ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಸಾಧ್ಯ: ಪೂಜ್ಯ ಶ್ರೀ ಪದ್ಮಾಕ್ಷರಯ್ಯ ಮಹಾಸ್ವಾಮಿಗಳು…

ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಸಾಧ್ಯ: ಪೂಜ್ಯ ಶ್ರೀ ಪದ್ಮಾಕ್ಷರಯ್ಯ ಮಹಾಸ್ವಾಮಿಗಳು…

ಗಂಗಾವತಿ: ಶರನ್ನವರಾತ್ರಿ ಹಬ್ಬದ ಪ್ರಯುಕ್ತ ನಗರದ ಹಿರೇಜಂತಗಲ್ ವಿರುಪಾಪುರದಲ್ಲಿರುವ ಆರ್ಯವೈಶ್ಯ ಸಮಾಜದ ವತಿಯಿಂದ ಭಾನುವಾರ ದಂದು ಶ್ರೀ ಕನ್ನಿಕಾ ಪರಮೇಶ್ವರಿ ದೇವಿಗೆ ಭುತ್ತಿ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.ಅಲಂಕಾರವನ್ನು ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಅವದೂತ್ ಭಟ್ ನೆರವೇರಿಸಿದರು.ಈ ಸಂದರ್ಭದಲ್ಲಿ ಶ್ರೀ ವಾಸವಿ ವೇದಿಕೆಯಲ್ಲಿ ಶ್ರೀ ದೇವಿ ಪುರಾಣದ ದಿವ್ಯ ಸಾನಿಧ್ಯವನ್ನು ವಹಿಸಿದ ಪೂಜ್ಯ ಶ್ರೀ ಪದ್ಮಾಕ್ಷರಯ್ಯ ಮಹಾಸ್ವಾಮಿಗಳು ಬೃಹನ್ಮಠ ಸುಳೇಕಲ್ ರವರು ಶವರನ್ನವರಾತ್ರಿಯ ಏಳನೇ ದಿನದ ದೇವಿಯ ಅವತಾರ ಕಾಳರಾತ್ರಿ ದೇವಿಯ ಕುರಿತು ಪ್ರವಚನ ನಡೆಸಿ ನಂತರ ಮಾತನಾಡಿದ ಅವರು ಯುವ ಜನತೆ ನಕಾರಾತ್ಮಕ ಚಿಂತನೆಗಳನ್ನು ತೊರೆದು ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಕಠಿಣ ಪರಿಶ್ರಮ ಪಟ್ಟಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ.ಅದೇ ರೀತಿಯಾಗಿ ಉತ್ತರ ಕರ್ನಾಟಕ ಶಾಮಿಯಾನ ಮತ್ತು ಡೆಕೋರೇಷನ್ ಸಪ್ಲೇಯರ್ಸ್ ಅಸೋಸಿಯೇಷನ್ ಸಂಘದ ರಾಜ್ಯ ಉಪಾಧ್ಯಕ್ಷರಾದ ಚಂದ್ರಶೇಖರ ಶ್ರೇಷ್ಠಿ ಹಣವಾಳ ರವರು ಇವ ನಾರವ ಇವ ನಾರುವ.ಇವ ನಮ್ಮವ ಇವ ನಮ್ಮವ ಎನ್ನುವ ವಚನದಂತೆ ಇವರು ಹಗಲಿರುಳು ಎನ್ನದೆ ಸಮಾಜಕ್ಕೋಸ್ಕರ ಮತ್ತು ಸಾಮಾಜಿಕ ಸೇವೆಯನ್ನು ಮಾಡುತ್ತಾ ಇಂದಿಗೆ ಇವರಿಗೆ 61 ವರ್ಷ ತುಂಬುತ್ತಿದೆ ಇಂತಹ ವಯಸ್ಸಿನಲ್ಲಿ ಕೂಡ ಶ್ರಮಜೀವಿಯಾಗಿ ಸಾಧನೆಯತ್ತ ನಡೆದಿರುವುದು ಎಲ್ಲರೂ ಖುಷಿ ಪಡುವಂತ ವಿಚಾರ.ಹಾಗಾಗಿ ಆ ತಾಯಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಿ ಶ್ರೀಯುತರಿಗೆ ಹೆಚ್ಚಿನ ಆರೋಗ್ಯ ಆಯಸ್ಸು ಶಕ್ತಿ ಕೊಟ್ಟು ಇನ್ನಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ಮಾತನಾಡಿ ನಮ್ಮ ಸಮಾಜದಲ್ಲಿ ಮುತುವರ್ಜಿ ಮತ್ತು ಕಾಳಜಿಯಿಂದ ಸೇವೆ ಮಾಡುತ್ತಿರುವ ವ್ಯಕ್ತಿ ಚಂದ್ರಶೇಖರ ಶ್ರೇಷ್ಠಿ ಹಣವಾಳ ಅವರಿಗೆ 61 ವರ್ಷದ ಜನ್ಮದಿನದ ಶುಭಾಶಯಗಳು ಇದೇ ರೀತಿಯಾಗಿ ಇನ್ನು ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಲಿ ತಾಯಿ ಶ್ರೀ ಕನ್ನಿಕಾಪರಮೇಶ್ವರಿ ದೇವಿ ಹೆಚ್ಚಿನ ಶಕ್ತಿ ಕೊಡಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ನವ ಬೃಂದಾವನ ಭಜನಾ ಮಂಡಳಿ ಅಧ್ಯಕ್ಷರು ದರೋಜಿ ನರಸಿಂಹ ಶ್ರೇಷ್ಠಿ. ಶ್ರೀ ವಾಸವಿ ಯುವಜನ ಸಂಘದ ಅಧ್ಯಕ್ಷ ಎನ್ ವಿ ಮಂಜುನಾಥ. ಗೌರವಾಧ್ಯಕ್ಷ ದರೋಜಿ ವೆಂಕಟೇಶ. ಶ್ರೀ ವಾಸವಿ ಮಹಿಳಾ ಮಂಡಳಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸೇರಿದಂತೆ ಸಮಾಜದ ಅಪಾರ ಮುಖಂಡರು ಹಿರಿಯರ ನೇತೃತ್ವದಲ್ಲಿ ಶರನ್ನವರಾತ್ರಿಯ ಏಳನೇ ದಿನದ ಮಹಾಮಂಗಳಾರತಿಯೊಂದಿಗೆ ಮುಕ್ತಾಯಗೊಳಿಸಲಾಯಿತು.ನಂತರ ಮಹಾಪ್ರಸಾದವನ್ನು ವ್ಯವಸ್ಥೆಯನ್ನು ಇಲ್ಲೂರು ರವಿಕುಮಾರ ಮತ್ತು ಕುಟುಂಬದವರು ನೆರವೇರಿಸಿದರು.

Leave a Reply

Your email address will not be published. Required fields are marked *