ಶೋಷಿತ ಜನಾಂಗದವರ ಜೀವಾಳ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಸಂವಿಧಾನ…. ಮಾ. ಮುನಿರಾಜ್.

ಗಂಗಾವತಿ. ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತ ಪೂರ್ವದಲ್ಲಿ ಮನುವಾದಿಗಳು ಸೇರಿದಂತೆ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳಿಂದ ಶೋಷಣೆಗೆ ಒಳಗಾದ ಹತ್ತು ಹಲವಾರು ಸಮಾಜವನ್ನು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಬೃಹತ್ ಸಂವಿಧಾನವನ್ನು ಕಲ್ಪಿಸುವುದರ ಮೂಲಕ ಶೋಷಿತ ಜನಾಂಗದವರ ಬದುಕಿಗೆ ದಾರಿದೀಪವಾಗಿ ಜೀವಾಳವಾಗಿದ್ದಾರೆ ಎಂದು ದಲಿತ ವಿಮೋಚನಾ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಾ ಮುನಿರಾಜು ಹೇಳಿದರು.
ಅವರು ದಲಿತ ವಿಮೋಚನಾ ಸೇನೆ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಶುಕ್ರವಾರದಂದು ಶ್ರೀ ಕೃಷ್ಣದೇವರಾಯ ಕಲಾಭವನದಲ್ಲಿ ಆಯೋಜಿಸಿದ ನವಂಬರ್ 26ರ ಸಂವಿಧಾ ನಾರ್ಪಣ ದಿನಾಚರಣೆ ಹಾಗೂ ಜಿಲ್ಲಾ ಸಮಾವೇಶವನ್ನು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ಎರಡನೆಯ ಅಂಬೇಡ್ಕರ್ ಎಂದೇ ಹೆಸರಾದ ಪ್ರೊಫೆಸರ್ ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಜ್ಯೋತಿ ಬೆಳಗ್ಗೆ ಸೋದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಲಿತ ವಿಮೋಚನಾ ಸೇನೆ ರಾಜ್ಯದ ಎಲ್ಲಾ ಜಾತಿಗಳ ಶೋಷಿತ ಸಾಮಾಜಿಕ ಸಂಘಟನೆ ಆಗಿದ್ದು 2005ರಂದು ಆರಂಭಗೊಂಡ ಈ ಸೇನೆ ರಾಜ್ಯದ್ಯಂತ ಹೆಮ್ಮರವಾಗಿ ಸಂಘಟಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶೋಷಿತ ಜನಾಂಗದವರು ಗುಣಮಟ್ಟದ ಶಿಕ್ಷಣ ಉದ್ಯೋಗ ಹಾಗೂ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಸಂಘಟನಾತ್ಮಕವಾಗಿ ಹೋರಾಟದ ಮೂಲಕ ಪಡೆದುಕೊಳ್ಳಬೇಕು. ಸಾಧ್ಯವಾದಷ್ಟು ರಾಜಕಾರಣಿಗಳಿಂದ ದೂರವಿದ್ದಷ್ಟು ಸಮಾಜದವರು ಕ್ಷೇಮವಾಗಿ ಇರಬಹುದು. ಯಾವುದೇ ಪಕ್ಷ ಇರಲಿ ಕೇವಲ ಮತ ಬ್ಯಾಂಕುಗಳನ್ನಾಗಿ ಮಾಡಿಕೊಂಡು ಸಮಾಜವನ್ನು ಬಳಸಿಕೊಳ್ಳುವುದರ ಮೂಲಕ ಪ್ರಸ್ತುತ ದಿನಗಳಲ್ಲಿ ಯುವಜನತೆಯ ದಾರಿ ತಪ್ಪಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ತಿಳಿಸಿದ ಅವರು ದುಶ್ಚಟಗಳಿಗೆ ಮಾರುಹೋಗದೆ ತಮ್ಮನ್ನೇ ನಂಬಿದ ಕುಟುಂಬದವರ ಲಾಲನೆ ಪಾಲನೆ ಹಾಗೂ ರಕ್ಷಣೆಗಾಗಿ ಶ್ರಮವಹಿಸಿ ನ್ಯಾಯಮಾರ್ಗದಲ್ಲಿ ದುಡಿಮೆಯನ್ನು ನಂಬಿ ಬದುಕಬೇಕೆಂದು ತಿಳಿ ಹೇಳಿದರು. ಈ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ ಪ್ರಮಾಣವಚನ ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಎಸ್ ದುರ್ಗಪ್ಪ ರಾಜ್ಯ ಸಂಘಟನಾ ಕಾರ್ಯದರ್ಶಿ ದ್ಯಾವಣ್ಣ ಪೂಜಾರ್. ರಾಜ್ಯ ಪದಾಧಿಕಾರಿಗಳಾದ ಕೆ ಕಾವ್ಯ ದಯಾನಂದ ಸುಂದರ ರಾಜ ಎಮ್ ರಾಜು ರಾಜಕುಮಾರ್
ಜಿಲ್ಲಾ ಪದಾಧಿಕಾರಿಗಳಾದ ವಿರುಪಾಕ್ಷಿ ದೊಡ್ಡಮನಿ ಎಸ್ ರಮೇಶ್ ಹುಲುಗಪ್ಪ ಟೀ ಪುಡಿ ಮಂಜು ಐಹೊಳೆ ಮಾರುತಿ ಬಳ್ಳಾರಿ ಜಿಲ್ಲಾಧ್ಯಕ್ಷ ಲೋಕೇಶ್ ಗದಗ್ ಜಿಲ್ಲಾಧ್ಯಕ್ಷ ಫಕೀರಪ್ಪ ರೈಚೂರ್ ಜಿಲ್ಲಾಧ್ಯಕ್ಷ ಹನುಮೇಶ್ ಮೈತ್ರಿ ಸೇರಿದಂತೆ ಗಂಗಾವತಿ ತಾಲೂಕ ಅಧ್ಯಕ್ಷ ಯಂಕಪ್ಪ ಹನುಮನಾಯಕ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸೇನೆಯ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು…

