ಶ್ರೀ ಶಾರದಾಂಬಿಗೆ ಎಂಟನೇ ವಾರ್ಷಿಕೋತ್ಸವದ ಸಂಭ್ರಮ…

ಶ್ರೀ ಶಾರದಾಂಬಿಗೆ ಎಂಟನೇ ವಾರ್ಷಿಕೋತ್ಸವದ ಸಂಭ್ರಮ…


ಗಂಗಾವತಿ. ಇಲ್ಲಿನ ನಗರಸಭೆ ವ್ಯಾಪ್ತಿಯ ಶಾರದಾ ನಗರದಲ್ಲಿರುವ ಶೃಂಗೇರಿ ಶಾರದಾ ಪೀಠದ ಶಂಕರ ಮಠದಲ್ಲಿ ಶುಕ್ರವಾರದಂದು ಶ್ರೀ ಶಾರದಾದೇವಿ ಸೇರಿದಂತೆ ಪರಿವಾರ ದೇವರುಗಳ ಎಂಟನೆಯ ವಾರ್ಷಿಕೋತ್ಸವ ಸಮಾರಂಭ ಶ್ರದ್ಧೆ ಭಕ್ತಿಯಿಂದ ಜರುಗಿತು.

ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ಹಾಗೂ ಸಹಾಯಕ ರಾಘವೇಂದ್ರ ನೇತೃತ್ವದಲ್ಲಿ ಮೂಲ ದೇವರುಗಳಿಗೆ ಪಂಚಾಮೃತ ಅಭಿಷೇಕ ಅಷ್ಟೋತ್ತರ ಪಾರಾಯಣ ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಧರ್ಮದರ್ಶಿ ನಾರಾಯಣರ ವೈದ್ಯ ಮಾತನಾಡಿ ಶೃಂಗೇರಿ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ಅನುಗ್ರಹದ ಮೇರೆಗೆ ಶ್ರೀಕರ ಮಹಾಸ್ವಾಮಿಗಳು ಕಳೆದ ಎಂಟು ವರ್ಷದ ಹಿಂದೆ ಶ್ರೀ ಶಾರದಾಂಬ ದೇವಿ ಸೇರಿದಂತೆ ಪರಿವಾರ ದೇವರುಗಳ ಸ್ಥಾಪನೆ ಮಾಡಿಸುವುದರ ಮೂಲಕ ಭತ್ತದ ಕಣಜವನ್ನು ವಿದ್ಯಾ ಕಣಜವನ್ನಾಗಿ ರೂಪಿಸುವಲ್ಲಿ ದೇಗುಲ ಸರ್ವ ಜನಾಂಗದವರಿಗೆ ಆರಾಧ್ಯ ದೈವ ವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶೇಷಗಿರಿ ಗಡಾದ್. ಅನಿಲ್ ಅಳವಂಡಿ ಕರ್. ಕಾಶಿನಾಥ್ ಜೋಶಿ. ಸೇರಿದಂತೆ ಸೇವಾ ಕರ್ತರು ಪಾಲ್ಗೊಂಡಿದ್ದರು…

Leave a Reply

Your email address will not be published. Required fields are marked *