ಪರಿಶಿಷ್ಟ ಪಂಗಡ ಜಾತಿಗೆ ಅನ್ಯ ಜಾತಿಯ ಸೇರ್ಪಡೆಗೆ ವಿರೋಧಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕ ಘಟಕದಿಂದ ಬೃಹತ್ ಪ್ರತಿಭಟನೆ..

ಪರಿಶಿಷ್ಟ ಪಂಗಡ ಜಾತಿಗೆ ಅನ್ಯ ಜಾತಿಯ ಸೇರ್ಪಡೆಗೆ ವಿರೋಧಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕ ಘಟಕದಿಂದ ಬೃಹತ್ ಪ್ರತಿಭಟನೆ..

ಗಂಗಾವತಿ:> ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರಕಾರ ರಾಜ್ಯ ಪರಿಶಿಷ್ಟ ಪಂಗಡ( ಎಸ್ ಟಿ ) ಕುರುಬರು ಸೇರಿದಂತೆ ಅನ್ಯ ಜಾತಿಯರನ್ನು ಸೇರ್ಪಡೆಗೆ ಮುಂದಾಗಿರುವ ಕ್ರಮವನ್ನು ಖಂಡಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕ ಘಟಕ ನೇತೃತ್ವದಲ್ಲಿ ಶುಕ್ರವಾರದಂದು ಬೃಹತ್ ಪ್ರತಿಭಟನೆ ನಡೆಸಿ ತಹಸಿಲ್ದಾರರ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಹಾಸಭಾ ತಾಲೂಕ ಘಟಕದ ಅಧ್ಯಕ್ಷ ವೀರಭದ್ರಪ್ಪ ನಾಯಕ ಮಾತನಾಡಿದರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ ಹಾಗೂ ಶೈಕ್ಷಣಿಕ ಜನಗಣತಿಯ ಹೆಸರಿನಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದು ಅತ್ಯಂತ ಖಂಡನೀಯವಾಗಿದೆ. ಪರಿಶಿಷ್ಟ ಪಂಗಡಕ್ಕೆ ಕುರುಬ ಜನಾಂಗ ಸೇರಿದಂತೆ ಇತರೆ ಜನಾಂಗವನ್ನು ಸೇರಿಸುವುದರ ಮೂಲಕ ವಾಲ್ಮೀಕಿ ನಾಯಕ ಸಮಾಜವನ್ನು ಗುರಿಯನ್ನಾಗಿಸಿ ಶೋಷಣೆಯ ಉದ್ದೇಶವನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿರುವ 65 ಲಕ್ಷ ನಾಯಕ ಸಮಾಜಭಂಧವರ ಶಿರ ಛೇದನ ಮಾಡಿದರು ಸಹ ಯಾವುದೇ ಕಾರಣಕ್ಕೂ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಅವಕಾಶ ನೀಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಗುಡುಗಿದರು . ಮುಖ್ಯಮಂತ್ರಿ ಸ್ಥಾನಕ್ಕೆ ಕಂಟಕ ಬಂದಾಗ ಇಂತಹ ಸನ್ನಿವೇಶಗಳನ್ನು ಸೃಷ್ಟಿ ಮಾಡಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವಹು ನ್ನ ರ್ ಮಾಡುತ್ತಿದ್ದಾರೆ ಎಂದು ಆರೋಪಿಸಿದವರು ಕಾಂಗ್ರೆಸ್ ಪಕ್ಷದಲ್ಲಿರುವ ನಾಯಕ ಸಮಾಜದ ಸಚಿವರುಗಳು ಶಾಸಕರು ಮಾಜಿ ಹಾಲಿ ವಿವಿಧ ಘಟಕಗಳ ಸದಸ್ಯರುಗಳು ತಕ್ಷಣವೇ ಪಕ್ಷಕ್ಕೆ ಹಾಗೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜೋಗದ ನಾರಾಯಣಪ್ಪ ನಾಯಕ ಹನುಮಂತಪ್ಪ ನಾಯಕ ಪಂಪಣ್ಣ ನಾಯಕ. ವಿರುಪಾಕ್ಷ ನಾಯಕ ಬಳ್ಳಾರಿ ರಾಮಣ್ಣ ಬಸಪ್ಪ ಗುಡ್ಡೇಕಲ್ ನಾಯಕ ಚೌಡಕಿ ರಮೇಶ್ ನಾಯಕ ಮಲ್ಲೇಶಪ್ಪ ನಾಯಕ ಗುಡ್ಡೇಕಲ್ ಶರಣಪ್ಪ ನಾಯಕ ಬಸಪ್ಪ ಮರಮನಹಳ್ಳಿ ವಕೀಲರ ಸಂಘದ ಅಧ್ಯಕ್ಷರು ಶರಣಬಸಪ್ಪ ನಾಯಕ ಎಜೆ ರಂಗನಾಥ್ ನಾಯಕ ಮಾರುತಿ ಮೆತುಗಲ್ ನಾಗರಾಜ್ ಸೇರಿದಂತೆ ಅಪಾರ ಸಂಖ್ಯೆಯ ಸಮಾಜ ಸಮಾಜದ ಹಿರಿಯರು ಮುಖಂಡರು ಹಾಗೂ ಯುವ ಮುಖಂಡರು ಮತ್ತು ಬಾಂಧವರು ಪಾಲ್ಗೊಂಡಿದ್ದರು ಇದಕ್ಕೂ ಮುಂಚೆ ಮಹರ್ಷಿ ವಾಲ್ಮೀಕಿ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಡಾ. ಬಿಆರ್ ಅಂಬೇಡ್ಕರ್ ವೃತ್ತದ ಮೂಲಕ ಶ್ರೀ ಕೃಷ್ಣದೇವರಾಯ ವೃತದಲ್ಲಿ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.

ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ನಾಯಕ ತಳವಾರ ಹೆಸರಿನಲ್ಲಿ ಪ್ರವರ್ಗ-1 ರಲ್ಲಿರುವಬೇರೆ ಸಮುದಾ ಸಮುದಾಯದವರು ಅಕ್ರಮವಾಗಿ ಪರಿಶಿಷ್ಟ ಪಂಗಡದಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರಗಳನ್ನು ತೆಗೆದುಕೊಂಡು ವಂಚಿಸುತ್ತಿರುವ ಹಾಗೂ ಅನ್ಯ ಸಮುದಾಯದವರನ್ನು ಎಸ್.ಟಿ. ಪಟ್ಟಿಗೆ ಸೇರಿಸುತ್ತಿರುವುದರ ಕುರಿತು.ಭಾರತ ಸಂವಿಧಾನ ಪರಿಚ್ಚೇಧ 341 ಮತ್ತು 342ರಡಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಅನೇಕ ಸಮುದಾಯಗಳ ಸರ್ವತೋಮುಖಅಭಿವೃದ್ಧಿಗಾಗಿ1950 ಮತ್ತುಅದರ ನಂತರ ಹೊರಡಿಸಿರುವ ಅಧಿಸೂಚನೆಗಳಡಿ ಮೀಸಲಾತಿ ನೀಡಿ ಅವಕಾಶಗಳನ್ನು ಒದಗಿಸಿರುವುದು ಸರಿಯಷ್ಟೆ. ಆದರೆದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳು ಕಳೆಯುತ್ತಾಬಂದರೂ ಪರಿಶಿಷ್ಟ ಪಂಗಡದವರ ಮೇಲೆ ನಿರಂತರ ಶೋಷಣೆ, ದಬ್ಬಾಲಿಕೆ, ದೌರ್ಜನ್ಯಗಳು ಮತ್ತು ಮೀಸಲಾತಿಯ ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿರುವುದುಖಂಡನೀಯ. ಇಂದು ಭಾರತೀಯ ಸಂಸ್ಕೃತಿಗೆ ಮಾನವೀಯ ಮೌಲ್ಯಗಳನ್ನು ಜಗತ್ತಿಗೇ ಸಾರಿದ ಆದಿಕವಿ ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಹಾಗೂ ಭಾರತದ ಶೋಷಿತ ಸಮುದಾಯಗಳ ಧ್ವನಿ, ಮಹಾ ಮಾನವತವಾದಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಬಿ.ಆ‌ರ್.