ಮಲ್ಲಾಪುರ್. ಶ್ರೀ ಆಂಜನೇಯ ಸ್ವಾಮಿ ನೂತನರಥೋತ್ಸವದ ಜೋಡಣೆಗೆ ಶ್ರೀ ವಿದ್ಯಾ ದಾಸ ಬಾಬಾಜಿ ವಿಶೇಷ ಪೂಜೆ….

ಗಂಗಾವತಿ.. ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಸದ್ಭಕ್ತರ ಸಹಕಾರದಿಂದ ಬಹು ದಿನಗಳಿಂದ ಕಂಡಿದ್ದ ಶ್ರೀ ಆಂಜನೇಯ ಸ್ವಾಮಿ ರಥೋತ್ಸವದ ನಿರ್ಮಾಣದ ಕನಸು ನನಸಾಗಿದೆ. ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಟ್ರಸ್ಟ್ ಮಲ್ಲಾಪುರ್ ರವಿವಾರದಂದು ನೂತನ ರಥೋತ್ಸವದ ಜೋಡಣೆಗೆ ಗಂಗೆ ಪೂಜೆ ಹಾಗೂ ರಥೋತ್ಸವದ ಜೋಡಣೆಯ ಕಾರ್ಯಕ್ಕೆ ವಿಶೇಷ ಪೂಜೆ ಸಲ್ಲಿಸಿದರು..

ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಮಾಜಿ ಕಾಡ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅಮರ ಜ್ಯೋತಿ ನರಸಪ್ಪ ಎಸ್ ಬಿ ಹಿರೇಮಠ ಆದಾಯ ಸ್ವಾಮಿ ಶಾಂತಮ್ಮ ಮಲ್ಲಿಕಾರ್ಜುನ್ ಕಷ್ಟಪಟಿಲ್ ಸುಕ್ಕಪ್ಪ ಲಿಂಗರಾಜ ಮಂಜುನಾಥ್ ಕಲಾಲ್ ಸೇರಿದಂತೆ ಇತರರು ಮಾತನಾಡಿ ಡಿಸೆಂಬರ್ 2ರಂದು ನೂತನ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಲೋಕಾರ್ಪಣೆ ಗೋ ಳ್ಳಲಿದ್ದು ಪ್ರಯುಕ್ತ ಡಿಸೆಂಬರ್ 1 ರಿಂದ 3 ರವರೆಗೆ ಲೋಕಕಲ್ಯಾಣಾರ್ಥಕವಾಗಿ ಶ್ರೀ ಆಂಜನೇಯ ಸ್ವಾಮಿಗೆ ಮೂಲ ಮಂತ್ರ ಹೋಮ ಪವ ಮಾನ ಹೋಮ ರಾಮ ತಾರಕ ಹೋಮ ಸೇರಿದಂತೆ ವೈವಿಧ್ಯಮಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಕೊಪ್ಪಳ ಗವಿಸಿದ್ದೇಶ್ವರ ಮಠದ ಪೂಜ್ಯರು ಹಂಪಿ ವಿದ್ಯಾರಣ್ಯ ಪೀಠದ ಭಾರತಿ ಮಹಾಸ್ವಾಮಿಗಳು ಮಹಾಂತ ಶ್ರೀ ವಿದ್ಯಾ ದಾಸ ಬಾಬಾಜಿ ನಾಡಿನ ಹರ ಗುರು ಮೂರ್ತಿಗಳು ದಿವ್ಯ ಸಾನಿಧ್ಯದಲ್ಲಿ ಜರುಗಲಿವೆ ಎಂದು ಹೇಳಿದರು.

