ದಸರಾ ಉತ್ಸವ : ಹಂಚಿನಮನಿ, ಇಂಗಳಗಿ, ಉಮಶಂಕರ್, ಗೆಣಕಿಹಾಳ್ ನಟನೆಸೆ.೨೮ಕ್ಕೆ ದಸರಾ ಉತ್ಸವದಲ್ಲಿ ಸ್ಥಳೀಯರಿಂದ ರಕ್ತರಾತ್ರಿ ನಾಟಕ ಪ್ರದರ್ಶನ…

ವಿಜಯನಗರ: ರಾಜ್ಯದಾದ್ಯಂತ ಪೌರಾಣಿಕ ನಾಟಕ ಕಲೆ ಉಳಿಸಲು ನಿರಂತರ ಶ್ರಮಿಸುತ್ತಿರುವ ಹಗರಿಬೊಮ್ಮನಹಳ್ಳಿ ರಮೇಶ್ ಹಂಚಿನಮನೆ ಮತ್ತು ತಂಡ ಸೆಪ್ಟಂಬರ್ ೨೮ ರ ರವಿವಾರ ಬೆಳಗ್ಗೆ ೧೦.೩೦ ರಿಂದ ಮಧ್ಯಾಹ್ನ ೧೨.೩೦ ರವರೆಗೆ ಮೈಸೂರು ದಸರಾ ಉತ್ಸವದ ಪುರಭವನ ವೇದಿಕೆ (ಟೌನ್ಹಾಲ್ನಲ್ಲಿ)ಯಲ್ಲಿ ಕರ್ನಾಟಕದ ಶೇಕ್ಸ್ಪಿಯರ್ ಕಂದಗಲ್ಲು ಹನುಮಂತರಾಯ ವಿರಚಿತ ರಕ್ತರಾತ್ರಿ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.ಹೆಸರಾಂತ ನಟನಟಿಯರು ಅಭಿನಯಿಸಲಿದ್ದು, ಸಂಗೀತ ನಿರ್ದೇಶಕ ತಿಪ್ಪೆಸ್ವಾಮಿ ಸೂಲದಹಳ್ಳಿ ಇವರ ಅವರ್ಣನೀಯ ಸಂಗೀತ ನಿರ್ದೇಶನದಲ್ಲಿ. ತಂಡದ ನಾಯಕ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ರಮೇಶ್ ಹಂಚಿನಮನಿ, ಹಗರಿಬೊಮ್ಮನಹಳ್ಳಿ (ಭೀಮ), ಡಾ.ಡಿ.ಉಮಾಶಂಕರ ವಕೀಲರು, ಹರಗೋಡನಹಳ್ಳಿ (ದುಯೋಧನ), ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತಿಮ್ಮನಗೌಡ ಗೆಣಕಿಹಾಳ (ಅಶ್ವತ್ಥಾಮ), ಸಿಜಿಕೆ ರಂಗ ಪ್ರಶಸ್ತಿ ಪುರಸ್ಕೃತ, ಚಿತ್ರ ನಟ ನಾಗರಾಜ್ ಇಂಗಳಗಿ, ಗಂಗಾವತಿ (ಶಕುನಿ), ನಾಗರಾಜ್ ಹಿರೇಕುಂಬಳಗುAಟೆ (ಕೃಷ್ಣ), ಬಾಲಪ್ಪ ಕಾನಮಡಗು (ಧರ್ಮರಾಜ), ಮಾರುತಿ ಹ್ಯಾಳ್ಯ (ಅರ್ಜುನ). ಬಿ.ಧನಂಜಯ ಕಣಿವಿನಾಯಕನಹಳ್ಳಿ (ಕರ್ಣ ಮತ್ತು ಗಂಧರ್ವ), ನಿಚ್ಚನಹಳ್ಳಿ ಭೀಮಪ್ಪ (ಶಿವ), ನರಸಿಂಹ ಅÀರಸಿಕೆರಿ (ಕಲಿ), ನಾಗರತ್ನ ಸೋಗಿ (ದ್ರೌಪದಿ), ದಿವ್ಯಕುಮಾರಿ (ಬಸಂತಿ) ಕೂಡ್ಲಿಗಿ (ಭಾನುಮತಿ), ಜ್ಯೋತಿ ಕೂಡ್ಲಿಗಿ (ಉತ್ತರೆ), ಅನಂಗಪುಷ್ಪ (ಮೌನೇಶ್ ಕಲ್ಲಳ್ಳಿ) ನಟಿಸಲಿದ್ದು, ಹಗರಿಬೊಮ್ಮನಹಳ್ಳಿ ಮೋರಿಗೇರಿ ವಿರುಪಾಕ್ಷರಾವ್ ತಬಲ ಸಾತ್ ನೀಡಲಿದ್ದಾರೆ. ನುರಿತು ನಟನಟಿಯರನ್ನೊಳಗೊಂಡ ಕಲಾವಿದರು ಮೈಸೂರು ದಸರಾ ಉತ್ಸವದಲ್ಲಿ ಎರಡನೇ ಬಾರಿಗೆ ನಟಿಸುತ್ತಿದ್ದು, ಇವರ ಕಲಾ ಪತ್ರಿಭೆಗೆ ಸಾಕ್ಷಿಯಾಗಿದೆ.