ಅಂಬೇಡ್ಕರ್‌ರವರ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸಂವಿಧಾನದ ಹಕ್ಕುಗಳನ್ನು ಪಡೆಯಲು ಸಾಂಘಿಕವಾಗಿ ಒಟ್ಟಾಗಿ ಮೀಸಲಾತಿ ಕಬಳಿಸುವವರ ಇರುದ್ಧ ಹೋರಾಡುವ ಅನಿವಾರ್ಯ ಎದುರಾಗಿದೆ.ಭಾರತ ಸರ್ಕಾರದಅಧಿಸೂಚನೆ ದಿ ಕಾನ್ಸಿಟ್ಯೂಷನ್‌ಆಫ್‌ ಇಂಡಿಯಾ (ಷೆಡ್ಯೂಲ್‌ಟೈಲ್ಸ್) ಆಕ್ಟ್ 1950ರ ತಿದ್ದಪಡಿಅಧಿಸೂಚನೆ ದಿನಾಂಕ:19.3.2020ರಲ್ಲಿ ಕರ್ನಾಟಕರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಯಕ್ರಮ ಸಂಖ್ಯೆ 38 ರಲ್ಲಿ ನಾಯಕ ಬುಡಕಟ್ಟವಿನ ಪರ್ಯಾಯ ಹೆಸರುಗಳಾದ ಪರಿವಾರ ಮತ್ತು ವಾರ ಬುಡಕಟ್ಟುಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಸಲಾಗಿದೆ.

ಆದರೆಉತ್ತರಕರ್ನಾಟಕದಕೆಲವು ಜಿಲ್ಲೆಗಳಲ್ಲಿ ವಿಶೇಷವಾಗಿ ಬೀದರ್,ಕಲ್ಬುರ್ಗಿಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಮುಂತಾದ ಜಿಲ್ಲೆಗಳಲ್ಲಿ ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-1 ರಕ್ರಮ ಸಂಖ್ಯೆ ರಲ್ಲಿರುವ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ,ಕೊಲಿ ಮುಂತಾದಜಾತಿಗೆ.ಸೇರಿಹಿಂದೆತಳವಾರಿಕೆ ವೃತ್ತಿ ಮಾಡಿಕೊಂಡಿದ್ದವರು ದಿನಾಂಕ:19.3.2020 ರಆಧಿಸೂಚನೆಯನ್ನುತಪ್ಪಾಗಿ ಅರ್ಥೈಸಿಕೊಂಡು ನಾಯಕ ತಳವಾರ ಹೆಸರಿನಲ್ಲಿ 2 ಲಕ್ಷಕ್ಕೂ ಹೆಚ್ಚಿಗೆ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ತೆಗೆದುಕೊಂಡು ಅನೇಕ ಸೌಲಭ್ಯಗಳನ್ನು ವಾಮ ಮಾರ್ಗದಲ್ಲಿ ಪಡೆದುವಂಚಿಸುತ್ತಿರುವ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೇಳೆದಿದ್ದರೂ ಸಹ ಈ ಹಗಲು ದರೋಡೆಗೆ ಸರ್ಕಾರಕಡಿವಾಣ ಹಾಕದಿರುವುದು ವಿಷಾದನೀಯ. ಈ ವಂಚನೆಯ ಹಾವಳಿಯಿಂದ ನೈಜ ನಾಯಕ ತಳವಾರ ಜಾತಿಯವರಿಗೆ ಶಿಕ್ಷಣ ಸಂಸ್ಥೆಗಳ ಪ್ರವೇಶಗಳಲ್ಲಿ, ನೇರ ಮತ್ತು ಬಡ್ತಿ ನೇಮಕಾತಿಗಳಲ್ಲಿ, ರಾಜಕೀಯ ಕ್ಷೇತ್ರಗಳಲ್ಲಿ ಘನ ಘೋರಅನ್ಯಾಯವಾಗುತ್ತಿದೆ.ಜೊತೆಗೆ ಶಾಲಾ ದಾಖಲಾತಿಗಳಲ್ಲೂ ಸಹ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೊಲಿ ಮುಂತಾದ ಹೆಸರುಗಳ ಬದಲಾಗಿ ನಕಲಿ ತಳವಾರ ಜಾತಿಯ ಹೆಸರುಗಳನ್ನು ಅಳವಡಿಸಿಕೊಂಡು ಸರ್ಕಾರದಿಂದ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳತ್ತಿರುದನ್ನು ಗಂಭೀರವಾಗಿ ಗಮನಿಸಲಾಗಿದೆ. ನಿಜವಾದ ನಾಯಕ ತಳವಾರರಿಗೆ ಸರ್ಕಾರದ ಮುರಾರ್ಜಿದೇಸಾಯಿ ಶಾಲೆಗಳಲ್ಲಿಯೂ ಪ್ರವೇಶ ಪಡೆಯಲುಮೇಲೆ ಕಾಣಿಸಿರುವ ಜಿಲ್ಲೆಗಳಲ್ಲಿ ನಕಲಿ ಜಾತಿ ಪತ್ರಗಳ ಹಾವಳಿಯಿಂದ ಸಾಧ್ಯವಾಗುತ್ತಿಲ್ಲ. ಈ ಅನ್ಯಾಯಗಳ ವಿರುದ್ಧಉತ್ತರಕರ್ನಾಟಕದ ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡದವಾಲ್ಮೀಕಿ ನಾಯಕ ಸಮಾಜ ಸಂಘಟನೆಗಳು ಮತ್ತು ಇತರೆ ಪರಿಶಿಷ್ಟ ಪಂಗಡದ ಸಂಘಟನೆಗಳು ನಿರಂತರವಾಗಿ ಅನೇಕ ಪ್ರತಿಭಟನೆಗಳನ್ನು ಮಾಡಿರಾಜ್ಯ ಸರ್ಕಾರಕ್ಕೆ, ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ, ತಹಸೀಲ್ದಾರರುಗಳಿಗೆ ಮನವಿಗಳನ್ನು ನೀಡುತ್ತಿದ್ದರೂ ಸಹ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ನಿಂತಿರುವುದಿಲ್ಲ. ಸರ್ಕಾರವೂ ಈ ಬಗ್ಗೆ ಅನೇಕ ಸುತ್ತೋಲೆಗಳನ್ನು ನೀಡಿದ್ದರೂ ಸಹ ತಹಸೀಲ್ದಾರರ ಕಛೇರಿಗಳಿಂದ ಪತ್ರಗಳ ಹಾಗೂ ನಕಲಿ ವಿತರಣೆ ಮುಂದುವರಿಯುತ್ತಲೇಇದೆ ತಪ್ಪಿತಸ್ಥರಿಗೆಯಾವುದೇಕ್ರಮ ಆಗಿರುವುದಿಲ್ಲ.

ಈ ಸಂಬಂಧವಾಗಿ ಸಂಘಟನೆಗಳು ಸಾರ್ವಜನಿಕ ಹಿತಾಸಕ್ತಿರಿಟ್‌ ಅರ್ಜಿಯನ್ನು (13777/23) ಕರ್ನಾಟಕ ಉಚ್ಚ ನ್ಯಾಯಲಯದಲ್ಲಿದಾಖಲಿಸಿದ್ದು ಘನ ಉಚ್ಚನ್ಯಾಯಾಲಯವುದಿನಾಂಕ:22.3.2024 ನಕಲಿ ಜಾತಿ ಪತ್ರಗಳನ್ನು ತೆಗೆದುಕೊಂಡವರ ಮೇಲೆ ಕಾಲಂ ನಂ.4 ಎಫ್‌ರಡಿಕ್ರಮ ಕೈಗೊಳ್ಳುವಂತೆ ಆದೇಶ ನೀಡಿದೆ ಹಾಗೂ ದಿನಾಂಕ:12.8.2024ರಂದು ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ಮೇಲೆ ಏನು ಕ್ರಮಕೈಗೊಂಡಿದ್ದೀರಿ ಎಂಬ ಬಗ್ಗೆ ವರದಿ ನೀಡಲು ಘನ ಉಚ್ಚ ನ್ಯಾಯಲಯವು ಆದೇಶಿಸಿರುತ್ತದೆ. ಆದರೂ ದಿನಾಂಕ: 27.7.2025 ರಂದು ಸರ್ಕಾರಯಾವುದೇಕ್ರಮತೆಗೆದುಕೊಂಡಿರದ ಬಗ್ಗೆ ಅಸಮಧಾನವನ್ನು ವ್ಯಕ್ತಪಡಿಸಿ ನಾಲ್ಕು ವಾರಗಳ ಗಡವಿನೊಂದಿಗೆ ದಿನಾಂಕ:9.9.2025 ರೊಳಗೆ ಘನ ಉಚ್ಚ ನ್ಯಾಯಾಲಯಕ್ಕೆ ವರದಿ ನೀಡಲು ಆದೇಶಿಸಿರುತ್ತದೆ. ಆದರೆಆಯಾಯ ಜಿಲ್ಲಾಧಿಕರಿಗಳು ನಕಲಿ ಜಾತಿ ಪ್ರಮಾಣ ಪತ್ರತೆಗೆದುಕೊಂಡವರ ಮೇಲೆ ಮತ್ತುನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡಿದವರ ಮೇಲೆ ಕ್ರಮ ಕೈಗೊಳ್ಳದೇಯಿರುವುದು ಘನ ನ್ಯಾಯಾಲಯಕ್ಕೆ ಮತ್ತು ಕಾನೂನಿಗೆ ಮಾಡಿರವಅಗೌರವ.

