ಅಪರಾಧ ತಡೆ ಮಾಸಾಚರಣೆಯ ಕಾರ್ಯಕ್ರಮ..

ಅಪರಾಧ ತಡೆ ಮಾಸಾಚರಣೆಯ ಕಾರ್ಯಕ್ರಮ..

ಕಂಪ್ಲಿ : ಅಪರಾಧ ತಡೆ ಮಾಸಾಚರಣೆಯ ಕಾರ್ಯಕ್ರಮ ಅಂಗವಾಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಮತ್ತು ಬಂಗಾರದ ಅಂಗಡಿಗಳ ಮಾಲೀಕರಿಗೆ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು.ಠಾಣೆಯ ಪಿ. ಐ. ಕೆ. ಬಿ. ವಾಸುಕುಮಾರ ಮಾತನಾಡಿ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಯವರು ಕಡ್ಡಾಯವಾಗಿCCTV ಅಳವಡಿಸಬೇಕು ಗುಣಮಟ್ಟದ ಸಿಸಿಟಿವಿ ಕ್ಯಾಮೆರಾಗಳನ್ನು ಬ್ಯಾಂಕಿನ ಒಳಗೆ ಮತ್ತು ಹೊರಗೆ ಅಳವಡಿಸಿ, 24/7 ರೆಕಾರ್ಡಿಂಗ್ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.ಅಗತ್ಯಕ್ಕೆ ಅನುಗುಣವಾಗಿ ನುರಿತ ಸಶಸ್ತ್ರ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು, ತುರ್ತು ಸಂದರ್ಭದಲ್ಲಿ ಶಬ್ದ ಮಾಡುವ ‘ಸೈರನ್’ ಅಥವಾ ‘ಪ್ಯಾನಿಕ್ ಬಟನ್’ಗಳನ್ನು ಸುಲಭವಾಗಿ ಕೈಗೆಟುಕುವ ಜಾಗದಲ್ಲಿ ಇರಿಸಬೇಕು, ಹೆಚ್ಚಿನ ಹಣವನ್ನು ಸಾಗಿಸುವಾಗ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅಥವಾ ಖಾಸಗಿ ಭದ್ರತಾ ವಾಹನಗಳನ್ನು ಬಳಸಬೇಕು. ಬಂಗಾರದ ಅಂಗಡಿಗಳ ಮಾಲೀಕರು ಚಿನ್ನಾಭರಣಗಳನ್ನು ಇರಿಸಲು ಅತ್ಯಾಧುನಿಕ ಮತ್ತು ಭದ್ರವಾದ ಲಾಕರ್ ಅಥವಾ ಸೇಫ್‌ಗಳನ್ನು ಬಳಸಿ, ಅಂಗಡಿಗೆ ಬರುವ ಅಪರಿಚಿತರ ಚಲನವಲನದ ಮೇಲೆ ನಿಗಾ ಇಡಬೇಕು, ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ. ಅಂಗಡಿಯ ಸುತ್ತಮುತ್ತ ರಾತ್ರಿಯ ವೇಳೆಯೂ ಕೂಡ ಉತ್ತಮ ಬೆಳಕಿನ ವ್ಯವಸ್ಥೆ ಇರಬೇಕು, ಪ್ರತಿಯೊಬ್ಬ ಗ್ರಾಹಕರ ಗುರುತಿನ ಚೀಟಿ ಅಥವಾ ಮೊಬೈಲ್ ಸಂಖ್ಯೆಯನ್ನು ದಾಖಲಿಸಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು. ಇನ್ನೂಸ್ಥಳೀಯ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಯನ್ನು ತುರ್ತು ಸಂಪರ್ಕಕ್ಕಾಗಿ ಪ್ರದರ್ಶಿಸಬೇಕು ಹಾಗೂ ಅಪರಾಧ ತಡೆ ಕುರಿತು ಪೊಲೀಸರು ನೀಡುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕುಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ತಕ್ಷಣವೇ 112 ಸಹಾಯವಾಣಿಗೆ ಕರೆ ಮಾಡಿ ಎಂದು ತಿಳಿಸಿದರು.ಈ ಕಾನೂನು ಸುವ್ಯವಸ್ಥೆಯ ಪಿಎಸ್ಐ ಅವಿನಾಶ್ ಕಾಂಬ್ಳೆ ಸೇರಿದಂತೆ ಠಾಣಾಧಿಕಾರಿಗಳು, ಪೊಲೀಸ್ ಪೇದೆ ಯವರು, ವಿವಿಧ ಅಂಗಡಿ ಮಾಲೀಕರು, ಬ್ಯಾಂಕಿನ ಮುಖ್ಯಸ್ಥರು, ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *