ಗಂಗಾವತಿಯ ವಾಸ್ತು ತಜ್ಞ ಡಾಕ್ಟರ್ ಮಂಜುನಾಥ ಕುರುಗೋಡು ಅವರಿಗೆ ಕುಕನೂರಿನಲ್ಲಿ ಅದ್ದೂರಿ ಸನ್ಮಾನ,,,

ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಕರ್ನಾಟಕ ರಕ್ಷಣಾ ಯುವ ಗಜ ವೇದಿಕೆಯವತಿಯಿಂದ ಗಂಗಾವತಿಯ ವಾಸ್ತು ತಜ್ಞರಾಗಿರುವ ಡಾಕ್ಟರ್ ಮಂಜುನಾಥ ಕುರುಗೋಡ ಶ್ರೀಮತಿ ನಾಗರತ್ನಮ್ಮ ಮಂಜುನಾಥ ಕುರುಗೋಡ ಹಾಗೂ ಶ್ರೀಮತಿ ಮಲ್ಲಮ್ಮ ಸಣ್ಣ ಬಸಣ್ಣ ಕುರುಗೋಡು ಇವರುಗಳನ್ನು ವೇದಿಕೆಯ ಕಾರ್ಯಾಲಯದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು .

ಕರ್ನಾಟಕ ರಕ್ಷಣಾ ಯುವ ಗಜ ತಾಲೂಕು ಅಧ್ಯಕ್ಷ ರಾಗಿರುವ ಕುಮಾರಸ್ವಾಮಿ ಹಿರೇಮಠ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮ ದಲ್ಲಿ ಪ್ರಧಾನ ಕಾರ್ಯದರ್ಶಿಗಳು ಆಗಿರುವ ಸಾಹಿತಿಗಳಾದ ರವಿ ಎಸ್ ಹಿರೇಮನಿ ಉಪಾಧ್ಯಕ್ಷರಾಗಿರುವ ಗುರುಮೂರ್ತಿ ಕಲ್ಲಯ್ಯ ಹಿರೇಮಠ ಹಾಗೂ ಕುಕನೂರಿನ ವಾಣಿಜ್ಯೋದ್ಯಮಿಗಳಾದ ಭೀಮಣ್ಣ ಕುರುಹೀನ ಶೆಟ್ಟಿ ಅವರುಗಳು ಉಪಸ್ಥಿತರಿದ್ದರು ಕುಕನೂರು ತಾಲೂಕು, ಕರ್ನಾಟಕ ರಕ್ಷಣಾ ಯುವ ಗಜವೇದಿಕೆಯ ಅಧ್ಯಕ್ಷರಾಗಿರುವ ಪಿ ಕುಮಾರಸ್ವಾಮಿ ಹಿರೇಮಠ ಅವರು ಮಾತನಾಡಿ ವಾಸ್ತು ತಜ್ಞರಾಗಿರುವ ಡಾಕ್ಟರ್ ಮಂಜುನಾಥ್ ಕುರುಗೋಡು ಅವರ ವಾಸ್ತು ಸೇವೆ ನಮ್ಮ ಕುಕನೂರು ತಾಲೂಕಿಗೆ ದೊರೆಯಲಿ ಎಂದು ತಿಳಿಸಿದರು,,

ಕುಕನೂರು ತಾಲೂಕಿನಲ್ಲಿ ನಮ್ಮ ಬಹುದಿನದ ಆಶಯವಾಗಿರುವ ಹಿರಿಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವೃದ್ಧಾಶ್ರಮವನ್ನು ನಿರ್ಮಿಸಲು ಯೋಚಿಸಿದ್ದು ಇದಕ್ಕೆ ಎಲ್ಲರ ಸಹಾಯ ಸಹಕಾರ ಅಗತ್ಯ ಎಂದು ಮನವಿ ಮಾಡಿದರು ಸನ್ಮಾನ ಸ್ವೀಕರಿಸಿದ ವಾಸ್ತು ತಜ್ಞರಾಗಿರುವ ಡಾಕ್ಟರ ಮಂಜುನಾಥ ಕುರುಗೋಡು ಅವರು ಮಾತನಾಡಿ ಪೂಜ್ಯ ತಂದೆಯವರಾಗಿರುವ ಶ್ರೀ ಸಣ್ಣಬಸಣ್ಣ ಕುರುಗೋಡು ಅವರು ಕುಕನೂರು ತಾಲೂಕಿನಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ ಪೂಜಾ ತಂದೆಯವರ ಆಶಯದಂತೆ ಕುಕನೂರು ತಾಲೂಕಿನಲ್ಲಿ ವಾಸ್ತು ಕ್ಷೇತ್ರದ ಸೇವೆಯನ್ನು ಮುಂದುವರಿಸುವುದಾಗಿ ತಿಳಿಸಿದರು

