ಹಿರೇಜಂತಕಲ್ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ‘ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ’…


ಗಂಗಾವತಿ:28 ನಗರದ ಶ್ರೀ ವಿನಾಯಕ ಕನ್ನಡ ಅನುದಾನಿತ ಹಿರಿಯ ಪ್ರಾಥಮಿಕ (ಕೊಂಡಮಿ) ಶಾಲೆಯಲ್ಲಿ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಅದೇ ಶಾಲೆಯ 1999–2000ನೇ ಸಾಲಿನ ಏಳನೇ ತರಗತಿ ಹಳೆಯ ವಿದ್ಯಾರ್ಥಿಗಳು ಈ ಗುರುವಂದನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ಪ್ರಾಥಮಿಕ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆಗಳನ್ನು ನೀಡಿದರು.
ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯ ಉಪನ್ಯಾಸಕ ಶರಣಪ್ಪ ಬಿಳಿ ಎಲೆ ಮಾತನಾಡಿ, “ಸಮಾಜದಿಂದ ಏನಾದರೂ ಪಡೆಯುವುದಕ್ಕಿಂತ ಮೊದಲು ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಸಮಾಜಕ್ಕೆ ಒಳಿತಾಗುವ ಕಾರ್ಯಗಳನ್ನು ಮಾಡಿ ಆದರ್ಶ ವ್ಯಕ್ತಿಗಳಾಗಿ ಬದುಕಬೇಕು” ಎಂದು ಹೇಳಿದರು.
ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ನಾಯ್ಡು ಮಾತನಾಡಿ, ಶಿಕ್ಷಕ ವೃತ್ತಿ ಕೇವಲ ಅಕ್ಷರ ಕಲಿಸುವ ಕೆಲಸವಾಗಿರದೆ, ಸಮಾಜಕ್ಕೆ ಭವಿಷ್ಯದ ಪೀಳಿಗೆ ತಯಾರು ಮಾಡುವ ಆತ್ಮಸಂತೃಪ್ತಿಯ ಗುರುತರ ಜವಾಬ್ದಾರಿ. ಅಮೂರ್ತವಾದ ಶಿಷ್ಯರ ಜೀವನವನ್ನು ತಿದ್ದಿ ಮೂರ್ತಿ ರೂಪಕ್ಕೆ ತಂದಾಗ, ಉತ್ತಮ ಜೀವನ ಮಾರ್ಗದಲ್ಲಿ ನಡೆಯುತ್ತಾರೆ ಶಿಕ್ಷಕ ವೃತ್ತಿ ಅತ್ಯಂತ ಹೆಮ್ಮೆಯ ವೃತ್ತಿ. ವಿದ್ಯಾರ್ಥಿಗಳಿಗೆ ನಾವು ತೋರುವ ಪ್ರೀತಿ ವಿಶ್ವಾಸ, ವಿದ್ಯಾರ್ಥಿಗಳು ಜ್ಞಾನ ಸಂಪಾದನೆಗೆ ಹೆಚ್ಚು ಸಧೃಡಗೊಳಿಸುವ ಜೊತೆಗೆ, ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಮೂಡಿಸಲು ಕಾರಣವಾಗುತ್ತದೆ ಎಂದರು.
ಹಳೆಯ ವಿದ್ಯಾರ್ಥಿಗಳಾದ ಬಿ.ಬದವರಾಜ,ಮಹೇಶ ಭೋವಿ,ಅನ್ನಪೂರ್ಣ ನವಲಿ ಹಿರೇಮಠ, ಅಶ್ವಿನಿ, ಮಂಜುಳಾ, ಸುವರ್ಣ,ವೀರೇಶ,ವಿಶ್ವ, ತಮ್ಮ ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡರು,
ಹಲವಾರು ವರ್ಷಗಳ ನಂತರ ಮತ್ತೆ ಒಂದಾಗಿ ಸೇರಿದ್ದ ಹಳೆ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ಅನುಭವಗಳನ್ನು ಹಂಚಿಕೊಂಡು ಭಾವನಾತ್ಮಕ ಕ್ಷಣಗಳನ್ನು ಮರುಕಳಿಸಿದರು. ಗುರುಗಳು ಮತ್ತು ವಿದ್ಯಾರ್ಥಿಗಳ ನಡುವಿನ ಆತ್ಮೀಯ ಮಾತು ಕತೆಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ಯಾವಿ ತಿಪ್ಪಣ್ಣ,ಕಾರ್ಯದರ್ಶಿ ಕೆ.ವೀರೇಶ,ಶಿಕ್ಷಕರಾದ ವಿನೋದಾ,ದೈಹಿಕ ಶಿಕ್ಷಕರಾದ ಉಜ್ಜನಗೌಡ,ಬಸೆಟ್ಟಪ್ಪ,ಸಹಜಾನಂದ,ದೊಡ್ಡಯ್ಯ,ಹೇಮಾವತಿ, ಬೀರಪ್ಪ,ಅನ್ನಪೂರ್ಣ, ಸುನಿತಾ,ರತ್ನಮ್ಮ, ಶಫೀನಾ,ಚನ್ನಬಸವ, ಸಂತೋಷ, ಯಶೋಧ,ರಜೀಯಾ,ರಾಮನಗೌಡ,ಸುನೀತಾ ಹಾಗೂ ವಿಧ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು
