ಲೋಕಾಯುಕ್ತ ಸಂಸ್ಥೆಯಲ್ಲಿ ಸುಧಾರಣೆಗೆ ಕ್ರಮಕೈಗೊಳ್ಳಲು ಕೆ.ಆರ್.ಎಸ್ ಪಕ್ಷದಿಂದ ಮನವಿಲೋಕಾಯುಕ್ತಕ್ಕೆ ಪ್ರಾಮಾಣಿಕ ಅಧಿಕಾರಿಗಳ ನಿಯೋಜನೆಯಾಗಲಿ: ಎ.ಹೆಚ್.ಹನುಮಂತಪ್ಪ…

ಲೋಕಾಯುಕ್ತ ಸಂಸ್ಥೆಯಲ್ಲಿ ಸುಧಾರಣೆಗೆ ಕ್ರಮಕೈಗೊಳ್ಳಲು ಕೆ.ಆರ್.ಎಸ್ ಪಕ್ಷದಿಂದ ಮನವಿಲೋಕಾಯುಕ್ತಕ್ಕೆ ಪ್ರಾಮಾಣಿಕ ಅಧಿಕಾರಿಗಳ ನಿಯೋಜನೆಯಾಗಲಿ: ಎ.ಹೆಚ್.ಹನುಮಂತಪ್ಪ…

ಕೊಪ್ಪಳ: ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯು ಕೂಡಲೇ ಸುಧಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಕೊಪ್ಪಳ ಜಿಲ್ಲಾ ಲೋಕಾಯುಕ್ತ ಕಚೇರಿಗೆ ಭೇಟಿನೀಡಿ ಮನವಿಯನ್ನು ಸಲ್ಲಿಸಲಾಯಿತು.ಕೆ.ಆರ್.ಎಸ್ ಪಕ್ಷದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಎ.ಹೆಚ್.ಹನುಮಂತಪ್ಪ ನೇತೃತ್ವದಲ್ಲಿ ಶನಿವಾರದಂದು ಕೊಪ್ಪಳದ ಲೋಕಯುಕ್ತ ಕಚೇರಿಗೆ ಆಗಮಿಸಿ ಪಕ್ಷದ ಎಲ್ಲಾ ಸದಸ್ಯರು ಲೋಕಾಯುಕ್ತರಾದ ಬಿಎಸ್ ಪಾಟೀಲ್ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ವಸಂತ ಕುಮಾರ್ ಆರ್. ಅವರಿಗೆ ಸಲ್ಲಿಸಿದರು.ನಂತರ ಮಾತನಾಡಿದ ಕೆ.ಆರ್.ಎಸ್. ಪಕ್ಷದ ಜಿಲ್ಲಾಧ್ಯಕ್ಷ ಎ.ಹೆಚ್.ಹನುಮಂತಪ್ಪ, ಲೋಕಾಯುಕ್ತಕ್ಕೆ ಪ್ರಾಮಾಣಿಕ ಅಧಿಕಾರಿಗಳನ್ನು ನಿಯೋಜಿಸಬೇಕು, ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ಮಾಡುವ ಅಥವಾ ಕ್ರಮ ಜರುಗಿಸುವ ಪ್ರಾಮಾಣಿಕ ಅಧಿಕಾರಿಗಳನ್ನು ಭ್ರಷ್ಟ- ಪ್ರಭಾವಿಗಳಿಂದ ರಕ್ಷಿಸಬೇಕು. ಲೋಕಾಯುಕ್ತವು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಏನೆಲ್ಲಾ ಸುಧಾರಣೆಗಳನ್ನು ಸಂಸ್ಥೆಯಲ್ಲಿ ಕೂಡಲೇ ತರಬೇಕೆಂದು ಲೋಕಾಯುಕ್ತರಲ್ಲಿ ನಮ್ಮ ಮನವಿಯಾಗಿದೆ ಎಂದರು.ಈ ಬಗ್ಗೆ ಲೋಕಾಯಕ್ತ ಎಸ್.ಪಿ. ಸತೀಶ್ ಎಸ್. ಚಿಟಗುಪ್ಪಿ ಪ್ರತಿಕ್ರಿಯಿಸಿ, ಮನವಿ ಕುರಿತು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಲೋಕಾಯಕ್ತ ಡಿವೈ.ಎಸ್.ಪಿ. ವಸಂತಕುಮಾರ್ ಆರ್ ಮಾತನಾಡಿ, ಕೆ.ಆರ್.ಎಸ್‌. ಪಕ್ಷ ನಮಗೆ ಈ ಮುಂಚೆ ನೀಡಿರುವ ದೂರುಗಳಿಗೆ ಸಂಬಂಧಿಸಿದಂತೆ ಒಂದಷ್ಟು ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದೇವೆ. ಹಿರೇಸಿಂದೋಗಿಯ ಮರಳು ಗಣಿಗಾರಿಕೆ ದಾಳಿ ಕೂಡ ಅದರಲ್ಲೊಂದು. ನಮ್ಮ ಕಛೇರಿ ಮಟ್ಟದಲ್ಲಿ ಆಡಳಿತ ಸುಧಾರಣೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ಸಾರಂಗಿ, ಉಪಾಧ್ಯಕ್ಷ ಗಣೇಶ್ ಅಮೃತ್, ರಾಜ್ಯ ಯುವ ಘಟಕ ಸಂಘಟನಾ ಕಾರ್ಯದರ್ಶಿ ಸೋಮನಾಥ ಕುಂಬಾರ್, ರಾಜ್ಯ ರೈತ ಘಟಕ ಕಾರ್ಯದರ್ಶಿ ಕನಕಪ್ಪ ಹುಡೇಜಾಲಿ, ಕಾರ್ಯದರ್ಶಿ ಗಣಪತಿ ಶಿಂಧೆ ಹಾಗೂ ಮೆಹಬೂಬ್, ಕಲ್ಲಯ್ಯ, ವೀರೇಶ್, ದೇವೇಂದ್ರಗೌಡ, ಚಿದಾನಂದಮೂರ್ತಿ ಸೇರಿದಂತೆ ಮತ್ತಿತರರಿದ್ದರು.

Leave a Reply

Your email address will not be published. Required fields are marked *