ಕೂಡ್ಲಿಗಿ : ಸೋಲಾರ್ ಹಾಗೂ ವಿಂಡೋ ಪವರ್ ಕಂಪನಿಗಳ ಅಟ್ಟಾಹಾಸದ ವಿರುದ್ಧ , ಸದನದಲ್ಲಿ ತೀವ್ರ ಆಕ್ರೋಶ ವ್ಯಕತಪಡಿಸಿದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್…

ಕೂಡ್ಲಿಗಿ : ಸೋಲಾರ್ ಹಾಗೂ ವಿಂಡೋ ಪವರ್ ಕಂಪನಿಗಳ ಅಟ್ಟಾಹಾಸದ ವಿರುದ್ಧ , ಸದನದಲ್ಲಿ ತೀವ್ರ ಆಕ್ರೋಶ ವ್ಯಕತಪಡಿಸಿದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್…

ವಿಜಯನಗರ ಜಿಲ್ಲೆ ಕೂಡ್ಲಿಗಿ : ಕ್ಷೇತ್ರದಲ್ಲಿ ವಿಂಡೋ ಪವರ್ ಹಾಗೂ ಸೋಲಾರ್ ಪವರ್ ಕಂಪನಿಗಳ , ಮಿತಿ ಮೀರಿದ ಅಟ್ಟಹಾಸದ ವಿರುದ್ಧ. ಕ್ಷೇತ್ರದ ಶಾಸಕರಾದ ಡಾ॥ ಎನ್ ಟಿ ಶ್ರೀನಿವಾಸ್ ರವರು , ತೀವ್ರ ಆಕ್ರೋಶ ವ್ಯೆಕ್ತಪಡಿಸಿದ್ದಾರೆ. ಅವರು ಸದನದಲ್ಲಿ ಪವನ ವಿದ್ಯುತ್ ಗಾಳಿ ಯಂತ್ರಗಳ ಅಬ್ಬರ , ಹಾಗೂ ಜನರ ಬವಣೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಅವರುತಡರಾತ್ರಿಯಲ್ಲಿ ನಡೆದ ವಿಶೇಷ ಅಧಿವೇಶನದ ಸಂದರ್ಭದಲ್ಲಿ , ಪವನ ವಿದ್ಯುತ್ (Windmill) ಘಟಕಗಳ ಕಿರಿಕಿರಿ , ಹಾಗೂ ಇದರಿಂದ ರೈತರು ಸಾರ್ವಜನಿಕರು ಮತ್ತು ಮೂಕ ಪ್ರಾಣಿಗಳು , ಮಕ್ಕಳು ವೃದ್ಧರು ಹೃದಯ ರೋಗಿಗಳು ಅನುಭವಿಸುತ್ತಿರುವ ನರಕಯಾತನೆಯನ್ನು ಅರ್ಥೈಸಿದರು. ವನ್ಯ ಪ್ರಾಣಿಗಳು ವನವನ್ನು ಬಿಟ್ಟು , ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿದ್ದು. ಇದರಿಂದಾಗಿ ಗ್ರಾಮೀಣ ಪ್ರದೇಶದವರೆಲ್ಲಾ ನೆಮ್ಮದಿ ಕಳೆದುಕೊಂಡಿದ್ದಾರೆ. ವಿಂಡೋ ಪ್ಯಾನ್ಗಳ ಅಬ್ಭರಕ್ಕೆ ಅಸಂಖ್ಯಾತ ಗ್ರಾಮಸ್ಥರು , ಮಾನಸಿಕ ಗಂಭೀರ ಸಮಸ್ಯೆಗಳಿಂದ ನರಳಾಡುತ್ತಿದ್ದಾರೆ. ಅಸಂಖ್ಯಾತ ಪ್ರತಿಭಾನ್ವಿತ ಮಕ್ಕಳು ಯುವಕರು , ಶೈಕ್ಷಣಿಕವಾಗಿ ವಂಚಿತರಾಗುವ ಸೂಚನೆಗಳು ಕಾಣಿಸುತ್ತಿವೆ.