ಕುರುಹಿನ ಶೆಟ್ಟಿಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿಯ ನೇತೃತ್ವದಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ಗಂಗಾವತಿ. ನಗರದ ಕುರು ಹಿನಶೆಟ್ಟಿ ಸಮಾಜದ ಕುರುಹಿನ ಶೆಟ್ಟಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿ ನೇತೃತ್ವದಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಪ್ರೀಮಿಯರ್ ಲೀಗ್ ಸೀಸನ್ 1 ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಶ್ರೀ ಚನ್ನಬಸವ ಸ್ವಾಮಿ ತಾಲೂಕ ಕ್ರೀಡಾಂಗಣದಲ್ಲಿ ಗುರುವಾರದಂದು ಬಸವರಾಜ್ ಕುರುಗೋಡು ಚಾಲನೆ ನೀಡಿದರು. ಬಳಿಕ ಮಾತನಾಡಿದ ಬಸವರಾಜ ಕುರುಗೋಡು ಅವರು ಸಮಾಜದ ಯುವಕರು ಒಂದೆಡೆ ಸೇರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿಯನ್ನು ರಚಿಸಿಕೊಂಡು ಅತ್ಯಂತ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಸಂತಸದಾಯಕ. ಪ್ರಥಮ ಬಾರಿಗೆ ಕ್ರಿಕೆಟ್ ಪಂದ್ಯಾವಳಿಗೆ ರಾಜ್ಯದ ನಾನಾ ಭಾಗಗಳಿಂದ ಸಮಾಜದ 19 ತಂಡಗಳು ಭಾಗವಹಿಸಿರುವುದು ಸಮಾಜದ ಸಂಘಟನೆಗೆ ಅತ್ಯಂತ ಪೂರಕವಾಗಿದೆ ಎಂದು ತಿಳಿಸಿದರು. ಸಮಿತಿಯ ಗೌರವಾಧ್ಯಕ್ಷ ಮಲ್ಲಿಕಾರ್ಜುನ್ ತಟ್ಟಿ ಮಾತನಾಡಿ. ಸಮಾಜದ ಯುವಕರಲ್ಲಿ ಕ್ರೀಡಾ ಮನೋಭಾವನೆ ಬೆಳೆಸುವುದರ ಜೊತೆಗೆ ನಮ್ಮ ಕಲೆ ಪರಂಪರೆ ಸಾಂಸ್ಕೃತಿಕ ಉಳಿಸಿ ಬೆಳೆಸುವ ಉದ್ದೇಶ ಹೊಂದಿರುವುದಾಗಿ ಜೊತೆಗೆ ಒಟ್ಟು ನಾಲ್ಕು ದಿನಗಳ ಕಾಲ ಜರುಗುಲಿರುವ ಪಂದಾವಳಿಗೆ ಆಟಗಾರರಿಗೆ ವಸತಿ ಸೇರಿದಂತೆ ಊಟ ಉಪಚಾರದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಶಾವಿ ತಿಪ್ಪಣ್ಣ ಎಲ್ಲಪ್ಪ ಪೋಳ್ಕಲ್ ಐಲಿ ನಾರಾಯಣಪ್ಪಐಲಿ ಮಹೇಶ್ ಮಹೇಶ ಉಪಸ್ಥಿತರಿದ್ದರು..
