ಗಂಗಾವತಿಯ ಚನ್ನಬಸವ ಕೊಟಗಿ ಅವರಿಗೆ ಗೌರವ ಡಾಕ್ಟರೇಟ್…

ಗಂಗಾವತಿಯ ಚನ್ನಬಸವ ಕೊಟಗಿ ಅವರಿಗೆ ಗೌರವ ಡಾಕ್ಟರೇಟ್…

ಗಂಗಾವತಿ: ನಗರದ ನಿವಾಸಿಯಾದ ಚನ್ನಬಸವ ಕೊಟಗಿಯವರು ಒಬ್ಬ ವರದಿಗಾರರಾಗಿ ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ೧೫ ವರ್ಷಗಳಿಂದ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಹರಿಯಾಣ ರಾಜ್ಯದ ಫರಿದಾಬಾದ್‌ನ ಮ್ಯಾಜಿಕ್ & ಆರ್ಟ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಿದೆ. ಚನ್ನಬಸವ ಕೊಟಗಿಯವರು ಒಬ್ಬ ಕಲಾವಿದರಾಗಿ, ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಾ, ಐತಿಹಾಸಿಕ ಪ್ರೇಕ್ಷಣಿಯ ಸ್ಥಳಗಳಲ್ಲಿ ಪ್ರವಾಸಿಗರ ಮಾರ್ಗದರ್ಶಕರಾಗಿ, ಸಂಘಟಕರಾಗಿ, ಸಂಘ-ಸAಸ್ಥೆಗಳ ಪ್ರತಿನಿಧಿಯಾಗಿ, ಗಣ್ಯವ್ಯಕ್ತಿಗಳ ಆಪ್ತ ಸಹಾಯಕರಾಗಿ ಹತ್ತಾರು ಸೇವೆಗಳನ್ನು ಸಲ್ಲಿಸುತ್ತಾ, ವಿವಿಧ ಖಾಸಗಿ ಟಿ.ವಿ ಚಾನೆಲ್‌ಗಳು ಹಾಗೂ ಪತ್ರಿಕೆಗಳಲ್ಲಿ ಕರ್ತವ್ಯನಿರ್ವಹಿಸಿ, ಪ್ರಸ್ತುತ ಭಾರತ ಸರ್ಕಾರದ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರೊಡಕ್ಷನ್ ಅಸಿಸ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಹರಿಯಾಣ ರಾಜ್ಯದ ಫರಿದಾಬಾದ್‌ನ ಮ್ಯಾಜಿಕ್ & ಆರ್ಟ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಿದೆ. ಅವರಿಗೆ ಸೆಪ್ಟೆಂಬರ್-೧೩ ಫರಿದಾಬಾದ್‌ನ ದಿ ಕ್ಯಾಸ್ಟಲ್ ಆಫ್ ಆರ್ಟ್ ಥಿಯೇಟರ್ ನಲ್ಲಿ ನಡೆಯುವ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.ಸದರಿ ವಿಶ್ವವಿದ್ಯಾಲಯದ ನಿರ್ದೇಶಕರು, ಡೀನ್, ರಿಜಿಸ್ಟಾçರ್ ಹಾಗೂ ಸಂಸ್ಥೆಯ ಸಂಪರ್ಕ ಅಧಿಕಾರಿ ಶ್ರೀಮತಿ ಆಶಾ ಅವರಿಗೆ ಚನ್ನಬಸವ ಕೊಟಗಿಯವರು ಕೃತಜ್ಞತೆ ಸಲ್ಲಿಸಿರುತ್ತಾರೆ.ಇವರಿಗೆ ಕರ್ನಾಟಕ ರಾಜ್ಯದ ಸಮಸ್ತ ನಾಗರಿಕರು, ಕಲಾವಿದರು, ಪತ್ರಕರ್ತರು, ಸಾಹಿತಿಗಳು, ಸಂಘ-ಸoಸ್ಥೆಗಳು ಅಭಿನಂದನೆಗಳನ್ನು ಸಲ್ಲಿಸಿವೆ.ಮಾಹಿತಿಗಾಗಿಚನ್ನಬಸವ ಕೊಟಗಿ ಐತಿಹಾಸಿಕ ಸ್ಥಳಗಳ ಮಾರ್ಗದರ್ಶಕರು, ಹಂಪಿ, ಸಾ|| ಗಂಗಾವತಿಮೊ.ನA: ೯೪೮೧೦೮೭೦೦೯

Leave a Reply

Your email address will not be published. Required fields are marked *