ಹೊಸಳ್ಳಿಯಲ್ಲಿ ರಕ್ತರಾತ್ರಿ : ಪತ್ರಕರ್ತ ನಾಗರಾಜ್ ಇಂಗಳಗಿ ನಟನೆ…

ಗಂಗಾವತಿ: ಬಳ್ಳಾರಿ ಬಳಿಯ ಹಾಗಲೂರು ಹೊಸಳ್ಳಿಯಲ್ಲಿ ಗಣೇಶ ಚತುರ್ಥಿ ನಿಮಿತ್ಯ ಅಗಷ್ಟ್ 27 , ಬುಧವಾರ ರಾತ್ರಿ 9 ಕ್ಕೆ ಕಂದಗಲ್ ಹನುಮಂತರಾಯ ವಿರಚಿತ ರೌದ್ರಮಯ ರಕ್ತರಾತ್ರಿ ಪೌರಾಣಿಕ ನಾಟಕವನ್ನು ರಾಜ್ಯದ ಆಯ್ದ ಕಲಾವಿದರಿಂದ ಪ್ರದರ್ಶನಗೊಳ್ಳಲಿದ್ದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಗಂಗಾವತಿ ತಾಲೂಕು ಅಧ್ಯಕ್ಷ ಹಾಗು ಸಿಜಿಕೆ ರಂಗ ಪುರಸ್ಕಾರ ಪಡೆದ ಚಿತ್ರ ನಟ ನಾಗರಾಜ್ ಇಂಗಳಗಿ ಶಕುನಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.ವಿಶ್ವರಂಗ ಕಲಾ ಟ್ರಸ್ಟ್ , ಅಧ್ಯಕ್ಷೆ ಜಯಶ್ರೀ ಪಾಟೀಲ್ ಬಳ್ಳಾರಿ ಇವರ ನೇತೃತ್ವದಲ್ಲಿ ಪ್ರದರ್ಶನ ಜರುಗಲಿದ್ದು, ಖ್ಯಾತ ನಟರಾದ ಚಿದಾನಂದ ಗವಾಯಿಗಳು (ಕೃಷ್ಣ ), ಪರಶುರಾಮ ಹಂದಿಹಾಳ (ಅಶ್ವತ್ಥಾಮ), ಜಯಶ್ರೀ ಪಾಟೀಲ್ ( ದ್ರೌಪದಿ), ಅಮರೇಶ್ ಹಿರೇಮಠ (ದುರ್ಯೋಧನ), ರಾಮೇಶ್ವರ ಹಿರೆಮಠ (ಭೀಮ), ವೀಣಾ ಆಧೋನಿ (ಭಾನುಮತಿ),ಮೀನಾಕ್ಷಿ ಬಳ್ಳಾರಿ (ಉತ್ತರೆ) ಹಾಗು ಸಾವಿತ್ರಮ್ಮ ದಾವಣಗೆರೆ (ಮದಹಂಸಿ) ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಿಪ್ಪೇಸ್ವಾಮಿ ಸೂಲದಹಳ್ಳಿ ಸಂಗೀತ ನಿರ್ವಹಿಸಲಿದ್ದು, ಮುರಳಿ ಚಳ್ಳಕೇರಾ ಮೇಕಪ್ ಮಾಡಲಿದ್ದಾರೆ.ನಶಿಸುತ್ತಿರುವ ಪೌರಾಣಿಕ ನಾಟಕ ಕಲೆ ಉಳಿವಿಗೆ ಶ್ರಮಿಸುತ್ತಿರುವ ಕಲಾವಿದರನ್ನು ಪ್ರೋತ್ಸಾಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಿ ಯಶಸ್ವಿಗೊಳಿಸಲು ಅಧ್ಯಕ್ಷೆ ಜಯಶ್ರೀ ಪಾಟೀಲ್ ಕೋರಿದ್ದಾರೆ.
