ರಥಸಪ್ತಮಿ ವಿಶೇಷ ಕನಕಚಲಪತಿ ರಥಕ್ಕೆ ಪೂಜೆ ಸಲ್ಲಿಕೆ ….

ಕನಕಗಿರಿ ಪಟ್ಟಣದ ಆರಾಧ್ಯ ದೈವಾಗ ಶ್ರೀ ಕನಕಾಚಲ ಲಕ್ಷ್ಮೀನಾರಸಿಂಹ ದೇವಾಲಯದಲ್ಲಿ ಇಂದು ರಥಸಪ್ತಮಿಯ ವಿಶೇಷವಾಗಿ ಪೂಜೆ ಸಲ್ಲಿಸಿ ಕನಕಾಚಲಪತಿಯ ರಥಕ್ಕೆ ತಹಶಲ್ದಾರ್ ವಿಶ್ವನಾಥ್ ಮುರುಡಿ ಅವರ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ಶ್ರೀ ಕನಕಚಲ ಲಕ್ಷ್ಮೀನಾರಸಿಂಹ ಜಾತ್ರಿಯ ಪ್ರಾರಂಭದ ಒಂದು ತಿಂಗಳ ಮುಂಚೆ ರಥಕ್ಕೆ ಪೂಜೆ ಸಲ್ಲಿಸಿ ರಥವನ್ನು ಸಜ್ಜುಗೊಳಿಸಲಾಗುವುದು ಹಿಂದು ಸಂಪ್ರದಾಯದಲ್ಲಿ ರಥ ಸಪ್ತಮಿ ಒಂದು ಪ್ರಮುಖ ಹಬ್ಬವಾಗಿದೆ. ಇದು ಸೂರ್ಯದೇವನನ್ನ ಆರಾಧಿಸುವ ಹಬ್ಬ. ಈ ಹಬ್ಬವನ್ನು ಮಾಘ ಮಾಸದ ಶುಕ್ಲ ಪಕ್ಷದ ಏಳನೇ ದಿನದಂದು ಆಚರಿಸಲಾಗುತ್ತದೆ. ಹೀಗಾಗಿ ಮಾಘ ಸಪ್ತಮಿ ಎಂದೂ ಕರೆಯಲಾಗುತ್ತದೆ. ಇದು ಭಗವಾನ್ ಸೂರ್ಯದೇವ ಹುಟ್ಟಿದ ದಿನ ಅಂದರೆ ಸೂರ್ಯ ಜಯಂತಿಯಾಗಿದೆ. ರಥ ಸಪ್ತಮಿಯ ದಿನದಂದು ಸೂರ್ಯ ದೇವರು ತನ್ನ, ಏಳು ಕುದುರೆಗಳಿಂದ ಎಳೆಯಲ್ಪಡುವ ರಥದ ಮೇಲೆ ಕುಳಿತು, ಉತ್ತರ ದಿಕ್ಕಿಗೆ ಪ್ರಯಾಣ ಆರಂಭಿಸುತ್ತಾನೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ರಥ ಸಪ್ತಮಿ ಹಬ್ಬವು ಚಳಿಗಾಲದ ಅಂತ್ಯ ಮತ್ತು ವಸಂತ ಕಾಲದ ಆರಂಭವನ್ನ ಸೂಚಿಸುತ್ತದೆ. ಈ ದಿನ ಸೂರ್ಯನನ್ನ ಪೂಜಿಸಿದರೆ ಅತ್ಯಂತ ಒಳಿತು ಆಗುತ್ತದೆ. ಸೂರ್ಯನಾರಾಯಣನು ಉತ್ತರಾಯಣ ಪುಣ್ಯಕಾಲದಲ್ಲಿ ರಥವನ್ನಿರಿ ದಕ್ಷಿಣದಿಂದ ಉತ್ತರಕ್ಕೆ ಹೋಗುವನು ಎಂಬ ನಂಬಿಕೆಯು ಇದೆ.ರಥ ಸಪ್ತಮಿ ಎಂದರೆ, ಆಗಲೇ ಹೇಳಿದಂತೆ ಸೂರ್ಯ ಜನಿಸಿದ ದಿನ. ಹುಟ್ಟಿದಾಗಿನಿಂದಲ ಇಡೀ ಜಗತ್ತಿಗೇ ಬೆಳಕು ನೀಡುತ್ತಿರುವ ಸೂರ್ಯ ದೇವನಿಗೆ ರಥ ಸಪ್ತಮಿಯ ದಿನದಂದು ನಾವೆಲ್ಲರೂ ಧನ್ಯವಾದ ಅರ್ಪಿಸಬೇಕು. ರಥ ಸಪ್ತಮಿಯ ದಿನದಿಂದ ವಾತಾವರಣದಲ್ಲೂ ಸಾಕಷ್ಟು ಬದಲಾವಣೆ ಆಗುತ್ತದೆ.ಈ ಸಂದರ್ಭದಲ್ಲಿ ಊರಿನ ಗುರುಹಿರಿಯರು ಹಾಗೂ ದೇವಸ್ಥಾನ ಕಮಿಟಿ ಸದಸ್ಯರು ಹಾಗೂ ಭಜನಾ ಮಂಡಳಿಯು ಉಪಸ್ಥಿತರಿದ್ದರು.

*ರಮೇಶ್ ಈಳಿಗೇರ್ ವಾಲ್ಮೀಕಿ ಅಸ್ತ್ರ ನ್ಯೂಸ್ ಕನಕಗಿರಿ ತಾಲೂಕಿನ ವರದಿಗಾರ 9035332032*
