ಸಂವಿಧಾನದ ಆಶಯದಂತೆ ಬದುಕಿ ತಾ ಪಂ ಇ ಓ ರಾಮರೆಡ್ಡಿ ಪಾಟೀಲ್ ಹೇಳಿಕೆ 77 ನೇ ಗಣರಾಜ್ಯೋತ್ಸವ ಆಚರಣೆ….

ಸಂವಿಧಾನದ ಆಶಯದಂತೆ ಬದುಕಿ ತಾ ಪಂ ಇ ಓ ರಾಮರೆಡ್ಡಿ ಪಾಟೀಲ್ ಹೇಳಿಕೆ 77 ನೇ ಗಣರಾಜ್ಯೋತ್ಸವ ಆಚರಣೆ….

ಗಂಗಾವತಿ : ತಾಲೂಕು ಪಂಚಾಯತ್ ಆವರಣದಲ್ಲಿ 77 ನೇ ಗಣರಾಜ್ಯೋತ್ಸವ ಅಂಗವಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್ ಅವರು ಧ್ವಜಾರೋಹಣ ನೆರವೇರಿಸಿದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್ ಅವರು ಮಾತನಾಡಿ, ವೈವಿದ್ಯತೆಯಲ್ಲಿ ಏಕತೆ ಇರುವ ರಾಷ್ಟ್ರ ನಮ್ಮದಾಗಿದೆ. ಪ್ರತಿಯೊಬ್ಬರೂ ಸಂವಿಧಾನದ ಆಶಯದಂತೆ ಬದುಕಬೇಕು.

ವಿಕಸಿತ ಭಾರತ -2047 ರ ಗುರಿ ತಲುಪಲು ಸಂಕಲ್ಪ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರಕಾರದ ಯೋಜನೆಗಳನ್ನು ಎಲ್ಲರಿಗೂ ತಲುಪಿಸಲು ಕಾರ್ಯಪ್ರವೃತ್ತರಾಗಬೇಕು ಎಂದರು.ಮಹನೀಯರಾದ ಮಹಾತ್ಮ ಗಾಂಧೀಜಿ & ಡಾ.ಬಿಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.ಈ ವೇಳೆ, ತಾಪಂ ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್, ವ್ಯವಸ್ಥಾಪಕರಾದ ನಿಜಾಮುದ್ದಿನ್, ವಿಷಯ ನಿರ್ವಾಹಕರು, ಎಲ್ಲ ಅಧಿಕಾರಿಗಳು & ಸಿಬ್ಬಂದಿ ವರ್ಗದವರು ಇದ್ದರು.

Leave a Reply

Your email address will not be published. Required fields are marked *