ಡಾ.ಅಂಬರೀಶ ಕನ್ನಡ ಚಿತ್ರರಂಗದ ಕರ್ಣ:ಪತ್ರಕರ್ತ ಕೆ.ನಿಂಗಜ್ಜ.ಸಂಗೀತ ಸ್ವರಾಂಜಲಿ ಕಲಾ ತಂಡದಿಂದ ಡಾ.ಅಂಬರೀಶ್ ಪುಣ್ಯ ಸ್ಮರಣೆ.

ಗಂಗಾವತಿ:ಡಾ.ಅಂಬರೀಶ್ ಕನ್ನಡ ಚಿತ್ರರಂಗದ ಕರ್ಣರಾಗಿದ್ದಾರೆಂದು ಪತ್ರಕರ್ತ ಹಾಗೂ ಸಂಗೀತ ಸ್ವರಾಂಜಲಿ ಕಲಾತಂಡದ ಹಿರಿಯ ಹವ್ಯಾಸಿ ಕಲಾವಿದರಾದ ಕೆ.ನಿಂಗಜ್ಜ ಹೇಳಿದರು.
ಅವರು ನಗರದ ಪರಶುರಾಮ ಕರೋಕೆ ಸ್ಟುಡಿಯೋದಲ್ಲಿ ಸಂಗೀತ ಸ್ವರಾಂಜಲಿ ಕಲಾ ತಂಡದ ವತಿಯಿಂದ ಹಮ್ಮಿಕೊಂಡಿದ್ದ ಡಾ.ಅಂಬರೀಶ್ ಅವರ 7 ನೇಯ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಡಾ.ಅಂಬರೀಶ್ ಅವರು ಪುಟ್ಟಣ ಕಣಗಲ್ ಅವರು ಗರಡಿಯಲ್ಲಿ ಪಳಗಿದ ಅಂಬರೀಶ್ ಅವರು ನೂರಾರು ಸಿನೆಮಾಗಳಲ್ಲಿ ನಟಿಸಿ ಡಾ.ರಾಜಕುಮಾರ ನಂತರ ಚಿತ್ರರಂಗದ ಹಿರಿಯಣ್ಣನಂತೆ ಇದ್ದರು. ಕಲಾವಿದರು ಸೇರಿ ಪ್ರತಿಯೊಬ್ಬರಿಗೆ ನೆರವಾಗಿದ್ದರು. ರಾಜಕೀಯವಾಗಿ ಸಹ ಕರುನಾಡಿಗೆ ಅತ್ಯುತ್ತಮ ಕೆಲಸ ಮಾಡಿದ್ದಾರೆ.ಕಾವೇರಿ ವಿಷಯದಲ್ಲಿ ಕೇಂದ್ರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದರು.
ಡಾ.ಅಂಬರೀಶ್ ಅವರ ಸಿನಿ ಜೀವನ ಹಾಗೂ ರಾಜಕೀಯ ಕುರಿತು ಹವ್ಯಾಸಿ ಕಲಾವಿದರಾದ ತಿಪ್ಪೇಸ್ವಾಮಿ,ವೆಂಕಟೇಶ ಧೂಳಾ, ಪರಶುರಾಮ ದೇವರಮನೆ,ಹನುಮಂತಪ್ಪ ಹುಲಿಹೈದರ್, ಯಲ್ಲಪ್ಪ ಪೊಲಕಾಲ್,ಗಿರಿಜಮ್ಮ, ಗೌಸಿಯಾ,ಲಲಿತಮ್ಮ, ರಾಜು ಕನಕಪ್ಪ ಹೊಸಳ್ಳಿ, ಐಲಿ ಮಾರುತಿ,ಐಲಿ ರಮೇಶ್, ನಾರಾಯಣ, ಶಂಕರ್,ವಿಕ್ರಮ್ ಬೆಂಗಳೂರು,ರಾಜು ಹೊಸಳ್ಳಿ, ದುರುಗೇಶ ಸಾಣಾಪೂರ ಸೇರಿ ಅನೇಕರಿದ್ದರು

