ತುಂಗಭದ್ರಾ ಡ್ಯಾಂ ಕ್ರಸ್ಟಗೇಟು ಕಾಮಗಾರಿ ಬೇಗ ಆರಂಭವಾಗಲಿ:ಯಡ್ಲಪಲ್ಲಿ ಆನಂದರಾವ್.

ಗಂಗಾವತಿ: ರೈತರ ಜೀವನದಿ ತುಂಗಭದ್ರಾ ಡ್ಯಾಮಿನ ಕ್ರಸ್ಟ್ ಗೇಟ್ ಗಳು ಸಿಥಿಲಾವತಿಯಿಂದಾಗಿ ಈ ಬಾರಿ ಬೇಸಿಗೆ ಹಂಗಾಮಿನಲ್ಲಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಒದಗಿಸಲು ಆಗುತ್ತಿಲ್ಲ ಆದ್ದರಿಂದ ರಾಜ್ಯ ಸರ್ಕಾರ ತುಂಗಭದ್ರಾ ಬೋರ್ಡ್ ಕೂಡಲೇ ಕ್ರಸ್ಟ್ ಗೇಟ್ ದುರಸ್ತಿ ಮಾಡುವ ಕಾಮಗಾರಿಯನ್ನು ಆರಂಭಿಸುವಂತೆ ಬಿಜೆಪಿ ರೈತ ಮೋರ್ಚಾ ಮುಖಂಡ ಯಡ್ಲಪಲ್ಲಿ ಆನಂದ ರಾವ್ ಕಲ್ಗುಡಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರದ ನಿರ್ಲಕ್ಷದಿಂದಾಗಿ ರೈತರ ಜೀವನ ನಾಡಿ ತುಂಗಭದ್ರಾ ಡ್ಯಾಮಿನ ಕ್ರಸ್ಟ್ ಗೇಟ್ ಗಳು ಶಿಥಿಲಾವಸ್ತೆಗೊಂಡಿದ್ದರು. ಅವುಗಳನ್ನು ದುರಸ್ತಿ ಮಾಡದೆ ನಿರ್ಲಕ್ಷ್ಯ ಮಾಡಿದ್ದರಿಂದ ಪೂರ್ಣ ಪ್ರಮಾಣದಲ್ಲಿ ಈಗ ರಿಪೇರಿಗೆ ಬಂದಿವೆ. ಕೋಟ್ಯಾಂತರ ರೂಪಾಯಿ ಆದಾಯ ತರುವ ತುಂಗಭದ್ರಾ ಅಚ್ಚುಕಟ್ಟು ರೈತರು ಬೇಸಿಗೆ ಬೆಳೆಯನ್ನು ಕಳೆದುಕೊಳ್ಳುವ ಸ್ಥಿತಿ ಬಂದಿದೆ. ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ 12,000 ಹೆಕ್ಟರ್ ಭೂಮಿ ಪ್ರತಿಬಾರಿ ಬಿತ್ತನೆ ಆಗುತ್ತದೆ. ಇದರಿಂದ ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಕೋಟ್ಯಾಂತರ ರೈತರು ಬದುಕು ನಡೆಸಿದ್ದಾರೆ. ಕೂಲಿ ಕಾರ್ಮಿಕರು ಬದುಕು ನಡೆಸಿದ್ದಾರೆ. ರಾಜ್ಯ ಸರ್ಕಾರ ನಿರ್ಲಕ್ಷದ ಪರಿಣಾಮವಾಗಿ ಈ ಬಾರಿ ಉತ್ತಮ ಮಳೆಯಾಗಿದ್ದರು ಆ ನೀರನ್ನು ರೈತರ ಭೂಮಿಗೆ ತಲುಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಆದ್ದರಿಂದ ಕೂಡಲೇ ಎಲ್ಲಾ ಗೇಟ್ಗಳನ್ನು ದುರಸ್ತಿ ಮಾಡಬೇಕು. ಜೊತೆಗೆ ಒಂದು ಎಕರೆಗೆ 25,000 ರೂ.ಗಳನ್ನು ರೈತರಿಗೆ ಪರಿಹಾರವನ್ನು ರಾಜ್ಯ ಸರ್ಕಾರ ಕೂಡಲೇ ಕೊಡಬೇಕು. ಯಾವುದೇ ಕಾರಣಕ್ಕೂ ತುಂಗಭದ್ರ ಬೋರ್ಡ್ ಕೇಂದ್ರ ಸರ್ಕಾರ ಇವುಗಳ ಮೇಲೆ ಹಾಕದೆ ರಾಜ್ಯ ಸರ್ಕಾರ ರೈತ ಪರ ಕಾಳಜಿ ಉಳ್ಳ ಸರ್ಕಾರವಾಗಿದ್ದರೆ ರೈತರಿಗೆ ಪರಿಹಾರವನ್ನು ನೀಡಬೇಕು.ಈಗಾಗಲೇ ಬಿಜೆಪಿ ರೈತ ಮೋರ್ಚ ಅಚ್ಚುಕಟ್ಟು ಪ್ರದೇಶದ ರಾಯಚೂರು,ಕೊಪ್ಪಳ, ಬಳ್ಳಾರಿ, ವಿಜಯನಗರ ಈ ಜಿಲ್ಲೆಗಳಲ್ಲಿ ರೈತರಿಗೆ ಪರಿಹಾರ ಕೊಡುವ ಕುರಿತು ಹೋರಾಟವನ್ನು ರೂಪಿಸಿದ್ದು ಗ್ರಾಮ ಪಂಚಾಯಿತಿವಾರು ಮಂಡಲವಾರು ಹೋರಾಟವನ್ನು ಶೀಘ್ರದಲ್ಲಿ ಆರಂಭ ಮಾಡಲಾಗುತ್ತದೆ ಎಂದು ಯಡ್ಲಪಲ್ಲಿ ಆನಂದ್ ರಾವ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
