ಪ್ರಜಾಪ್ರಭತ್ವದ ರಚನೆಗಾಗಿ ಮತದಾನದ ಪಾತ್ರ ಅತಿಮುಖ್ಯವಾಗಿದೆ : ತಹಶೀಲ್ದಾರ್ ಜೂಗಲ್ ಮಂಜುನಾಯಕ..

ಪ್ರಜಾಪ್ರಭತ್ವದ ರಚನೆಗಾಗಿ ಮತದಾನದ ಪಾತ್ರ ಅತಿಮುಖ್ಯವಾಗಿದೆ : ತಹಶೀಲ್ದಾರ್ ಜೂಗಲ್ ಮಂಜುನಾಯಕ..

ಕಂಪ್ಲಿ: ಪ್ರಜಾಪ್ರಭತ್ವದ ರಚನೆಗಾಗಿ ಮತದಾನದ ಪಾತ್ರ ಅತಿಮುಖ್ಯವಾಗಿದೆ ಎಂದು ತಹಶೀಲ್ದಾರ್ ಜೂಗಲ್ ಮಂಜುನಾಯಕ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಹಾಗೂ ಪ್ರತಿಜ್ಞಾವಿಧಿ ಬೋಧಿಸಿದ ನಂತರ ಮಾತನಾಡಿ, ದೇಶದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬ ಮತದಾರರ ಕೈಯಲ್ಲಿದೆ. ಆದ್ದರಿಂದ ರಾಷ್ಟ್ರೀಯ ಮತದಾರರ ದಿನದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದ್ದು, ಜನರು ಮತದಾನದ ಜಾಗೃತಿ ಹೊಂದಬೇಕು ಎಂದರು. ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಸಿದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ತಾಪಂ ಇಒ ಆರ್.ಕೆ.ಶ್ರೀಕುಮಾರ, ಶಿರಸ್ತೇದಾರರಾದ ಪಂಪಾಪತಿ, ರಮೇಶ, ಮುಖಂಡರಾದ ಎ.ಹನುಮಂತಪ್ಪ, ಕೆ.ಶ್ರೀನಿವಾಸ, ಪಾಂಡುರಂಗ, ಎ.ಅಂಜಿನಪ್ಪ, ಹೆಚ್.ಈರಣ್ಣ, ಜಿ.ಎಚ್.ಗಾದಿಲಿಂಗ, ಕೆ.ಆನಂದ, ಕೆ.ಗೋಪಾಲ ಸೇರಿದಂತೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *