ನೀರಮಾನ್ವಿ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ವಸತಿ ನಿಲಯ ಮಂಜೂರು ಮಾಡಲು ಮನವಿ…

ಮಾನ್ವಿ ಸಮೀಪದ ನೀರಮಾನ್ವಿಗ್ರಾಮದಲ್ಲಿ ಇಂದು ರಾಯಚೂರು ಗ್ರಾಮೀಣ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಹಾಗೂ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಉದ್ಘಾಟನೆ ಗಾಗಿ ಶ್ರೀ ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಸಚಿವರು ತಾವರಗೇರಾ ದಿಂದ ಯರಗೇರಾ ಗೆ ಹೋಗುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬೇಡರ ಸಮಿತಿ ಬೆಂಗಳೂರು ಗ್ರಾಮ ಘಟಕ ನೀರಮಾನ್ವಿ ಘಟಕದ ಪದಾಧಿಕಾರಿಗಳು ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಮಹಿಳಾ ಸ್ವಸಹಾಯ ಸಂಘ ನೀರಮಾನ್ವಿ ವಿವಿಧ ಸಮಾಜಗಳ ಗ್ರಾಮದ ಮುಖಂಡರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಶ್ರೀ ರೇಣುಕಾ ಯಲ್ಲಮ್ಮದೇವಸ್ಥಾನದ ಹತ್ತಿರ ಮಾನ್ಯ ಸಚಿವರಿಗೆ ನೀರಮಾನ್ವಿ ಗ್ರಾಮ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರ ತಾಲೂಕು ಪಂಚಾಯತಿ ಕ್ಷೇತ್ರ ಗ್ರಾಮ ಪಂಚಾಯಿತಿ ಇದ್ದು ಇ ಗ್ರಾಮದಲ್ಲಿ RMSA ಆದರ್ಶ ಪ್ರೌಡಶಾಲೆ ಹಾಗೂ ಪಿ ಯು ವಿಜ್ಞಾನ ವಾಣಿಜ್ಯ ವಿಭಾಗ ಹಾಗೂ ಸರಕಾರಿ ಪ್ರೌಢಶಾಲೆ ಹಾಗೂ ಸರಕಾರಿ ಪಿಎಂ ಶ್ರೀ ಶಾಲೆ ಇದ್ದು ಈ ಒಂದು ಗ್ರಾಮಕ್ಕೆ ಬೇರೆ ತಾಲೂಕಿನಿಂದ ಸುಮಾರು 300 ರಿಂದ 450 ರ ವರೆಗೆ ವಿದ್ಯಾರ್ಥಿಗಳು ಬರುತ್ತಾರೆ ಅದರಲ್ಲಿ ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ಮಕ್ಕಳು ಹೆಚ್ಚಾಗಿದ್ದು ಇನ್ನೂ ಅನೇಕ ಸಮಾಜದ ವಿದ್ಯಾರ್ಥಿಗಳು ಬರುತ್ತಿದ್ದು ಗ್ರಾಮೀಣ ಪ್ರದೇಶದಿಂದ ವಿದ್ಯಾರ್ಥಿನಿಯರಿಗೆ ಸರಿಯಾದ ಬಸ್ಗಳ ವ್ಯವಸ್ಥೆ ಇರುವುದಿಲ್ಲ ಸಮಯಕ್ಕೆ ಬಾರದ ಬಸ್ಸುಗಳು ಹೀಗಾಗಿ ವಿದ್ಯಾರ್ಥಿನಿಯರಿಗೆ ಬಹಳ ತೊಂದರೆಯಾಗುತ್ತಿದೆ ಕಾರಣ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ ತಾವು ನೀರಮಾನ್ವಿ ಗ್ರಾಮಕ್ಕೆ ವಸತಿ ನಿಲಯ ಮಂಜೂರಿ ಮಾಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕೆಂದು ಮಾಜಿ ಯೋಧ ಬೇಡರಸಮಿತಿ ಕಾರ್ಯಕಾರಿಣಿ ಸದಸ್ಯ ಜೆಲ್ಲಿ ಆಂಜನೇಯ್ಯ ನೀರಮಾನ್ವಿ ಮಾನ್ಯ ಸಚಿವರಲ್ಲಿ ಮನವಿ ಮಾಡಿಕೊಂಡರು ಈ ಸಂದರ್ಭದಲ್ಲಿ ಗ್ರಾಮ ಘಟಕದ ಅಧ್ಯಕ್ಷರಾದ ಜೆಲ್ಲಿ ಗೊಟ್ಟ ಹನುಮಂತ ಭೀಮಣ್ಣ ದೊರೆ ಜೆಲ್ಲಿ ಭೀಮರಾಯ ಮಹೇಶ್ ಪೇಗಲ್ ನಾಗರಾಜ ದೊರೆ ವಿನೋದ ನಾಯಕ ಚಂದ್ರಗೌಡ ನರಸಿಂಹ ಉಪ್ಪಾರ್ ತಟ್ಟಿ ಈರಣ್ಣ ನಾಗು ಯಾದವ್ ಮಂಜುನಾಥ್ ಕೋಳಿಕಾಲ್ ಯಲ್ಲಪ್ಪ ಮೇಸ್ತ್ರಿ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಹಾಗೂ ನೀರಮಾನ್ವಿ ಶಿಕ್ಷಣ ಪ್ರೇಮಿಗಳು ಹಲವಾರು ಸಮುದಾಯದ ಮುಖಂಡರು ಹಾಜರಿದ್ದರು