ಗ್ರಾಮಗಳಲ್ಲಿನ ರಸ್ಥೆಗಳು ಹೊಲಗಳು ಅನಧಿಕೃತ ಭಾರಿ ವಾಹನಗಳ ಸಂಚಾರದಿಂದಾಗಿ , ಕೆಟ್ಟು ಗ್ರಾಮೀಣ ಜನರ ಜೀವನ ದುಸ್ಥರಕ್ಕೆ ಈಡುಮಾಡಲಾಗಿದೆ. ವಿಂಡೋ ಪ್ಯಾನ್ ಗಳ ಹಾವಳಿ ನಿಯಂತ್ರಣಕ್ಕಾಗಿ , ನಿರ್ಮಾಣ ಹಂತದಲ್ಲಿಯೇ ಅತ್ಯಂತ ಕಠಿಣ ನಿಯಮಗಳು ಹಾಗೂ ಸೂಕ್ತ ಕಾನೂನುಗಳನ್ನು ಜಾರಿತರಬೇಕೆಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈಗಾಗಲೇ ಸಾವಿರಾರು ಜನ ರೈತರು ಅನೆೇಕ ಗ್ರಾಮಗಳು ನೆಮ್ಮದಿ ಕಳೆದು ಕೊಂಡು ಸಾಕಷ್ಟು ನಷ್ಟ ಅನುಭವಿಸುತ್ತಿದ್ದು , ಕಾರಣ ಅವರಿಗೆ ಸಂಬಂಧಿಸಿದ ಇಲಾಖೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕಿದೆ. ಮತ್ತು ಕಂಪನಿಗಳಲ್ಲಿ ಸ್ಥಳೀಯ ಅರ್ಹ ಯುವಕರಿಗೆ , ಉಧ್ಯೋಗ ಕಲ್ಪಿಸಿಕೊಡುವುದು ಖಡ್ಡಾಯಗೊಳಿಸಿ ಅಗತ್ಯ ಕಾನೂನು ಜಾರಿ ತರುವಂತೆ. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ಸದನದಲ್ಲಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಮತ್ತು ಸರ್ಕಾರದ ಹಾಗೂ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿರುವ , ಹಲವು ಕಂಪನಿಗಳ ವಿರುದ್ಧ ಶೀಘ್ರವೇ ಸೂಕ್ತ ಶಿಸ್ಥು ಕ್ರಮ ಜರುಗಿಸಬೇಕಿದೆ. ಹಾಗೂ ಅದಕ್ಕಾಗಿ ಸರ್ಕಾರ ಕೂಡಲೇ ವಿಶೇಷ ಪರಿಶೀಲನಾ ತಂಡವನ್ನು , ಕ್ಷೇತ್ರದಲ್ಲಿ ಪರಿಶೀಲಿಸಲು ನಿಯೋಜಿಸಿ ಕಳುಹಿಸಿಕೊಡಬೇಕೆೆಂದು ಅವರು ಒತ್ತಾಯಿಸಿದರು. ಸಂಬಂಧಿಸಿದಂತೆ ಸರ್ಕಾರದಿಂದ ಹಾಗೂ ಸಂಬಂಧಿಸಿದ ಇಲಾಖೆಯ ಸಚಿವರಿಂದ , ಶಾಸಕರ ಹಕ್ಕೊತ್ತಾಯಕ್ಕೆ ಸಕಾರಾತ್ಮಕ ಸ್ಪಂಧನೆ ದೊರಕಿರುವ ಲಕ್ಷಣಗಳು ಸದನದಲ್ಲಿ ಕಂಡುಬಂದಿದೆ.

✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ -9008937428 / 8151937428*

Leave a Reply

Your email address will not be published. Required fields are marked *