ಇದನ್ನು ಉಗ್ರವಾಗಿಖಂಡಿಸುತ್ತೇವೆ. ಹಾಗೂ ಘನ ನ್ಯಾಯಾಲಯದಆದೇಶವನ್ನು ಪಾಲನೆ ಮಾಡಲು ಆಗ್ರಹಿಸುತೇವೆ.ಮುಂದುವರೆದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಕಳೆದ ಒಂದು ವರ್ಷದಿಂದ ಸ್ವತಂತ್ರ ನೇಮಕ ಸಚಿವರನ್ನು ಮಾಡದೇ ಇರುವುದು ಸಮುದಾಯಕ್ಕೆ ಮಾಡಿದ ಅನ್ಯಾಯ.ಗಿರಿಜನ ಉಪಯೋಜನೆಯಡಿ ಪರಿಶಿಷ್ಟರ ಪಂಗಡದವರಕಲ್ಯಾಣ ಕಾರ್ಯಕ್ರಮಗಳಿಗೆ ನಿಗದಿಮಾಡಿದ್ದ ಹಣವನ್ನು ಗ್ಯಾರಂಟಿ ಕಾರ್ಯಕ್ರಮಗಳಿಗೆ ಉಪಯೋಗಿಸಿರುವುದರಿಂದ ಪರಿಶಿಷ್ಟ ಪಂಗಡದವರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣದಕೊರೆತೆಯಿಂದಾಗಿ ಕಾರ್ಯಕ್ರಮಗಳ ಅನುಷ್ಟಾನಕ್ಕೆ ತೊಂದರೆತಾಗಿರುತ್ತದೆ. ಇದರಿಂದರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸ್ಕಾಲರಿಪ್, ಪ್ರೈಜ್ ಮನಿ.ಸಹಾಯಧನಗಳಿಗೆ ಕಳೆದ 2 ವರ್ಷಗಳಿಂದ ಹಣದಕೊರತೆಯಿಂದ ಸೌಲಭ್ಯಗಳು ಅರ್ಹ ಫಲಾಪೇಕ್ಷೆಗಳಿಗೆ ತಲುಪದಿರುವುದುಅತ್ಯಂತದುರಾದೃಷ್ಟಕರ.ತಕ್ಷಣವೇ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಹೆಚ್ಚುವರಿಯಾಗಿರೂ. 10,000 ಕೋಟಿಗಳನ್ನು ಬಿಡುಗಡೆ ಮಾಡಬೇಕು ಹಾಗೂ ಆಯಾಯ ಕಾರ್ಯಕ್ರಮಗಳಿಗೆ ಬಿಡುಗಡೆ ಮಾಡಿದ ಹಣವನ್ನು ಸಮರ್ಪಕವಾಗಿ ವಿನಿಯೋಗಿಸಲು ಸೂಚಿಸಬೇಕು. ಬಿಡುಗಡೆಯಾದ ಹಣವನ್ನು ಸಮರ್ಪಕವಾಗಿ ವಿನಿಯೋಗಿಸದ ಅಧಿಕಾರಿಗಳ ಕ್ರಿಮಿನಲ್‌ಕೇಸ್‌ದಾಕಲಿಸಬೇಕೆಂದು ಆಗ್ರಹಿಸಿದೆ.ಕರ್ನಾಟಕರಾಜ್ಯದಲ್ಲಿ ಹಿಂದಿನ ಸರ್ಕಾರಅನ್ಯರಿಗೆ ಪರಿಶಿಷ್ಟ ಪಂಗಡದವರನಕಲಿ ಜಾತಿ ಪ್ರಮಣ ಪತ್ರ ನೀಡುವ ವಿಷಯದಲ್ಲಿ ಪ್ರಮಾದವೆಸಗಿದ್ದರಿಂದಅಧಿಕಾರತ್ಯಜಿಸಬೇಕಾದ ಸಂದರ್ಭವೊದಗಿಬಂದಿದ್ದುದುತಮಗೆ ತಿಳಿದ ವಿಷಯ. ತಮ್ಮ ಸರ್ಕಾರವು ಈ ಬಗ್ಗೆ ಪರಿಶಿಷ್ಟ ಪಂಗಡದವರ ಹಣವನ್ನು ಭಾವಿಸುತ್ತೇವೆ. ದುರ್ಬಳಕೆ ಈ ಮಾಡಿಕೊಂಡುಅನ್ಯಾಯವಾಗಿರುವುದುತಮ್ಮಗಮನದಲ್ಲಿದೆಯೆಂದು ಪ್ರಮಾದಗಳನ್ನು ಸರಿಪಡಿಸಿಕೊಂಡು ಪರಿಶಿಷ್ಟ ಪಂಗಡದವರಿಗೆ ನ್ಯಾಯ ದೊರೆಕಿಸಿಕೊಡಲು ಕೋರುತ್ತೆವೆ. ಹಾಗೆಯೇ ಕೆಳಕಂಡ ಪರಿಶಿಷ್ಟ ಪಂಗಡದವರಬೇಡಿಕೆಗಳನ್ನು ಗಂಭಿರವಾಗಿ ಪರಿಗಣಿಸಿ ಈಡೇರಿಸಲುಒತ್ತಾಯಿಸುತ್ತೇವೆ.

