ಅಯ್ಯಪ್ಪಸ್ವಾಮಿ ಮಹಾಮಂಡಲ ಪೂಜಾ ಮಹೋತ್ಸವ ಕಾರ್ಯಕ್ರಮ.

ಅಯ್ಯಪ್ಪಸ್ವಾಮಿ ಮಹಾಮಂಡಲ ಪೂಜಾ ಮಹೋತ್ಸವ ಕಾರ್ಯಕ್ರಮ.

ಕಂಪ್ಲಿ: ಪಟ್ಟಣದ ಐತಿಹಾಸಿಕ ಸೋಮಪ್ಪ ದೇವಸ್ಥಾನ ಬಳಿಯ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ಮಾಲಾಧಾರಿಗಳಿಂದ ಮಹಾಮಂಡಲ ಪೂಜೆ ಮಹೋತ್ಸವ ಅತ್ಯಂತ ಶ್ರದ್ಧಾಭಕ್ತಿಯಿಂದ ಶುಕ್ರವಾರ ನಡೆಯಿತು. ಮಾಲಾಧಾರಿಗಳು ವಿಶೇಷ ಪೂಜೆಗಳನ್ನು ನೆರವೇರಿಸಿ, ಸ್ವಾಮಿಯನ್ನು ಸ್ಮರಿಸಿದರು. 18ನೇ ವರ್ಷದ ಶಬರಿಮಲೈ ಯಾತ್ರೆ ಮಾಡುತ್ತಿರುವ ಸ್ವಾಮಿಗಳಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ಡಿ.ವೀರಣ್ಣ, ಗುರುಸ್ವಾಮಿ, ಮಲ್ಲಿಕಾರ್ಜುನ, ರಾಮಗುರುಸ್ವಾಮಿ, ಬೆಂಕಿಸ್ವಾಮಿ, ಹುಲುಗಪ್ಪಸ್ವಾಮಿ, ಸಂಜೀವಸ್ವಾಮಿ, ಜೆ.ರಮೇಶಸ್ವಾಮಿ, ವಿರೇಶ, ಮಹಾದೇವ ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು. ನಂತರ ಅನ್ನಸಂತಾರ್ಪಣೆ ಜರುಗಿತು. ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *