ಕಸ ಎಸೆಯುವ ಜಾಗದಲ್ಲಿ ಶ್ರಮದಾನ ಮಾಡಿ ರಂಗೋಲಿ ಬಿಡಿಸಿದ ಗ್ರಾಪಂ ಆಡಳಿತ ಮಂಡಳಿ ! ವಡ್ಡರಹಟ್ಟಿ ಗ್ರಾಪಂನಿಂದ ವಿನೂತನ ಪ್ರಯೋಗ ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಕೈಜೋಡಿಸಲು ಗ್ರಾಪಂ ಪಿಡಿಓ ಸುರೇಶ ಚಲವಾದಿ ಮನವಿ…

ಕಸ ಎಸೆಯುವ ಜಾಗದಲ್ಲಿ ಶ್ರಮದಾನ ಮಾಡಿ ರಂಗೋಲಿ ಬಿಡಿಸಿದ ಗ್ರಾಪಂ ಆಡಳಿತ ಮಂಡಳಿ ! ವಡ್ಡರಹಟ್ಟಿ ಗ್ರಾಪಂನಿಂದ ವಿನೂತನ ಪ್ರಯೋಗ ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಕೈಜೋಡಿಸಲು ಗ್ರಾಪಂ ಪಿಡಿಓ ಸುರೇಶ ಚಲವಾದಿ ಮನವಿ…

ಗಂಗಾವತಿ : ಕೊಪ್ಪಳ-ಗಂಗಾವತಿ ರಾಜ್ಯ ಹೆದ್ದಾರಿಯಲ್ಲಿರುವ ವಡ್ಡರಹಟ್ಟಿ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ ಸ್ಥಳದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನ ಅಂಗವಾಗಿ ಗ್ರಾಮ ಪಂಚಾಯತ್ ಅಂಗವಾಗಿ ಗುರುವಾರ ಒಂದು ದಿನ, ಒಂದು ಗಂಟೆ ಸ್ವಚ್ಛತಾ ಕಾರ್ಯಕೈಗೊಂಡು, ಶ್ರಮದಾನ ಮಾಡಿದ ಸ್ಥಳದಲ್ಲಿ ರಂಗೋಲಿ ಬಿಡಿಸಿ, ಸಸಿ ನೆಟ್ಟು ವಿಭಿನ್ನವಾಗಿ ಮಾಡಿರುವುದು ಎಲ್ಲರ ಗಮನಸೆಳೆದಿದೆ.ಗ್ರಾಪಂ ಅಧಿಕಾರಿಗಳು, ಸದಸ್ಯರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಕೈಯಲ್ಲಿ ಪೊರಕೆ ಹಿಡಿದು ವಡ್ಡರಹಟ್ಟಿ ಗ್ರಾಮದ ರಸ್ತೆ ಬದಿ ಎಲ್ಲೆಂದರಲ್ಲಿ ಹಾಕಿದ್ದ ಕಸದ ರಾಶಿ, ಸಾರ್ವಜನಿಕ ಸ್ಥಳ, ವಡ್ಡರಹಟ್ಟಿ ಕ್ಯಾಂಪ್ ನ ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯಕೈಗೊಂಡರು. ಸ್ವಚ್ಛತಾ ಕಾರ್ಯದ ನಂತರ ಮಹಿಳೆಯರು ರಂಗೋಲಿ ಬಿಡಿಸಿದರು, ಸದಸ್ಯರು ಸಸಿ ನೆಟ್ಟು ವಿಭಿನ್ನವಾಗಿ ಸ್ವಚ್ಛತಾ ಹೀ ಸೇವಾ ಅಭಿಯಾನ ನಡೆಸಿದರು.

ಇದೇ ವೇಳೆ ಗ್ರಾಪಂ ಪಿಡಿಓ ಸುರೇಶ ಚಲವಾದಿ ಅವರು ಮಾತನಾಡಿ, ಗ್ರಾಮದಲ್ಲಿ ಸ್ವಚ್ಛ ವಾತಾವರಣ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ಪ್ಲಾಸ್ಟಿಕ್ ಬಳಕೆ ಪ್ರತಿಯೊಬ್ಬರೂ ತ್ಯಜಿಸಬೇಕು. ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸ್ವಚ್ಛ ವಾತಾಔರಣದಿಂದ ರೋಗ, ರುಜಿನ ದೂರ ಹಿಡಲು ಸಾಧ್ಯವಾಗಿದೆ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವುದನ್ನು ನಿಲ್ಲಿಸಬೇಕು. ಗ್ರಾಮ ಪಂಚಾಯತ್ ಸ್ವಚ್ಛ ವಾಹಿನಿಗೆ ಕಸ ಹಾಕಬೇಕು.

ಜೊತೆಗೆ ಕಸ ವಿಲೇವಾರಿಗೆ ಎಲ್ಲರೂ ಸಹಕರಿಸಬೇಕು ಎಂದರು. ವಡ್ಡರಹಟ್ಟಿ ಗ್ರಾಪಂ ಉಪಾಧ್ಯಕ್ಷರಾದ ಟಿ.ಗೌಸ್ ಸಾಬ್ , ಸದಸ್ಯರಾದ ಹುಸೇನಪ್ಪ ಬಂಡೇನಾಯಕ, ಸಯ್ಯದ್ ಮೇರಾಜ್, ಭರತ್ ಕುಮಾರ್, ಶಾಂತಮ್ಮ, ಕಾರ್ಯದರ್ಶಿ ಈಶಪ್ಪ, ಸಿಎಚ್ ಓ ಮಂಜುಳಾ, ಗ್ರಾಪಂ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸೇರಿ ಇತರರಿದ್ದರು.

Leave a Reply

Your email address will not be published. Required fields are marked *