ನಿರ್ಮಲ ತುಂಗಭದ್ರಾ ಅಭಿಯಾನದ ಮೂರನೆಯ ಹಂತದ ಪಾದಯಾತ್ರೆಯ ಪೂರ್ವಭಾವಿ ಸಭೆ ಯಶಸ್ವಿ…

ಗಂಗಾವತಿ: ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ, ಪರ್ಯಾವರಣ ಟ್ರಸ್ಟ್ ಶಿವಮೊಗ್ಗ ಹಾಗೂ ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ವತಿಯಿಂದ ಆಗಸ್ಟ್-೨೪ ರವಿವಾರ ರಂದು ರಾಜಮಾತೆ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಅವರ ನಿವಾಸದಲ್ಲಿ ಉಪಹಾರ ಕೂಟದೊಂದಿಗೆ ಸುದೀರ್ಘ ಚರ್ಚೆ ನಡೆಯಿತು. ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ರಾಷ್ಟಾçಧ್ಯಕ್ಷರಾದ ಬಸವರಾಜ ಪಾಟೀಲ್ ವೀರಾಪುರ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ್ವಾಭಿಮಾನ ಆಂದೋಲನದ ದಕ್ಷಿಣ ಭಾರತದ ಸಂಚಾಲಕರಾದ ಸಿ.ಪಿ ಮಾಧವನ್ ಹಾಗೂ ಕರ್ನಾಟಕ ರಾಜ್ಯ ಸಂಚಾಲಕರಾದ ಬಾಲಕೃಷ್ಣ ನಾಯ್ಡು ಹಾಗೂ ನಿರ್ಮಲ ತುಂಗಭದ್ರಾ ಅಭಿಯಾನದ ಶಿವಮೊಗ್ಗ ಜಿಲ್ಲೆಯ ಸಂಚಾಲಕರಾದ ಲೋಕೇಶ್ವರಪ್ಪ ಉಪಸ್ಥಿತರಿದ್ದರು. ಶಿವಮೊಗ್ಗದಿಂದ ಹರಿಹರದವರೆಗೆ, ಹರಿಹರದಿಂದ ಕಿಷ್ಕಿಂದೆಯವರೆಗೆ ಎರಡು ಹಂತದಲ್ಲಿ ನಿರ್ಮಲ ತುಂಗಭದ್ರಾ ಪಾದಯಾತ್ರೆ ಯಶಸ್ವಿಯಾಗಿ ಜರುಗಿದೆ. ಮೂರನೇ ಹಂತದ ಪಾದಯಾತ್ರೆ ಗಂಗಾವತಿಯಿoದ ಪ್ರಾರಂಭವಾಗಿ ಮಂತ್ರಾಲಯದಲ್ಲಿ ಸಮಾರೋಪವಾಗುವುದು. ಈ ಪಾದಯಾತ್ರೆಗೆ ತುಮಕೂರಿನ ಸಿದ್ಧಗಂಗಾ ಶ್ರೀಗಳು, ಮಂತ್ರಾಲಯದ ಶ್ರೀಗಳು, ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳು ಹಾಗೂ ಕನೇರಿ ಮಠದ ಶ್ರೀಗಳನ್ನು ಹಾಗೂ ನಾಡಿನ ಖ್ಯಾತನಾಮರನ್ನು ಆಹ್ವಾನಿಸಲಾಗುವುದು ಎಂದು ಬಸವರಾಜ ಪಾಟೀಲ್ ವೀರಾಪುರ ಅವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ರಾಜಮಾತೆ ಶ್ರೀಮತಿ ಲಲಿತಾರಾಣಿ ಅವರನ್ನು ನಿರ್ಮಲ ತುಂಗಭದ್ರಾ ಅಭಿಯಾನದ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಯಿತು. ನಿರ್ಮಲ ತುಂಗಭದ್ರಾ ಅಭಿಯಾನದ ಜಿಲ್ಲಾ ಸಂಚಾಲಕರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಎಲ್ಲರನ್ನೂ ಸ್ವಾಗತಿಸಿ, ನಿರ್ಮಲ ತುಂಗಭಧ್ರಾ ಅಭಿಯಾನ ಸಮಿತಿಯ ಜಿಲ್ಲಾಮಟ್ಟದ ಹಲವಾರು ಘಟಕಗಳನ್ನು ಹಾಗೂ ಅದರ ಪ್ರತಿನಿಧಿಗಳನ್ನು ಘೋಷಣೆ ಮಾಡಿದರು. ಉತ್ತರ ಪ್ರಾಂತೀಯ ಸಂಚಾಲಕರಾದ ಸಂತೋಷ ಕೆಲೋಜಿಯವರು ಹಾಗೂ ತಾಲೂಕ ಸಂಚಾಲಕರಾದ ಮಹಮ್ಮದ ರಫಿಯವರು ಪಾದಯಾತ್ರೆಯ ರೂಪುರೇಷೆಗಳನ್ನು ತಿಳಿಸಿದರು, ರಾಜ್ಯ ಸಂಚಾಲಕರಾದ ಬಾಲಕೃಷ್ಣ ನಾಯ್ಡು ಅವರು ಪಾದಯಾತ್ರೆಗೆ ತಗಲುವ ಖರ್ಚುವೆಚ್ಚದ ಮಾಹಿತಿ ನೀಡಿದರು ಮತ್ತು ಎರಡನೇ ಪಾದಯಾತ್ರೆಯಲ್ಲಿ ಶ್ರಮಿಸಿದವರಿಗೆ ನೆನಪಿನ ಕಾಣಿಕೆಯನ್ನು ನೀಡಿದರು. ಈ ಸಭೆಯಲ್ಲಿ ಕಂಪ್ಲಿಯ ಖ್ಯಾತ ವೈದ್ಯರಾದ ಡಾ|| ಜಂಬುನಾಥಗೌಡ, ರವೀಂದ್ರನಾಥ, ವೈ. ಮಾಧವರೆಡ್ಡಿ ಸಿಂಧನೂರಿನ ಈರೇಶ ಇಲ್ಲೂರು ವಕೀಲರು, ಬಳ್ಳಾರಿಯ ಬಿ. ರಾಮಕೃಷ್ಣ, ರಾಯಚೂರಿನ ಅನಿತಾ ನವಲಕಲ್, ಶಿರವಾರದ ನಾಗೇಶ್ವರ ನಾಯಕ ಹಾಗೂ ಗಂಗಾವತಿಯ ಹಿರಿಯರಾದ ತಿಪ್ಪೇರುದ್ರಸ್ವಾಮಿ ವಕೀಲರು, ಡಾ. ಶರಣಬಸಪ್ಪ ಕೋಲ್ಕಾರ, ಪ್ರೊ. ಬಿ.ಸಿ ಐಗೋಳ, ಸುರೇಶ ಸಿಂಗನಾಳ, ಆಂಜನೇಯ ಟಿ., ರೋಟರಿಕ್ಲಬ್ ಅಧ್ಯಕ್ಷರಾದ ಜಗದೇಶ ಅಂಗಡಿ ಹಾಗೂ ಕೊಪ್ಪಳ ಜಿಲ್ಲಾ ನಿರ್ಮಲ ತುಂಗಭದ್ರಾ ಸಮಿತಿಯ ಪ್ರಮುಖರಾದ ಸರ್ವೇಶ್ ವಸ್ತçದ್, ಮಂಜುನಾಥ ಕಟ್ಟಿಮನಿ, ವಿನಯ್ ಪಾಟೀಲ್, ಪ್ರಹ್ಲಾದ್ ಕುಲಕರ್ಣಿ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಜಿಲ್ಲಾಧ್ಯಕ್ಷರಾದ ರಾಘವೇಂದ್ರ ತೂನಾ, ಅರ್ಜುನ್, ಸೌಮ್ಯ, ಹನುಮೇಶ ಬಾಯಿಕಟ್ಟಿ, ಶಾಹೀನ್ ಕೌಸರ್, ಜಯಾ, ಸುಮಂಗಲಾ, ಕಸಾಪ ಅಧ್ಯಕ್ಷರಾದ ರುದ್ರೇಶ ರ‍್ಹಾಳ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ತಾಲೂಕಾಧ್ಯಕ್ಷರು ಹಾಗೂ ನಿರ್ಮಲ ತುಂಗಭದ್ರಾ ಅಭಿಯಾನದ ಪ್ರಮುಖರಾದ ವಿಷ್ಣು ಜೋಷಿಯವರು ವಂದನಾರ್ಪಣೆ ಸಲ್ಲಿಸಿದರು.ಮಾಹಿತಿಗಾಗಿ:ಡಾ|| ಶಿವಕುಮಾರ ಮಾಲಿಪಾಟೀಲ್ಜಿಲ್ಲಾ ಸಂಚಾಲಕರು, ನಿರ್ಮಲ ತುಂಗಭದ್ರಾ ಅಭಿಯಾನಮೊ.ನಂ: ೯೪೪೮೩೦೨೭೭೫