ಜನಸ್ನೇಹಿ ಪೊಲೀಸ್ ಇನ್ನು ಮುಂದೆ ಮನೆ ಮನೆಗೆ: ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್….

ಗಂಗಾವತಿ: ನಗರದ ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ನೇತೃತ್ವದಲ್ಲಿ ಪೊಲೀಸ್ ಕಚೇರಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರನ್ನು ಮತ್ತು ಸಮಾಜದ ಹಿರಿಯರನ್ನು ಕರೆದು ಸಭೆಯನ್ನು ನಡೆಸಿ ಪೋಲಿಸ್ ಇನ್ನು ಮುಂದೆ ಪ್ರತಿಯೊಬ್ಬರ ಮನೆ ಬಾಗಿಲಿಗೆ ತೆರಳಿ ಜನಸ್ನೇಹಿಯಾಗಿ ಪರಿವರ್ತನೆಗೊಳ್ಳಲಿದೆ. ಪೋಲಿಸ್ ಅಧಿಕಾರಿಗಳೆಂದರೆ ಯಾರು ಭಯಪಡುವ ಅವಶ್ಯಕತೆ ಇಲ್ಲ ನಿಮ್ಮ ಸೇವೆಗಾಗಿ ನಾವು ಸದಾ ಸಿದ್ದರಿದ್ದು, ಯಾರು ಭಯಪಡದೆ ತಮಗೆ ಆಗಿರುವ ಅನ್ಯಾಯವನ್ನು ತಿಳಿಸುವ ಮೂಲಕ ಪೊಲೀಸರೊಂದಿಗೆ ಜನಸ್ನೇಹಿಯಾಗಿ ಸಾರ್ವಜನಿಕರು ಬಳಕೆ ಆಗಬೇಕಾಗಿದೆ ಮತ್ತು ಸಾರ್ವಜನಿಕರ ಕುಂದು- ಕೊರತೆಗಳನ್ನು ಆಲಿಸಲು ಪೊಲೀಸ್ ಸಿಬ್ಬಂದಿ ನೇರವಾಗಿ ಮನೆ ಮನೆಗೆ ಹೋಗಿ ಕಾನೂನ ಕಟ್ಟಳೆಗಳನ್ನು ತಿಳಿ ಹೇಳಿ ಜನರೊಂದಿಗೆ ಜನರಿಗಾಗಿ ನಾವು ಸೇವೆ ಮಾಡಲು ಸದಾ ಸಿದ್ದರಿದ್ದು, ಜನರೊಂದಿಗೆ ಬೆರೆತು ಪೋಲಿಸ್ ಎಂಬ ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ರಾಜ್ಯ ಸರ್ಕಾರದ ಗೃಹ ಮಂತ್ರಿ ಮಾನ್ಯ ಗೌರಾನ್ವಿತ ಪರಮೇಶ್ವರವರ ಆಶೆಯು ಇದೇ ಇದ್ದು, ಅವರ ಆಸೆಯಂತೆ ಮತ್ತು ಕಾನೂನಿನ ತಿಳುವಳಿಕೆಯನ್ನು ಸಾರ್ವಜನಿಕರಿಗೆ ತಿಳಿಸಲು ವಿಶೇಷವಾದ ತಂಡದೊಂದಿಗೆ ಪೊಲೀಸ್ ಇಲಾಖೆ ವಾರ್ಡಿನಲ್ಲಿ ಸಂಚರಿಸಿ ಸಭೆಗಳನ್ನು ನಡೆಸುವುದರ ಮೂಲಕ ಪೊಲೀಸರು ಜನರೊಂದಿಗೆ ಜನಸೇವೆಯಾಗಿ ಜನಸ್ನೇಹಿಯಾಗಿ ಇರಲು ಇದೊಂದು ಅವಕಾಶವಾಗಿದೆ ಹಾಗಾಗಿ ಇನ್ನು ಮುಂದೆ ಜನರಿಗಾಗಿ ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದೆ ಎಂದು ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಸಭೆಯಲ್ಲಿ ತಿಳಿಸಿದ್ದಾರೆ. ಜೊತೆಗೆ ಕಾನೂನು ಬಾಹಿರ ಚಟುವಟಿಕೆಗಳನ್ನು ಸಮಾಜದಲ್ಲಿ ಯಾರೇ ನಡೆಸಿದರು ಪೊಲೀಸ್ ಇಲಾಖೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ಸಹ ನೀಡಿದರು. ಈ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆ ಪಿಐ ಪ್ರಕಾಶ ಮಾಳಿ.ಪಿಎಸ್ಐ ಟಿ.ಜಿ.ನಾಗರಾಜ,ಮತ್ತು ಪೊಲೀಸ್ ಸಿಬ್ಬಂದಿಗಳು ಮತ್ತು ಹಿರಿಯರು ಹಾಗೂ ಯುವಕರು ಸೇರಿದಂತೆ ಇತರರು ಇದ್ದರು.