ಬೇಡಿಕೆಗಳು:-1) ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-1 ರಲ್ಲಿರುವ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೊಲಿ ಮುಂತಾದಜಾತಿಯವರಿಗೆ ನಾಯಕ ತಳವಾರರ ಹೆಸರಿನಲ್ಲಿ ಪರಿಶಿಷ್ಟ ಪಂಗಡದನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡುವುದನ್ನುಕೂಡಲೆ ನಿಲ್ಲಿಸುವುದು2) ಹಾಗೇನಾದರೂ ನಾಯಕ ತಳವಾರ ಜಾತಿಗೆ ಸೇರಿಲ್ಲದವರು ವಾಮ ಮಾರ್ಗದಲ್ಲಿ ಪರಿಶಿಷ್ಟ ಪಂಗಡದನಕಲಿ ಪ್ರಮಾಣ ಪತ್ರಗಳನ್ನು ಪಡೆದಿದ್ದಲ್ಲಿಕರ್ನಾಟಕಉಚ್ಚನ್ಯಾಯಲಯದ ಆದೇಶದಂತೆಅಂತಹವರ ಮೇಲೆ ಮತ್ತುಅಂತಹಜಾತಿ ಪ್ರಮಾಣ ಪತ್ರಗಳನ್ನು ನೀಡಿದ ಆಧಿಕಾರಿಗಳ ಮೇಲೆ ಕ್ರಿಮಿನಲ್‌ಕೇಸ್ ದಾಖಲಿಸಿ ನಿಯಮಾನುಸಾರಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದೆ.3) ಈ ನಕಲಿ ಜಾತಿ ಪ್ರಮಾಣ ಪತ್ರಗಳಿಗೆ ಮೂಲ ಕಾರಣ ವೃತ್ತಿಗಾಗಿ ನಾಯಕ ತಳವಾರ ಜಾತಿಗೆ ಸೇರದೆ ಇತರೆ ಜಾತಿಗೆ ಅಂದರೆ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೊಲಿ ಮುಂತಾದಜಾತಿಗೆ ಸೇರಿದವರು ತಳವಾರಿಕೆ ವೃತ್ತಿ ಮಾಡುತ್ತಿದ್ದುದು. ಆದರೆ ನಾಯಕ ತಳವಾರರ ಹೆಸರುಜಾತಿ ಸೂಚಕ ಪದವಾಗಿರುತ್ತದೆ. ರಾಜ್ಯ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನದೊಂದಿಗೆಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಾಗ ಅಲ್ಲಿಂದ ಪರಿಶಿಷ್ಟ ಪಂಗಡದ ಪಟ್ಟಿಯಕ್ರಮ ಸಂಖ್ಯೆ 38ರಲ್ಲಿ ಸೇರಿಸಿರುವುದು ನಾಯಕ ತಳವಾರ ಜಾತಿ ಮಾತ್ರ. ಆದ್ದರಿಂದ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೊಲಿ ಮುಂತಾದಜಾತಿಗೆ ಸೇರಿದ ತಳವಾರರನ್ನು ಅವರು ಸೇರಿರುವ ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-1 ರಕ್ರಮ ಸಂಖ್ಯೆ 6 ರಲ್ಲಿ ಬೆಸ್ತ ಮುಂತಾದವುಗಳ ಜೊತೆ ಸೇರಿಸಿ ಉದ್ಭವಿಸಿರುವ ಗೊಂದಲಕ್ಕೆ ತೆರೆ ಎಳೆಯಬೇಕು4) ಪರಿಶಿಷ್ಟ ಪಂಗಡದವರ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗೆ ಕಳೆದ ಒಂದು ವರ್ಷಕ್ಕೂ ಮೇಲ್ಪಟ್ಟು ಸಮಯದಿಂದ ಪರಿಶಿಷ್ಟ ವರ್ಗಗಳ ಇಲಾಖೆಗೆ ಸ್ವತಂತ್ರ ಸಚಿವರಿಲ್ಲದೆತೊಂದರೆಯಾಗಿದೆ. ಆದ್ದರಿಂದ ಕೂಡಲೆ ಪರಿಶಿಷ್ಟ ವರ್ಗಗಳ ಇಲಾಖೆಗೆ ಸ್ವತಂತ್ರಕ್ಯಾಬಿನೆಟ್ ಸಚಿವರನ್ನ ನೇಮಿಸುವುದು5) ತಳವಾರ ಹೆಸರಿನಲ್ಲಿ ಕೋಳಿ, ಕಬ್ಬಲಿಗ,ಬೆಸ್ತಾ, ಸಮುದಾಯದವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯಲು ಪ್ರಾರಂಭಮಾಡಿದರು. ಈ ಸುಳ್ಳು ಜಾತಿ ಪ್ರಮಾಣ ಪತ್ರರದ್ದು ಪಡಿಸಲು ಎಸ್.ಟಿ.ಎಸ್.ಸಿ.ಒಬಿಸಿ ಕಾಯಿದೆ ಕಲಂ 4 ಮತ್ತು 4ಎ ರಲ್ಲಿ ತಹಶೀಲ್ದಾರ್ ಮತ್ತು ಮೇಲಾಧಿಕಾರಿಗಳಿಗೆ ಅಧಿಕಾರ ಇರುತ್ತದೆ.ಆದುದರಿಂದ ಈ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮಜರುಗಿಸುವಂತೆ ಆದೇಶ ನೀಡಲುಕೋರಿದೆ.6) ಕಾಲೇಜು ಶಿಕ್ಷಣ ಮತ್ತುಉನ್ನತ ಶಿಕ್ಷಣ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕೂಡಲೇ ಸ್ಕಾಲರ್ಷಿಪ್ ಹಣವನ್ನು ಬಿಡುಗಡೆ ಮಾಡುವುದು7) ರಾಜ್ಯದಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಿ ಪರಿಶಿಷ್ಟ ಪಂಗಡದ ವಾಲ್ಮೀಕಿ ನಾಯಕಜನಾಂಗದ ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ವಿಶೇಷ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಿದೆ8) ರಾಜ್ಯದ ವಿವಿಧ ಭಾಗಗಳಲ್ಲಿ ಅಪೂರ್ಣಗೊಂಡಿರುವ ವಾಲ್ಮೀಕಿ ಭವನಗಳನ್ನು ಪೂರ್ಣಗೊಳಿಸಲು ಪರಿಶಿಷ್ಟ ಪಂಗಡದವರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಸಹಾಯಧನ ವಿದ್ಯಾರ್ಥಿ ವೇತನ ಬಾಕಿ ಬಿಡುಗಡೆಗಾಗಿರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 500 ಕೋಟಿ ಅನುದಾನ ಬಿಡುಗಡೆ ಮಾಡುವುದು.9) ಈಗಾಗಲೇ ಗುರುತಿಸಿರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬುವುದು