ಸಾಗಿದ ಸೇತುವೆ ನಿರ್ಮಾಣ ಕಾರ್ಯ .

ಬಳ್ಳಾರಿ / ಕಂಪ್ಲಿ : ಪಟ್ಟಣದ ಹೊರ ವಲಯದ ಕಂಪ್ಲಿ-ಗಂಗಾವತಿ ರಸ್ತೆಯ ಕೋಟೆ ಹತ್ತಿರದ ದರ್ಗಾದ ತಿರುವಿನ ರಸ್ತೆಯ ಸಿದ್ದಿವಿನಾಯಕ ದೇವಸ್ಥಾನದ ಬಳಿಯಲ್ಲಿ ರಾಜ್ಯ ಹೆದ್ದಾರಿ 29 ಹಾದುಹೋಗಿದ್ದು, ಈ ರಸ್ತೆಯಲ್ಲಿಯೇ ವಿಜಯನಗರ ಉಪ ಕಾಲುವೆಯು ಹರಿದಿದ್ದು,ಇದಕ್ಕೆ ಸಂಪರ್ಕ ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಈ ಸೇತುವೆಯ ಎರಡು ಬದಿಯ ರಕ್ಷಣಾಗೋಡೆಗಳು ಬಿದ್ದುಹೋಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ರಸ್ತೆಯಲ್ಲಿ ಬೊಂಗ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿರುವುದರ ಜೊತೆಗೆ ಹಲವಾರು ಬಾರಿ ಅಪಘಾತಗಳು ಸಂಭವಿಸಿದ್ದವು. ಆದರೆ ಇದೀಗ ಹೆಚ್ಚತ್ತಿರುವ ಲೋಕೋಪಯೋಗಿ ಇಲಾಖೆ ಸೇತುವೆಯ ಪುನರ್ ನಿರ್ಮಾಣಕ್ಕೆ ಮುಂದಾಗಿದ್ದು,ಸೇತುವೆಯ ಕಾಮಗಾರಿ ಭರದಿಂದ ಜರುಗಿದೆ.ಈ ರಾಜ್ಯ ಹೆದ್ದಾರ-29ರ ಸೇತುವೆ ಹತ್ತಿರ ವಾಹನ ಸಂಚಾರಕ್ಕೆ ತೀವ್ರವಾದ ತೊಂದರೆಯಾಗಿದ್ದು, ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಹಲವಾರು ಸಚಿತ್ರ ವರದಿಗಳನ್ನು ಪ್ರಕಟಿಸಲಾಗಿತ್ತು.ರಸ್ತೆ ಲೋಕೋಪಯೋಗಿ ಇಲಾಖೆ ಸೇರಿದ್ದರೆ, ರಸ್ತೆಯ ಕೆಳಗೆ ಹರಿದಿರುವ ಉಪ ಕಾಲುವೆ ಜಲಸಂಪನ್ಮೂಲ ಇಲಾಖೆಗೆ ಸೇರಿತ್ತು.ಈಸೇತುವೆಯನ್ನು ಯಾರೂ ದುರಸ್ತಿ ಮಾಡಿಸಬೇಕು ಎನ್ನುವ ಜಿಜ್ಞಾಸೆಯೂ ಮೂಡಿತ್ತು. ಅದರೆ ಇತ್ತೀಚೆಗೆ ಲೋಕೋಪಯೋಗಿ ಇಲಾಖೆಯು ಕಂಪ್ಲಿ ಕೋಟೆಯ ತುಂಗಭದ್ರಾ ನದಿಯಿಂದ 2ಕಿ.ಮೀ.ರಸ್ತೆ ಆಧುನೀಕರಣ, ಅಭಿವೃದ್ಧಿ,ಅಗಲೀಕರಣ ಕಾಮಗಾರಿಯನ್ನು ಸುಮಾರು 3 ಕೋಟಿ ರೂ ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು,ಇದೇ ಕಾಮಗಾರಿಯಲ್ಲಿ ಸೇತುವೆಯನ್ನು ಪುನರ್ ನಿರ್ಮಿಸಲು ಕಾಮಗಾರಿಯನ್ನು ಆರಂಭಿಸಿದೆ.ಈಹಿನ್ನೆಲೆಯಲ್ಲಿ ಸೇತುವೆ ದುರಸ್ತಿ ಕಾಮಗಾರಿಯನ್ನು ಕೈಗೊಂಡಿರುವ ನಿಟ್ಟಿನಲ್ಲಿ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಿದ್ದು, ಸೇತುವೆ ಕಾಮಗಾರಿ ಮುಗಿಯುವವರೆಗೂ ಮಣ್ಣಿನ ರಸ್ತೆಯಲ್ಲಿ ವಾಹನಗಳ ಸಂಚರಿಸಬೇಕಿರುವುದರಿಂದ ಲೋಕೋಪಯೋಗಿ ಇಲಾಖೆಯು ಮಣ್ಣಿನ ರಸ್ತೆಗೆ ಪ್ರತಿದಿನ ನೀರು ಹಾಕಬೇಕು.ಯಾಕೆಂದರೆ ರಸ್ತೆಯ ಅಕ್ಕಪಕ್ಕದ ಜಮೀನಿನಲ್ಲಿ ಬೆಳೆದಿರುವ ಬೆಳೆಗಳಿಗೆ ಹಾನಿಯಾಗಲಿದ್ದು, ನಿತ್ಯ ನೀರು ಹೊಡೆಯಬೇಕೆಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.ಅಂತು ಇಂತು ಕಂಪ್ಲಿ ಕೋಟೆ ಜನತೆಯ ಬಹುದಿನಗಳ ಕನಸು ನನಸಾಗುತ್ತಿದೆ. ಕೋಟೆಃ- ಕಂಪ್ಲಿ ಕೋಟೆಯ ಸಮೀಪ ರಸ್ತೆಯ ಸೇತುವೆ ಕಿರಿದಾಗಿತ್ತು ಹಾಗೂ ರಸ್ತೆಯಲ್ಲಿ ಬೊಂಗ ಬಿದ್ದಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಸೇತುವೆಯಷೆ ಎರಡು ಬದಿಯ ರಕ್ಷಣಾ ಗೋಡೆಗಳು ಬಿದ್ದು,ಅಪಘಾತಗಳು ಸಂಭವಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ 2.ಕಿ.ಮೀ.ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಇದರಲ್ಲಿ ಈ ಸೇತುವೆಯನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಎಇ ಆನಂದ ಪಮ್ಮಾರ್ ತಿಳಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *