ಶೈಕ್ಷಣಿಕ ಪ್ರಗತಿಗೆ ಪೂರಕವಾದ ಟಿಎಂಎ ಶಿಕ್ಷಣ ಮಹಾವಿದ್ಯಾಲಯ,, ಟಿಇಟಿಯಲ್ಲಿ ವಿದ್ಯಾರ್ಥಿಗಳ ಅತ್ಯುತ್ತಮ ಪ್ರಗತಿ ಸಾಧನೆ : ಅಭಿನಂದಿಸಿದ ಸಂಸ್ಥೆ,,

ಶೈಕ್ಷಣಿಕ ಪ್ರಗತಿಗೆ ಪೂರಕವಾದ ಟಿಎಂಎ ಶಿಕ್ಷಣ ಮಹಾವಿದ್ಯಾಲಯ,, ಟಿಇಟಿಯಲ್ಲಿ ವಿದ್ಯಾರ್ಥಿಗಳ ಅತ್ಯುತ್ತಮ ಪ್ರಗತಿ ಸಾಧನೆ : ಅಭಿನಂದಿಸಿದ ಸಂಸ್ಥೆ,,

ಗಂಗಾವತಿ : ನಗರದ ಶಿಕ್ಷಣ ವಿದ್ಯಾಲಯಗಳಲ್ಲಿ ಒಂದಾದ ಟಿಎಂಎ ಸಂಸ್ಥೆಯು 45ವರ್ಷಗಳ ಹಳೆಯ ಅನುದಾನಿತ ಮಹಾವಿದ್ಯಾಲಯವಾಗಿದೆ.ಪ್ರತಿ ವರ್ಷದಂತೆ ಈ ಶೈಕ್ಷಣಿಕ ವರ್ಷ 2024-25ನೇ ಸಾಲಿನಲ್ಲಿ ಟಿಇಟಿಗೆ ಅರ್ಜಿ ಹಾಕಿದ ಸುಮಾರು 120ವಿದ್ಯಾರ್ಥಿಗಳ ಪೈಕಿ 75ಕ್ಕೂ ಹೆಚ್ಚು ವಿದ್ಯಾರ್ಥಿಗಳು 150ಕ್ಕೆ 126ರಿಂದ 90ಅಂಕಗಳನ್ನು ಪಡೆದು ಉತ್ತಿರ್ಣರಾಗಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಕ್ಕಾಗಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಷ. ಬ್ರ ವರಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳು ಹರಪನಹಳ್ಳಿ, ಕಾರ್ಯದರ್ಶಿ ಡಾ. ಟಿ. ಎಂ ಚಂದ್ರಶೇಖರಯ್ಯ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಸರ್ವ ಸಿಬ್ಬಂದಿಯವರು ಹರ್ಷ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *