ಕಿಸ್ಕಿಂದ ಅಂಜನಾದ್ರಿಯ ಪೂಜಾರಿಕೆಯ ಹಕ್ಕು ಶ್ರೀ ವಿದ್ಯಾ ದಾಸ್ ಬಾಬಾಜಿ. ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು..

ಕಿಸ್ಕಿಂದ ಅಂಜನಾದ್ರಿಯ ಪೂಜಾರಿಕೆಯ ಹಕ್ಕು ಶ್ರೀ ವಿದ್ಯಾ ದಾಸ್ ಬಾಬಾಜಿ. ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು..

ಗಂಗಾವತಿ. ಐತಿಹಾಸಿಕ ಇತಿಹಾಸ ಪ್ರಸಿದ್ಧ ಹೊಂದಿದ ಹನುಮ ಹುಟ್ಟಿದ ನಾಡೆ ಎಂದು ಪ್ರಸಿದ್ಧಿ ಪಡೆದ ಕಿಷ್ಕಿಂದೆಯ ಅಂಜನಾದ್ರಿಯಾ. ಪೂಜಾರಿ ಹಕ್ಕಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿ ಶ್ರೀ ವಿದ್ಯಾದಾಸ್ ಬಾಬಾಜಿ ಅವರಿಗೆ ಪೂಜಾರಿಕೆಯನ್ನು ಮುಂದುವರಿಸಿಕೊಂಡು ಹೋಗುವಂತೆ ಆದೇಶ ನೀಡಿದೆ. ಹಲವು ವರ್ಷಗಳಿಂದ ದೇವಸ್ಥಾನದ ಪೂಜಾರಿಕೆ ಹಾಗೂ ಅಂಜನಾದ್ರಿ ಅಭಿವೃದ್ಧಿಗೆ ಹಗಲಿರುಲು ಶ್ರಮಿಸುತ್ತಾ ಬಂದಿರುವ ಶ್ರೀ ವಿದ್ಯಾ ದಾಸ್ ಬಾಬಾಜಿ ಅವರಿಗೆ ದೇವಸ್ಥಾನದ ಖಾಸಗಿ ಆಡಳಿತ ಮಂಡಳಿ ಹಾಗೂ ಸರ್ಕಾರ ಹಲವು ಆರೋಪಗಳ ಮೂಲಕ ಪೂಜಾರಿ ಕಿಯ ಹಕ್ಕನ್ನು ನಿಷೇಧ ಹೇರಲಾಗಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಂಗ ಮೊರೆ ಹೋಗಿದ್ದ ವಿದ್ಯಾ ದಾಸ್ ಬಾಬಾಜಿ ಅವರಿಗೆ ಪೂಜಾರಿಕ್ಕೇನು ಮುಂದುವರೆಸಿಕೊಂಡು ಹೋಗುವಂತೆ ಆದೇಶ ನೀಡಿದ್ದು ಭಕ್ತಾದಿಗಳಿಗೆ ಸಂತಸವನ್ನುಂಟು ಮಾಡಿದೆ. ಕರ್ನಾಟಕ ಸರ್ಕಾರ ಹಾಗೂ ಮುಜರಾಯಿ ಇಲಾಖೆ ಕೊಪ್ಪಳ ಜಿಲ್ಲಾಡಳಿತ ವಿದ್ಯಾ ದಾಸ್ ಬಾಬಾಜಿ ಅವರ ಪೂಜಾ ವಿಧಿ ವಿಧಾನಗಳಿಗೆ ಸಹಕಾರ ನೀಡಬೇಕು. ಯೋಗ ಶಿಕ್ಷಣ ಸಂಸ್ಕೃತ ಪಾಠಶಾಲೆ ತ್ರಿಕಾಲ ಪೂಜೆ ಸೇರಿದಂತೆ ದೇಶ ಸೇರಿದಂತೆ ವಿದೇಶದಿಂದ ಆಗಮಿಸುವ ಭಕ್ತಾದಿಗಳಿಗೆ ಸಕಲ ಸೌಲಭ್ಯವನ್ನು ಕಲ್ಪಿಸಲು ಮುಂದಾಗಬೇಕೆಂದು ಭಕ್ತರು ತಿಳಿಸಿದ್ದಾರೆ. ಇದಕ್ಕಾಗಿ ಜಿಲ್ಲಾಧಿಕಾರಿಗಳ ಇಲ್ಲವೇ ಸಹಾಯಕ ಆಯುಕ್ತಕರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಖಾಸಗಿ ಆಡಳಿತ ಮಂಡಳಿಯನ್ನು ರಚಿಸಿ ಅಯೋಧ್ಯ ಮಾದರಿಯಲ್ಲಿ ಅಭಿವೃದ್ಧಿಗೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ

Leave a Reply

Your email address will not be published. Required fields are marked *