ಪರಿಶಿಷ್ಟ ವರ್ಗದ ಯೋಜನೆಗಳು ಮನೆ ಬಾಗಿಲಿಗೆ ಮಾಹಿತಿ …

ಕಾರಟಗಿ:. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಅನುಷ್ಠಾನ ಮಾಡುತ್ತಿರುವ ಪರಿಶಿಷ್ಟ ವರ್ಗದ ಕಾರ್ಯಕ್ರಮಗಳ ಮಾಹಿತಿಯನ್ನು ಗ್ರಾಮ ಹಾಡಿಗಳಿಗೆ ತಲುಪಿಸುತ್ತಿದ್ದು, ಕಾರ್ಯಕ್ರಮದ ಪ್ರಯೋಜನೆಯನ್ನು ಪರಿಶಿಷ್ಟ ವರ್ಗದ ಜನರು ಪಡೆದುಕೊಳ್ಳಬೇಕೆಂದು ಭಾರತಿಯ ರಿಜರ್ವ ಬ್ಯಾಂಕ್ ನ ಆರ್ಥಿಕ ಸಾಕ್ಷಾರತ ಕಾರ್ಯಕ್ರಮದ ಪ್ರತಿನಿಧಿಯಾದ ಶ್ರೀ ಟಿ ಆಂಜನೇಯ ತಿಳಿಸಿದರು.ಕಾರಟಗಿ ತಾಲೂಕಿನ ಜೂರಟಗಿ ಗ್ರಾಮದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ ಹಾಗೂ ತಾಲೂಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ “ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಯಕ್ರಮಗಳು ರಾಷ್ಟ್ರೀಕೃತ ಬ್ಯಾಂಕ್ ಗಳ ಸಂಯೋಗದಲ್ಲಿ ಅನುಷ್ಠಾನಗೊಳ್ಳುತ್ತಿವೆ. ಬಹಳಷ್ಟು ಬುಡಕಟ್ಟು ಜನರು ಇಂದಿಗೂ ಸಹ ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆಗಳನ್ನು ತೆರೆದಿಲ್ಲ ಆಯುಷ್ಮಾನ್ ಭಾರತ ಕಾರ್ಡ್, ಮಣ್ಣಿನ ಆರೋಗ್ಯದ ಕಾರ್ಡ್ ಗಳು ಉಚಿತವಾಗಿ ದೊರೆಯುತ್ತಿದ್ದರು ಸಹ ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದಿರುವುದಿಲ್ಲ. ಈ ದೆಸೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾರ್ಯಕ್ರಮಗಳ ಮಾಹಿತಿಯನ್ನು ನೀಡಲು ವಿವಿಧಅನುಷ್ಠಾನ ಇಲಾಖೆಗಳನ್ನು ಗ್ರಾಮಗಳಿಗೆ ಕಳುಹಿಸುತ್ತಿದ್ದು, ಈ ಕಾರ್ಯದಲ್ಲಿ ಜನರು ಮುಂದೆಬಂದು ಮಾಹಿತಿಯನ್ನು ಪಡೆಯಬೇಕೆಂದು ಹೇಳಿದರು.ಕೃಷಿ ಅಧಿಕಾರಿಗಳಾದ ನಾಗರಾಜ ಕೇಂದ್ರ ಸರ್ಕಾರದ ಕೃಷಿ ಸಂಚಾಯಿ, ಕೃಷಿ ಹೊಂಡ ಮತ್ತು ಕೃಷಿ ಯಂತ್ರದಾರೆ ಕಾರ್ಯಕ್ರಮಗಳಲ್ಲಿ ಪರಿಶಿಷ್ಟ ವರ್ಗದ ಜನರಿಗೆ ಶೇ 90ರಷ್ಟು ಸಹಾಯಧನವಿದ್ದು, ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಮುದಾಯ ಆರೋಗ್ಯ ಅಧಿಕಾರಿಗಳಾದ ಹನುಮಂತಪ್ಪ ಗುರಿಕಾರ ರವರು ಜೂನ್ ಮಾಹೆಯಲ್ಲಿ ಮಳೆಗಾಲ ಪ್ರಾರಂಭವಾಗುವುದರಿಂದ ಜನರಿಗೆ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆ ಇರುತ್ತದೆ ಆದ್ದರಿಂದ ಜನರು ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ಚಿಕಿತ್ಸೆಯನ್ನು ಪಡೆಯಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಹುಲಿಗೆಮ್ಮ ಗಂಡ ವೀರೇಶ ತಳವಾರ ಉಪಾಧ್ಯಕ್ಷರು, ಗ್ರಾಮ ಪಂಚಾಯತ್, ಮರ್ಲಾನಹಳ್ಳಿ ರವರು ವಹಿಸಿಕೊಂಡಿದ್ದರು. ಗ್ಯಾನನಗೌಡ, ತಾಲೂಕ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಗಂಗಾವತಿ, ರಮೇಶ, ಕಛೇರಿ ಅದೀಕ್ಷಕರು, ತಾಲೂಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಗಂಗಾವತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂಧಿಗಳು ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