ಹಾಗೂ ಹೊಸದಾಗಿ ಬ್ಯಾಕ್‌ ಲಾಗ್ ಹುದ್ದೆಗಳನ್ನು ಗುರುತಿಸುವುದು.10) ಕರ್ನಾಟಕರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿ ಸಂಶೋಧನ ವಿದ್ಯಾರ್ಥಿಗಳಿಗೆ ಅನುಕೂಲಮಾಡಿಕೊಡಲು ಒತ್ತಾಯಿಸಿದೆ.11) ರಾಜ್ಯದಲ್ಲಿ ವಾಲ್ಮೀಕಿ ನಾಯಕ ಜನಾಂಗದ ಮೇಲೆ ನಿರಂತರ ದೌರ್ಜನ್ಯ, ಕೊಲೆ, ಅತ್ಯಾಚಾರ ಮುಂತಾದ ಘಟನೆಗಳು ಹೇಚ್ಚಾಗುತ್ತಿದ್ದು ಇಂತಹ ಪ್ರಕರಣಗಳನ್ನು ತಡೆಗಟ್ಟುವಂತೆ ಒತ್ತಾಯಿಸಿದೆ12) ಉತ್ತರಕರ್ನಾಟಕ ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿರುವುದನ್ನು ವಿರೋಧಿಸಿ ಹೋರಟ ಮಾಡುತ್ತಿರುವ ಹೋರಾಟಗಾರರ ವಿರುದ್ದ ದಾಖಲಾಗಿರುವ ಪ್ರಕರಣಗಳನ್ನು ಕೂಡಲೆ ಹಿಂಪಡೆದುಅವರಿಗೆ ಸೂಕ್ತ ಭದ್ರತೆ ಒದಗಿಸುವುದು13)ಗಿರಿಜನ ಉಪಯೋಜನೆಯಡಿ ನಿಗದಿಯಾಗಿರುವ ಅನುದಾನವನ್ನು ಪರಿಶಿಷ್ಟರಲ್ಲದವರ ಉಪಯೋಗಕ್ಕೆ ಬಳಸಬಾರದು. ಆಂತಹ ಪ್ರಕರಣಗಳಲ್ಲಿ ದುರ್ಬಳಕೆ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ.14)ಪರಿಶಿಷ್ಟ ವರ್ಗದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದರು ಇಲಾಖೆಗಳಲ್ಲಿ ಪದೋನ್ನತಿ ನೀಡುವಾಗ ವಿಳಂಬ ಧೋರಣೆ ಅನುಸರಿತ್ತಿರುವುದು ಗಮನಿಸಿದ್ದು ವಿಳಂಬ ಮಾಡದೆ ಪ್ರಮೋಷನ್ ನೀಡುವುದು ಹಾಗೂ ಮೀಸಲಾತಿಯಾನುಸಾರ ಪದೋನ್ನತಿ ನೀಡುವುದು15) ಇತ್ತೀಚಿನ ದಿನಗಳಲ್ಲಿ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಬೇರೆ ಬೇರೆ ಸಮುದಾಯಗಳಿಂದ ಒತ್ತಡಗಳು ಬರುತ್ತಿರುವುದು, ಆ ಒತ್ತಡಗಳಿಗೆ ಸರ್ಕಾರ ಸ್ಪಂದಿಸುತ್ತಿರುವುದನ್ನು ಪತ್ರಿಕೆಗಳ ಮುಖೇನ ಗಮನಿಸಲಾಗುತ್ತಿದೆ. ಇದು ಸಂವಿಧಾನ ಆಶಯಗಳಿಗೆ ವಿರುದ್ಧವಾಗಿರುವುದರಿಂದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರವ ನಾವುಗಳು ಸರ್ಕಾರವನ್ನು ವಿರೋಧಿಸುತ್ತೇವೆ.

Leave a Reply

Your email address will not be published. Required fields are marked *