ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನದಲ್ಲಿ ಸಮಾನತೆಗೆ ಅವಕಾಶವಿದೆ : ಜಗದೀಶ್ ಪೂಜಾರ್..

ಬಳ್ಳಾರಿ / ಕಂಪ್ಲಿ: ಮೇರಾ ಯವ ಭಾರತ್ ಬಳ್ಳಾರಿ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಅಸೋಸಿಯೇಷನ್, ಕಣ್ವಿತಿಮ್ಮಲಾಪುರ ಹಾಗೂ ವಿಕಾಸ ಕೈಗಾರಿಕಾ ಶಿಕ್ಷಣ ಸಂಸ್ಥೆ ಕಂಪ್ಲಿ ಇವರ ಸಂಯುಕಾಶ್ರದಲ್ಲಿ ಇಂದು ವಿಕಾಸ್ ಐ.ಟಿ.ಐ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಸಸಿಗೆ ನೀರೆರೆಯುವದರ ಮೂಲಕ ಸ್ವಾಮಿ ವಿವೇಕಾನಂದ ಯೂತ್ ಅಸೋಸಿಯೇಷನ್ ಅಧ್ಯಕ್ಷ ಜಗದೀಶ್ ಪೂಜಾರ್ ಚಾಲನೆ ನೀಡಿದರು ನಂತರ ಮಾತನಾಡಿ ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನದಲ್ಲಿ ಸಮಾನತೆಗೆ ಅವಕಾಶವಿದೆ. ಡಾ. ಬಾಬ ಸಹೇಬ್ ಅಂಬೇಡ್ಕರ್ ಸಂವಿಧಾನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಸಂವಿಧಾನ ಶಿಲ್ಪಿ ಎಂದು ಬಿರುದನ್ನು ಪಡೆದವರು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಬೋದಿಸಲಾಯಿತು.ವಿಜಯ ಕರುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಿ.ಮಂಜುಳಾ ವೇದಿಕೆ ಮೇಲಿದ್ದ ಮಾತನಾಡಿದರು. ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಬಿ.ವೀರೇಶ ಹಾಗೂ ಸೋಮಪ್ಪ, ವಿರೇಶ ಎಮ್ಮಿಗನೂರು, ಸಿಬ್ಬಂದಿ ವೀರಭದ್ರ ಮುಂತಾದವರಿದ್ದರು.ವರದಿ : ಜಿಲಾನಸಾಬ್ ಬಡಿಗೇರ್
