ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ 2026 ದಿನಚರಿ ಹಾಗೂ ನಿರಂತರ ಮಾಸಿಕ ಪುಸ್ತಕ ಬಿಡುಗಡೆ…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ 2026 ದಿನಚರಿ ಹಾಗೂ ನಿರಂತರ ಮಾಸಿಕ ಪುಸ್ತಕ ಬಿಡುಗಡೆ…

ಕಂಪ್ಲಿ : ತಾಲೂಕಿನ ಎಮ್ಮಿಗನೂರ ಗ್ರಾಮದ ಹಂಪಿ ಸಾವಿರ ದೇವರ ಮಹಾಂತರ ಮಠದ ವಾಮದೇವ ಶಿವಾಚಾರ್ಯರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಕಂಪ್ಲಿ ವತಿಯಿಂದ 2026 ದಿನಚರಿ ಹಾಗೂ ನಿರಂತರ ಮಾಸಿಕ ಪುಸ್ತಕವನ್ನು ಬಿಡುಗಡೆ ಗೊಳಿಸಿದರು. ನಂತರ ವಾಮದೇವ ಶಿವಾಚಾರ್ಯರು ಮಾತನಾಡಿ ಧರ್ಮ ಉಳಿಯಬೇಕಾದರೆ ಮೊದಲು ದೇಶ ಉಳಿಯಬೇಕು ಆ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲಿ ಜಾತ್ಯತೀತ ಮನೋಭಾವನೆ ಬೆಳೆದು ಸಮಾನತೆ ಬಂದಾಗ ಮಾತ್ರ ಸಾಧ್ಯ ಅಲ್ಲದೆ ದೇಶ ಧರ್ಮ ಪರಿಸರ ಸ್ವಚ್ಛವಾಗಿರುವುದಲ್ಲದೆ ಪ್ರತಿಯೊಬ್ಬ ಮನುಷ್ಯನಲ್ಲಿ ಮಾನವ ಮೌಲ್ಯಗಳೊಂದಿಗೆ ಮನುಷ್ಯನನ್ನು ಪ್ರೀತಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು. ಈ ಸಂದರ್ಭದಲ್ಲಿ ಇಟಗಿಯ ಭೂಕೈಲಾಸ ಮಠದ ಶಿವ ಶಾಂತವೀರ ಶಿವಾಚಾರ್ಯರು ತಾಲೂಕು ಯೋಜನಾಧಿಕಾರಿ ರಾಘವೇಂದ್ರ, ಮೇಲ್ವಿಚಾರಕ ಮಂಜುನಾಥ, ಶಿಕ್ಷಕ ಎಸ್. ರಾಮಪ್ಪ ಪ್ರಮುಖರಾದ ಕನಕಪ್ಪ ಸುಣಗಾರ ಸೇರಿದಂತೆ ಸೇವಾ ಪ್ರತಿನಿಧಿಗಳು ಸೇರಿದಂತೆ ಇತರರಿದ್ದರು.ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *